ದಾವಣಗೆರೆಯ ನ್ಯಾಮತಿ ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಶಾಸಕ ರೇಣುಕಾಚಾರ್ಯ ಅವರಿಗೆ ಹೋರಿ ತೀವಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಶುಕ್ರವಾರ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ದೀಪಾವಳಿ ಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಶಾಸಕರನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಹೋರಿಯೊಂದು ಜನರತ್ತ ನುಗ್ಗಿದೆ.
ಈ ವೇಳೆ ಜನ ಗಾಬರಿಗೊಂಡರು. ರೇಣುಕಾಚಾರ್ಯ ಸೇರಿ ಹಲವಾರು ಮಂದಿ ನೆಲಕ್ಕೆ ಕುಸಿದು ಬಿದ್ದರು.
ಘಟನೆಯಲ್ಲಿ ಶಾಸಕರ ಎಡಗೈ ಮತ್ತು ಎಡಕಾಲಿಗೆ ತರಚಿದ ಗಾಯಗಳಾಗಿವೆ.
Discussion about this post