ಬೆಂಗಳೂರು : ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಯಡಿಯೂರಪ್ಪ ಸೈಲೆಂಟ್ ಆಗಿದ್ದಾರೆ ಅಂದುಕೊಂಡ್ರೆ ತಪ್ಪಾಗಬಹುದು. ಅಧಿಕಾರದಿಂದ ಕೆಳಗಿಳಿದಿರುವ ಯಡಿಯೂರಪ್ಪ ಇದೀಗ ಮಗನನ್ನು ಮಂತ್ರಿ ಮಾಡುವ ನಿಟ್ಟಿನಲ್ಲಿ ಬ್ಯುಸಿಯಾಗಿದ್ದಾರೆ. ವಿಜಯೇಂದ್ರನನ್ನು ಹೇಗಾದರೂ ಮಂತ್ರಿ ಮಾಡಲೇಬೇಕು ಅನ್ನುವುದು ಅವರ ಹೋರಾಟ.
ಈ ನಡುವೆ ಪಕ್ಷ ಸಂಘಟನೆಗೆ ಮುಂದಾಗಿರುವ ಯಡಿಯೂರಪ್ಪ ಗಣೇಶ ಚತುರ್ಥಿಯ ಬಳಿಕ ರಾಜ್ಯ ಪ್ರವಾಸ ನಡೆಸಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಯಾವುದೇ ಹುದ್ದೆ ಪಡೆಯಲು ನಿರಾಕರಿಸಿರುವ ಅವರು ತಮ್ಮ ಸಾಮರ್ಥ್ಯ ತೋರಿಸಲು ನಿರ್ಧರಿಸಿದ್ದಾರೆ.
ತಮ್ಮ ತಾಕತ್ತು ತೋರಿಸಬೇಕು ಅನ್ನುವ ಉದ್ದೇಶದಿಂದಲೇ ಅವರು ಡೆಲ್ಲಿ ವರಿಷ್ಠರು ಕೊಟ್ಟಿದ್ದ ರಾಜ್ಯಪಾಲ ಆಫರ್ ಅನ್ನು ಕೂಡಾ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯ ಪ್ರವಾಸದ ಸಲುವಾಗಿಯೇ ಕಿಯಾ ಕಾರ್ನಿವಲ್ ಹೆಸರಿನ ಕಾರು ಖರೀದಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಇದೇ ಕಾರಿನಲ್ಲಿ ಅವರು ರಾಜ್ಯ ಪ್ರವಾಸವನ್ನು ಕೂಡಾ ನಡೆಸಲಿದ್ದಾರೆ ಎನ್ನಲಾಗಿದೆ.
ಹಿಂದೆ ಆಗಿದ್ರೆ ಮುರುಗೇಶ್ ನಿರಾಣಿ ಯಡಿಯೂರಪ್ಪ ಅವರಿಗೆ ಕಾರು ಕೊಡಿಸುತ್ತಿದ್ರು, ನಿರಾಣಿಯವರಿಗೆ ಯಡಿಯೂರಪ್ಪ ಮೇಲೆ ಎಷ್ಟು ಪ್ರೀತಿ ಅಂದ್ರೆ ಏನೇ ಖರೀದಿ ಮಾಡಿದ್ರು, ನನಗೊಂದು ಸಾಹೇಬರಿಗೊಂದು ಎಂದು ಖರೀದಿ ಮಾಡುತ್ತಿದ್ದರು. ಆದರೆ ಯಾವಾಗ ಮಂತ್ರಿ ಸ್ಥಾನ ಸಿಗಲಿಲ್ಲವೋ ನಿರಾಣಿ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ.
Discussion about this post