ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿರ್ಗಮನಕ್ಕೆ ಮುಹೂರ್ತ ನಿಗದಿಯಾಗಿದೆ. ಗೌರವಯುತವಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕೇಸರಿ ಹೈಕಮಾಂಡ್ ನಿರ್ಧರಿಸಿದೆ ಅನ್ನುವ ಗಾಳಿ ಸುದ್ದಿಯ ನಡುವೆ ಮುಂದಿನ ಮುಖ್ಯಮಂತ್ರಿ ಯಾರು ಅನ್ನುವ ಕುರಿತಂತೆ ಗಂಭೀರ ಚರ್ಚೆಗಳು ಪ್ರಾರಂಭವಾಗಿದೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಬಿಜೆಪಿ ಪಡಸಾಲೆಯಲ್ಲಿ ಬೆಂಕಿ ಹಚ್ಚಿದೆ. ತುಳು ಭಾಷೆಯಲ್ಲಿರುವ ಆಡಿಯೋದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತ, ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್,ಈಶ್ವರಪ್ಪ ಟೀಂ ಅನ್ನು ಅನ್ನು ಸಂಪುಟದಿಂದ ತೆಗೆಯಲಾಗುವುದು ಅನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ.
ಒಂದು ವೇಳೆ ಈ ಆಡಿಯೋ ಅಸಲಿಯೇ ಆಗಿದ್ರೆ ಯಡಿಯೂರಪ್ಪ ಅವರ ಪದಚ್ಯುತಿ ಪಕ್ಕಾ. ಜೊತೆಗೆ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಅನ್ನುವುದು ಕೂಡಾ ಖಚಿತವಾದಂತೆ.
ಯಾರೇ ಬಂದರೂ ನಮಗೆ ಬೇಕಾದವರೇ ಆಗಿರಲಿದ್ದು ಮೂರು ಜನರ ಹೆಸರು ಹೈಕಮಾಂಡ್ ಗಮನದಲ್ಲಿದೆ. ಇಲ್ಲಿನವರೇ ಅಲ್ಲ ಡೆಲ್ಲಿಯಿಂದ ಬರ್ತಾರೆ ಎಂದಿರುವ ನಳಿನ್ ಕುಮಾರ್ ಕಟೀಲ್, ಭಯಪಡಬೇಕಾಗಿಲ್ಲ ಅಂದಿದ್ದಾರೆ.
ಆಡಿಯೋದಲ್ಲಿ ಏನಿದೆ.
ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಮ್ನ್ನೇ ತೆಗೆಯೋದು. ಪೂರ್ತಿ ಹೊಸ ಟೀಂ ಮಾಡುತ್ತಿದ್ದೇವೆ… ಯಾರ ಹತ್ರವೂ ಇನ್ನು ಹೇಳಲು ಹೋಗಬೇಡಿ. ಈಗ ಯಾರಿಗೂ, ಸದ್ಯಕ್ಕೆ ಯಾರಿಗೂ ಹೇಳಿ ಕೊಡಬೇಡಿ.
ಇಲ್ಲ, ಹೇಳಲು ಹೋಗಬೇಡಿ
ಏನೂ ತೊಂದರೆ ಇಲ್ಲ. ಹೆದರಿಕೊಳ್ಳಬೇಡಿ, ಇದ್ದೇವೆ. (ನಾವಿದ್ದೇವೆ)
ಏನೂ ಹೆದರಿಕೊಳ್ಳಬೇಡಿ, ಯಾರಾದರೂ, ಇನ್ನು ನಮ್ಮ ಕೈಯಲ್ಲೇ…
ಮೂರು ಹೆಸರು ಇದೆ. ಇದರಲ್ಲಿ ಯಾವುದಾದರೂ ಆಗುವ ಸಾಧ್ಯತೆ ಇದೆ.
ಇಲ್ಲ, ಇಲ್ಲ, ಇಲ್ಲಿನವರನ್ನು ಯಾರನ್ನೂ ಮಾಡುವುದಿಲ್ಲ. ಡೆಲ್ಲಿಯಿಂದಲೇ ಆಗ್ತಾರೆ
Discussion about this post