ರಾಜ್ಯದಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಂತೆ ಕಾರ್ಯನಿರ್ವಹಿಸುತ್ತಿದ್ದ ಸಿಎಂ ಯಡಿಯೂರಪ್ಪ ಸಂಪುಟ ಕೊನೆಗೂ ವಿಸ್ತರಣೆಯಾಗಲಿದೆ.
Buy Mi LED TVs starting from Rs.12499
ಸೋಮವಾರ ಅಗಸ್ಟ್ 19 ರಂದು ಸಂಪುಟ ವಿಸ್ತರಣೆ ನಡೆಸಲು ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಆದರೆ ಈ ಬಾರಿ ಯಾರೆಲ್ಲಾ ಸಚಿವರಾಗಬೇಕು ಅನ್ನುವುದನ್ನು ಯಡಿಯೂರಪ್ಪ ತೀರ್ಮಾನಿಸಿಲ್ಲ, ಬದಲಾಗಿ ಹೈಕಮಾಂಡ್ ಯಾರೆಲ್ಲಾ ಸಚಿವರಾಗಬೇಕು ಅನ್ನುವುದನ್ನು ತೀರ್ಮಾನಿಸಿದ್ದಾರೆ.
Buy Sony LED TVs starting from Rs.12499
ಲಭ್ಯ ಮಾಹಿತಿಗಳ ಪ್ರಕಾರ ಬೆಂಗಳೂರಿನ 3 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಶೇಷ ಅಂದ್ರೆ ಕೆಲವೇ ಕೆಲವು ಹಿರಿಯರಿಗೆ ಮಾತ್ರ ಮಣೆ ಹಾಕಲಾಗಿದ್ದು, ಹೊಸ ಮುಖಗಳಿಗೂ ಅವಕಾಶ ನೀಡಲಾಗಿದೆ.
ಲಭ್ಯ ಮಾಹಿತಿಗಳ ಪ್ರಕಾರ ಆರ್ ಅಶೋಕ್, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ. ಶ್ರೀರಾಮುಲು, ವಿ.ಸೋಮಣ್ಣ,ಅಶ್ವಥ್ ನಾರಾಯಣ ಮಲ್ಲೇಶ್ವರಂ ಕ್ಷೇತ್ರದ ಶಾಸಕ, ಸುರೇಶ್ ಕುಮಾರ್, ಮಾಧು ಸ್ವಾಮಿ, ಬಸವರಾಜ ಬೊಮ್ಮಾಯಿ, ಬಾಲಚಂದ್ರ ಜಾರಕಿಹೊಳಿ, ಶಿವನಗೌಡ ನಾಯಕ್, ಎಸ್ .ಅಂಗಾರ, ಶಶಿಕಲಾ ಜೊಲ್ಲೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕೊನೆಯ ಕ್ಷಣದಲ್ಲಿ ಹೆಸರುಗಳು ಹೆಚ್ಚು ಕಡಿಮೆಯಾದರೂ ಅಚ್ಚರಿ ಇಲ್ಲ.
Discussion about this post