ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ( BS Yediyurappa) ಅವರನ್ನು ಕೆಣಕಿ ತಪ್ಪು ಮಾಡಿದ್ರ..?
ಕಾರ್ಯಕರ್ತರ ಅಸಮಾಧಾನದಿಂದ ಕಂಗೆಟ್ಟಿರುವ ರಾಜ್ಯ ಬಿಜೆಪಿ ಮತ್ತೊಂದು ಹೊಸ ವಿವಾದವನ್ನು ಮೈ ಮೇಲೆ ಎಳೆದುಕೊಂಡಂತೆ ಕಾಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ತಪ್ಪನ್ನು ಈ ಬಾರಿ ಬಿಜೆಪಿ ಮಾಡಲಿದೆ. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಪರಸ್ಪರ ಕಾಲೆಳೆದುಕೊಂಡ ನೆಲಕಚ್ಚಿತ್ತು. ಈ ಬಾರಿ ಬಿಜೆಪಿ ಸರದಿ. ( BS Yediyurappa)
ಬೆಂಗಳೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಪೂರ್ಣಗೊಂಡ ಬೆನ್ನಲ್ಲೇ ಅಧ್ಯಕ್ಷರು ಬದಲಾಗುತ್ತಾರೆ, ಯಾರು ಅಧ್ಯಕ್ಷರಾಗಬೇಕು ಅನ್ನುವುದನ್ನು ಹೈಕಮಾಂಡ್ ನಿರ್ಧರಸಲಿದೆ ಅಂದಿದ್ದಾರೆ.
ಇದನ್ನು ಓದಿ : UT Khader: ಲಾರಿ, ಬಸ್ಸಾಯ್ತು… ಕಾರಿಳಿದು ಆಟೋ ಹತ್ತಿದ ಶಾಸಕ ಯುಟಿ ಖಾದರ್
ಇದಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲು ನನ್ನ ಅವಧಿ ಪೂರ್ಣಗೊಂಡಿದೆ ಅಂದವರಾರು. ನನ್ನ ಅವಧಿ ಪೂರ್ಣಗೊಂಡಿಲ್ಲ. ಯಡಿಯೂರಪ್ಪ ಅವರು ಅವಧಿ ಪೂರ್ಣಗೊಂಡ ನಂತರ ಅಂತ ಹೇಳಿದ್ದಾರೆ, ನನ್ನ ಅವಧಿಯೇ ಮುಗಿದಿಲ್ಲ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯುವ ಸಂದರ್ಭದಲ್ಲಿ ನಳಿನ್ ಅವರದ್ದು ಅನ್ನಲಾದ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋ ಬಗ್ಗೆ ಯಡಿಯೂರಪ್ಪ ಆಪ್ತರಿಗೆ ಈಗ್ಲೂ ಆಕ್ರೋಶವಿದೆ. ಇದೀಗ ಮತ್ತೆ ಯಡಿಯೂರಪ್ಪ ಅವರನ್ನು ನಳಿನ್ ಕೆಣಕಿದ್ರ ಅನ್ನುವ ಅನುಮಾನ ಅವರಿಗೆ ಕಾಡುತ್ತಿದೆ.
Discussion about this post