ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಸಿಕ್ಕಾಪಟ್ಟೆ ಸದ್ದು ಮಾಡಿವೆ. ಈ ಬಗ್ಗೆ ರಶ್ಮಿಕಾ ತಾಯಿ, ನಟ ರಕ್ಷಿತ್ ಶೆಟ್ಟಿ ತಮ್ಮದೇ ರೀತಿಯಲ್ಲಿ ಅಡ್ಡಗೋಡೆ ಮೇಲೆ ದೀಪವಿಟ್ಟು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಸೈಲೆಂಟ್ ಆಗಿದ್ದ ರಶ್ಮಿಕಾ ಮಂದಣ್ಣ ಮೌನ ಮುರಿದಿದ್ದಾರೆ. ತಮ್ಮ ಟ್ವಿಟರ್, ಫೇಸ್ಬುಕ್ ನಲ್ಲಿ ಬ್ರೇಕ್ಅಪ್ ಕುರಿತು ಬರೆದುಕೊಂಡಿದ್ದಾರೆ.
“ಬ್ರೇಕ್ಅಪ್ ವಿಚಾರವಾಗಿ ನನ್ನ ಬಗ್ಗೆ ಬಂದ ಲೇಖನ, ಕತೆ, ಕಾಮೆಂಟ್ಗಳನ್ನು ನೋಡಿದ್ದೇನೆ. ಹಲವು ರೀತಿಯಲ್ಲಿ ಟ್ರೋಲ್ ಮಾಡಲಾಗಿದೆ. ಇದನ್ನೆಲ್ಲ ಮೌನವಾಗಿಯೇ ಗಮನಿಸುತ್ತಿದ್ದೆ. ಇವೆಲ್ಲ ನನ್ನನ್ನು ಡಿಸ್ಟರ್ಬ್ ಮಾಡಿವೆ. ನನ್ನನ್ನು ಹೇಗೆಲ್ಲ ಬಿಂಬಿಸಲಾಯಿತು ಎಂದು ನೋಡಿದ್ದೇನೆ. ಆದರೆ ಅದ್ಯಾವುದಕ್ಕೂ ಯಾರನ್ನೂ ದೂಷಣೆ ಮಾಡುವುದಿಲ್ಲ. ಹಾಗೇ ಯಾವುದನ್ನೂ, ಯಾರನ್ನೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ
ನಾನಾಗಲೀ, ರಕ್ಷಿತ್ ಆಗಲಿ ಅಥವಾ ಇಂಡಸ್ಟ್ರಿಯಲ್ಲಿ ಯಾರೇ ಆಗಲಿ ಈ ವಿಚಾರವನ್ನು ಮುಂದುವರಿಸಿಕೊಂಡು ಹೋಗುವುದಿಲ್ಲ. ನಾಣ್ಯಗಳಿಗೆ ಎರಡು ಮುಖ ಇರುವಂತೆ ಎಲ್ಲ ಕತೆಗಳಿಗೂ ಎರಡು ಆಯಾಮ ಇರುತ್ತದೆ. ನಮ್ಮನ್ನು ನಮ್ಮ ಪಾಡಿಗೆ ಕೆಲಸ ಮಾಡಲು ಬಿಡಿ. ನಾನು ಕನ್ನಡ ಸಿನಿಮಾಗಳನ್ನೂ ಮಾಡುತ್ತೇನೆ. ಬೇರೆ ಭಾಷೆಯ ಚಲನಚಿತ್ರಗಳನ್ನೂ ನಟಿಸುತ್ತೇನೆ” ಎಂದು ಹೇಳಿದ್ದಾರೆ.
ರಶ್ಮಿಕಾ ಕೊಟ್ಟಿರುವ ಸ್ಟೇಟ್ ಮೆಂಟ್ ನೋಡಿದರೆ ಕಥೆ ಇನ್ನೂ ಇದೆ ಅನ್ನುವಂತಿದೆ. ಯಾಕೆಂದರೆ ಬ್ರೇಕ್ ಅಪ್ ಗೆ ಕಾರಣಗಳನ್ನು ಯಾರೊಬ್ಬರೂ ನೀಡುತ್ತಿಲ್ಲ. ಪ್ರೀತಿ, ನಿಶ್ಚಿತಾರ್ಥ ಸಂದರ್ಭದಲ್ಲಿ ಅಭಿಮಾನಿಗ ಅಶೀರ್ವಾದ, ಹರಕೆ, ಹಾರೈಕೆ ಅನ್ನುತ್ತಿದ್ದವರು, ಬ್ರೇಕ್ ಅಪ್ ಅನ್ನು ಮಾತ್ರ ಖಾಸಗಿ ವಿಚಾರ ಅನ್ನುತ್ತಿದ್ದಾರೆ.
ಹೌದು ಅದು ಖಾಸಗಿ ವಿಚಾರವೇ..ಆದರೆ ಸೆಲೆಬ್ರೆಟಿಗಳ ಲೈಫು ಅಂದ ಮೇಲೆ ಸಾವಿರ ಕಣ್ಣುಗಳು ಕುತೂಹಲದಿಂದ ನೋಡುತ್ತಿರುತ್ತದೆ. ಹಾಗಾಗಿ ಅದನ್ನು ಧಾರವಾಹಿಯಂತೆ ಎಪಿಸೋಡ್ ಮಾಡುವ ಬದಲು, ಕಿರು ಚಿತ್ರ ಅನ್ನುವಂತೆ ಖಡಕ್ಕ್ ಆಗಿ ಹೇಳಿ ಬಿಡಬೇಕು.
ಅಲ್ಲಿಗೆ ಮುಗಿದು ಹೋಗುತ್ತದೆ, ಇಲ್ಲವಾದರೆ, ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಗಾಯಕ್ಕೆ ಉಪ್ಪು ಸವರುವ ಕೆಲಸ ನಿರಂತರವಾಗಿರುತ್ತದೆ.
With all due respect!!?? pic.twitter.com/hgn6t6o78j
— Rashmika Mandanna (@iamRashmika) September 17, 2018
Discussion about this post