ವಾಷಿಂಗ್ಟನ್: ಬೊಲಿವಿಯಾದ ವಾಯುಪಡೆಯ ವಿಮಾನ (Bolivian Airforce Plane)ವೊಂದು ಅಮೆಜಾನ್ ಅರಣ್ಯದಲ್ಲಿ ( Amazon Forest ) ಪತನವಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ.
ದಕ್ಷಿಣ ಅಮೆರಿಕಾದ ಬೊಲಿವಿಯಾದ ಈಶಾನ್ಯದಲ್ಲಿರುವ ಬೆನಿ ಪ್ರದೇಶದ ಅಮೆಜಾನ್ ಕಾಡಿನಲ್ಲಿ ಶನಿವಾರ ಈ ದುರಂತ ಸಂಭವಿಸಿದೆ. ಬೊಲಿವಿಯಾ ಆರೋಗ್ಯ ಸಚಿವಾಲಯದ ಡೆಂಗ್ಯೂ – ಚಿಕೂನ್ಗುನ್ಯಾ ನಿಯಂತ್ರಣ ಕಾರ್ಯಕ್ರಮದ ನಾಲ್ವರು ಆರೋಗ್ಯಾಧಿಕಾರಿಗಳನ್ನು ರಿಬೆರಾಲ್ಟಾದಿಂದ ಕೋಬಿಜಾಗೆ ಈ ವಿಮಾನದಲ್ಲಿ ಕರೆದೊಯ್ಯಲಾಗುತ್ತಿತ್ತು.
ವಿಮಾನ ಪತನಗೊಂಡ ಕಾರಣ ಇಬ್ಬರು ಸೇನಾ ಪೈಲಟ್ಗಳು ಹಾಗೂ ನಾಲ್ವರು ಆರೋಗ್ಯಾಧಿಕಾರಿಗಳು ಮೃತಪಟ್ಟಿದ್ದಾರೆ. ವಿಮಾನ ಅಮೆಜಾನ್ ಕಾಡಿನಲ್ಲಿ ಪತನಗೊಂಡ ಕಾರಣ ತಕ್ಷಣ ರಕ್ಷಮಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಈ ವೇಳೆ ಅಮೆಜಾನ್ ಕಾಡಿನ ನಿವಾಸಿಗಳು ವಿಮಾನಕ್ಕೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಆದರೆ ಸಾಧ್ಯವಾಗಲಿಲ್ಲ.
Discussion about this post