ಒಂದೊಳ್ಳೆ ಹಾಡು ಕೇಳಬೇಕು ಅಂದರೆ ಇಯರ್ ಫೋನ್ ವಯರ್ ಬಿಚ್ಚಿಕೊಂಡು, ಫೋನ್ಗೆ ಸಿಕ್ಕಿಸಿಕೊಳ್ಳಲು ತಡಕಾಡಬೇಕು. ಆದರೆ ಬ್ಲೂಟೂತ್ ಹೆಡ್ ಸೆಟ್ ಇದ್ದರೆ ಹಾಗಲ್ಲ, ಫೋನ್-ಹೆಡ್ ಸೆಟ್ ಕನೆಕ್ಷನ್ ಫಟಾಫಟ್. ವಯರ್ಗಳ ಕಿರಿಕ್ ಇಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಕರೆ ಸ್ವೀಕರಿಸಬಹುದಾದ ಹೆಡ್ಸೆಟ್ಗಳು ಸಾಕಷ್ಟು ಜನಪ್ರಿಯವಾಗಿವೆ.
ಅದಕ್ಕೂ ಮಿಕ್ಕು ಈಗ ಎರಡೂ ಕಿವಿಗೆ ಇಯರ್ಫೋನ್ ರೀತಿ ಹಾಕಿಕೊಳ್ಳಬಹುದಾದ ಬ್ಲೂಟೂತ್ ಹೆಡ್ ಸೆಟ್ಗಳಿದ್ದು, ಇವುಗಳು ಫೋನ್ಗೂ ಕನೆಕ್ಟ್ ಆಗುವುದಲ್ಲದೇ, ಸ್ವಂತವಾಗಿ ಹಾಡುಗಳನ್ನು ಕೂಡ ಪ್ಲೇ ಮಾಡಬಲ್ಲವು.
ಈಗಿನ ಕಾಲದ ಯುವಕ-ಯುವತಿಯರಿಗಂತೂ ಸದಾ ಮ್ಯೂಸಿಕ್ ಕೇಳುತ್ತಲೇ ಇರಬೇಕು. ಅಥವಾ ಸಿನೆಮಾ ಅದೂ ಇದೂ ಅಂತ ನೋಡುತ್ತಲೇ ಇರಬೇಕು. ಇಂತಹವರಿಗಾಗಿಯೇ ಇರುವುದು ಡಬಲ್ ಇಯರ್ ಬ್ಲೂಟೂತ್ ಹೆಡ್ ಸೆಟ್. ಇದರಲ್ಲಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯವೂ ಇದೆ. ಈ ಮಾದರಿಯ ಹೆಡ್ ಸೆಟ್ಗಳು ಎಂಪಿತ್ರೀ ಪ್ಲೇಯರ್ ರೀತಿಯೂ ಕಾರ್ಯ ನಿರ್ವಹಿಸುತ್ತವೆ.
ಕರೆ ಸ್ವೀಕರಿಸಿ ಮಾತನಾಡಲೂ ಸಾಧ್ಯ. ಇವುಗಳು ಹೆಚ್ಚು ಪ್ರಚಲಿತದಲ್ಲಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಿವೆ. ವಾಕಿಂಗ್, ಜಾಗಿಂಗ್, ಕಾರು ಚಾಲನೆಯಂತಹ ಸಂದರ್ಭ, ಕೆಲಸದ ಸಂದರ್ಭಗಳಲ್ಲಿ, ಪ್ರವಾಸದ ವೇಳೆಗೆ ಹೆಚ್ಚಾಗಿ ಬ್ಲೂಟೂತ್ ವಿತ್ ಎಂಪಿತ್ರೀ ಮಾದರಿಗಳನ್ನು ಬಳಸಲಾಗುತ್ತದೆ. ಇವುಗಳ ಬೆಲೆ ಸುಮಾರು 2 ಸಾವಿರ ರೂ.ಗಳಿಂದ ಆರಂಭವಾಗುತ್ತದೆ.
ಮಾರುಕಟ್ಟೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಖರೀದಿಗೆ ವಿವಿಧ ರೀತಿಯ ಹೆಡ್ಸೆಟ್ಗಳಿವೆ. ಸೋನಿ, ಬೋಶ್, ಜಾಯ್ಬರ್ಡ್, ಪ್ಲಾನ್ ಟ್ರೊನಿಕ್ಸ್, ಜಾಬ್ರಾ, ಶೆನ್ಹೈಸರ್, ಜೆಬಿಎಲ್, ಎಕೆಜೆ, ಬೀಟ್ಸ್, ಫಿಲಿಪಿಕ್ಸ್ ಕಂಪೆನಿಗಳ ವಿವಿಧ ಮಾದರಿಯ, ವಿವಿಧ ದರದ ಹೆಡ್ಸೆಟ್ ಲಭ್ಯ.
ಇನ್ನು ಅಮೆಝಾನ್ ಸಂಸ್ಥೆ ದೊಡ್ಡ ಮಟ್ಟದಲ್ಲಿ ಬ್ಲೂಟೂತ್ ಹೆಡ್ ಸೆಟ್ ಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. ಇದೇ ತಿಂಗಳ 4ರ ತನಕ ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಡೆಯಲಿದ್ದು, ನೀವು ಕೂಡಾ ನಿಮಗಿಷ್ಟವಾದ ಹೆಡ್ ಫೋನ್ ಗಳನ್ನು ಖರೀದಿಸಬಹುದು.
Discussion about this post