ಬೆಂಗಳೂರು : ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ಅನ್ನುವ ಶಾಸಕ ಹೆಚ್ ವಿಶ್ವನಾಥ್ ಹೇಳಿಕೆ ಇದೀಗ ಯಡಿಯೂರಪ್ಪ ಬೆಂಬಲಿಗರ ಕೆಂಗಣ್ಣಿಗೆ ಗುರಿಯಾಗಿದೆ. ನಮ್ಮ ನಾಯಕನಿಗೆ ವಯಸ್ಸಾಯ್ತು ಅಂತೀರಾ ಎಂದು ಎದ್ದು ಕೂತಿರುವ ರಾಜಾ ಹುಲಿಯ ಬೆಂಬಲಿಗ ಶಾಸಕ ವಿಶ್ವನಾಥ್ ವಿರುದ್ಧ ವಾಗ್ದಾಳಿ ಪ್ರಾರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಅವರು ಅರೆ ಹುಚ್ಚನಂತೆ ಮಾತನಾಡುತ್ತಿದ್ದಾರೆ. ಅವರನ್ನು ಹುಚ್ಚಾಸ್ಪತ್ರೆಗೆ ದಾಖಲಿಸಬೇಕು. ವಿಶ್ವನಾಥ್ ತಿಕ್ಕಲ ಇದ್ದಂತೆ ರಸ್ತೆಯಲ್ಲಿ ಓಡಾಡುವ ಹುಚ್ಚರಂತೆ ಮಾತನಾಡುತ್ತಿದ್ದಾರೆ.
ವಿಶ್ವನಾಥ್ ಕೊರೋನಾ ವೈರಸ್ ಇದ್ದಂತೆ ಅದಕ್ಕೆ ಅದ್ಯಾವುದೇ ಮದ್ದಿಲ್ಲ. ವಿಶ್ವನಾಥ್ ಉಂಡ ಮನೆಗೆ ದ್ರೋಹ ಬಗೆಯುತ್ತಿರುವುದು ಹೊಸದೇನಲ್ಲ. ಈ ಹಿಂದೆ ಜೆಡಿಎಸ್ ನಲ್ಲಿ ಮಾಡಿದ್ದೇನು ಅನ್ನುವುದು ಎಲ್ಲರಿಗೂ ಗೊತ್ತಿದೆ. ವಿಶ್ವನಾಥ್ ಗೆ ಇದು ರಾಜಕೀಯ ಕೊನೆಯ ಅವಕಾಶ ಎಂದು ವಾಗ್ದಾಳಿ ನಡೆಸಿದ್ದಾರೆ.
Discussion about this post