ನಿಗೂಢ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಿದ್ದಾರ್ಥ್ ಅವರನ್ನು ಕರುನಾಡು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ. ಅವರು ಮಾಡಿದ ಒಳ್ಳೆ ಕಾರ್ಯಗಳು ಇಂದಿಗೂ ಎಂದಿಗೂ ಜನ ಮಾನಸದಲ್ಲಿ ನೆಲೆಯಾಗಿರುತ್ತದೆ.
ಈಗಾಗಲೇ ಸಿದ್ದಾರ್ಥ್ ಅವರದ್ದು ಎಂತಹ ವ್ಯಕಿತ್ವ ಅನ್ನುವುದನ್ನು ನೂರಾರು ಜನ ಹೇಳಿದ್ದಾರೆ. ವಿಶ್ವ ಪ್ರಸಿದ್ಧರಾಗಿರುವ ಕಾಫಿ ದೊರೆ ಸಿದ್ದಾರ್ಥ್ ಜೊತೆ ಬಿಗ್ ಬಾಸ್ ವಿನ್ನರ್, ಮಾತಿನ ಮಲ್ಲ, ಒಳ್ಳೆ ಹುಡುಗ ಪ್ರಥಮ್ ಫೋಟೋ ತೆಗೆಸಿಕೊಂಡಿಲ್ಲ ಅಂದರೆ ಅಚ್ಚರಿ ತಾನೇ.
ಬಿಗ್ ಬಾಸ್ ಪ್ರಥಮ್ ಸಿದ್ದಾರ್ಥ್ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಸಿದ್ದಾರ್ಥ್ ಇನ್ನಿಲ್ಲ ಅನ್ನುವ ನೋವಿನೊಂದಿಗೆ, ಪ್ರಥಮ್ ಅವರೊಂದಿಗಿನ ಒಡನಾಟವನ್ನು ಬರೆದಿದ್ದಾರೆ.
“ನಿಮ್ಮ ಕಣ್ಣಲ್ಲಿ ನೀರು ಬಂದ್ರೆ ನನ್ನ ಬೈದುಕೊಳ್ಳಬೇಡಿ !
ನಾನ್ ಇವ್ರ ಮೊದಲ ಭೇಟಿಯಲ್ಲೇ ದುಡ್ಡು ಕೇಳೋಕೆ ಹೋಗಿದ್ದೆ ಗೊತ್ತಾ? 2016ಶಿವಣ್ಣರ ಮಗಳು ನಿರುಪಮ-ದಿಲೀಪ್ engagement. ನಾನು ಶ್ರೀಕಾಂತ್ ಸರ್ ಜೊತೆಲಿ ಇದ್ದೆ. ಶ್ರೀಕಾಂತ್ ಸರ್ ಇವ್ರನ್ನ ತೋರಿಸಿ ಯಾರು ಗೊತ್ತೇನೋ ಅವ್ರು ಅಂದ್ರು…ಇಲ್ಲ ಅಂದೆ…Coffee day owner, ಮಾಜಿಮುಖ್ಯಮಂತ್ರಿ S.M.ಕೃಷ್ಣ ಅವ್ರ ಅಳಿಯ ಕಣೋ…ಹೋಗು ಪರಿಚಯ ಮಾಡ್ಕೋ ಅಂದ್ರು.
ಅಲ್ಲ ಸರ್…ನಮ್ಮ ಕನ್ನಡದಲ್ಲಿ ಒಂದು ಸಿನಿಮಾಗೆ ಸಣ್ಣ amount share ಹಾಕಿದ್ರು ದೊಡ್ಡ ದೊಡ್ಡ photo ಹಾಕೊಂಡು poster ಮಾಡಿಸ್ಕೊಂಡು ಪೋಸ್ ಕೊಡ್ತಾರೆ…ಇವ್ರೇನು ಸರ್,ಎಲ್ಲೂ photo ಹಾಕೊಳಲ್ಲ…ನನಗೆ ಹೆಂಗೆ ಗೊತ್ತಾಗುತ್ತೆ ಅಂದೆ! #ಇರಿ_ಸರ್…ನನಗೆ ಇವ್ರು ದುಡ್ಡು ಕೊಡ್ಬೇಕು…ಕೇಳ್ತೀನಿ…ಮೊನ್ನೆ ಚನ್ನಪಟ್ಟಣದ coffee dayಲಿ 4rs change ಕೊಟ್ಟಿಲ್ಲ…ಇವ್ರನ್ನ ಕೇಳ್ತೀನಿ ಅಂತ direct ಹೋಗಿ “ಸರ್ ನನಗೆ ನಿಮ್ಮ coffee day ಇಂದ 4 rupees ಕೊಡ್ಬೇಕಿತ್ತು ಅಂದೆ” ಅಯ್ಯೋ ನಾನ್ ನಿಮ್ಮನ್ನ ಕೇಳಲ್ಲ ಬಿಡಿ ಸರ್….ಒಂದು photo ತಗೋತೀನಿ ಸರ್ ನಿಮ್ಮ ಜೊತೆ ಅಂದೆ..ಖಂಡಿತಾ.. ಅಂತ smile ಮಾಡಿದ್ರು..!
ಅವಾಗ ಒಂದು ಮಾತು ಹೇಳಿದೆ..ಸರ್ ನಾನು ಸದಾನಂದಗೌಡ್ರು ಜೊತೆ ಫೋಟೋ ತಗೊಂಡೆ…ಅವ್ರು railway minister. So train ಲಿ ಓಡಾಡಿದ್ರೆ free..ಈಗ ನಿಮ್ಮ ಜೊತೆ ಫೋಟೋ ತಗೊಳ್ತೀನಿ..!Coffee day ಲಿ pomegranate juice ದುಡ್ಡು ಕೊಟ್ಟು ಕುಡಿತೀನಿ ಅಂದೆ…smile ಮಾಡಿ ಹೊರಟು ಹೋದ್ರು..!
2017 January 30..ನಾನು ಬಿಗ್ ಬಾಸ್ ಗೆದ್ದೆ.. ಅಪ್ಪು ಸರ್ ನ ನೋಡೋಣ ಅಂತ ಅವ್ರ ಮನೆಗೆ ಹೋಗಿದ್ದೆ.!
ಅಪ್ಪುರನ್ನ ನೋಡಿ ಬರಬೇಕಾದ್ರೆ ಸದಾಶಿವನಗರದಲ್ಲಿ ಇದೇ ಸಿದ್ಧಾರ್ಥ ಸರ್ ಸಿಕ್ಕಿದ್ರು!
ಸರ್ ನನ್ನ ಹೆಸರು ಪ್ರಥಮ್ ಅಂದೆ..ನೀವ್ ಯಾರಿಗ್ರೀ ಗೊತ್ತಿಲ್ಲ…! ಬಿಗ್ಬಾಸ್ ಅಂದ್ರು…ಖುಷಿ ಆಯ್ತು!ಸರ್ ನಿಮ್ದೇ coffee day ಇದ್ರು ನೀವು complain ಕುಡೀತೀರಾ ಅನ್ಸುತ್ತೆ ಸರ್..ಅದುಕ್ಕೆ ಸಕ್ಕತ್ height ಇದೀರಾ ಸರ್ ಅಂದೆ. ನಗ್ತಾ ಇದ್ರು..! ಸರ್ ನಿಮ್ಮ ನಂಬರ್ ಕೊಡಿ ಅಂದೆ..ನನ್ನ ಫೋನ್ ಲಿ save ಮಾಡ್ಕೊಂಡ್ರು.ನಮಗ್ಯಾಕೆ ಸಿನಿಮಾ?ಈಗಲೂ ಅವ್ರ ಫೋನ್ ಲಿ ನನ್ನ ನಂಬರ್ ಇದೆ!
ಒಂದೊಳ್ಳೆಕಾರ್ಯಕ್ರಮದಲ್ಲಿ ಭೇಟಿ ಮಾಡೋಣ ಅಂದ್ರು!ನಾನು ಪಕ್ಕ ತುಂಟಾಟದ ಹುಡುಗ, ಅವ್ರದು ರಾಜಗಾಂಭೀರ್ಯ..ಆದರೂ ನಮ್ಮ ಸ್ನೇಹ ಚೆನ್ನಾಗಿತ್ತು! ನಾನು ಗೆದ್ದಾಗ shirt ಬಿಚ್ಚಿ ಎಸೆದದ್ದು ನೋಡಿ ತುಂಬಾ enjoy ಮಾಡಿದ್ರಂತೆ!!!
ಒಬ್ಬ middle class ಹುಡ್ಗ,ಬಿಗ್ಬಾಸ್ ಗೆದ್ದು ಆ ದುಡ್ಡು ಒಳ್ಳೇ ಕೆಲಸಕ್ಕೆ announce ಮಾಡಿದ್ದು ಅವ್ರಿಗೆ ಆಶ್ಚರ್ಯ, ಸಂತೋಷ ಎರಡು ತರಿಸಿತ್ತು!
ಅವಾಗ್ಲೂ ಅವ್ರಿಗೆ ಟಾಂಗ್ ಕೊಟ್ಟಿದ್ದೆ! ಅಲ್ಲಾ ಸರ್ ಸಾವಿರಾರು ಜನಕ್ಕೆ ಕೆಲಸ ಕೊಟ್ಟು ಸಂಬಳ ಕೊಡ್ತಿದ್ದೀರಾ, ನಿಮ್ಮ ಮುಂದೆ ಪುಟ್ಟ ಶಿಶು ಸರ್ ನಾನು!ನಾನ್ ಒಳ್ಳೇ ಹುಡ್ಗ ಅಲ್ವಾ ಸರ್? ನಿಮ್ coffee day ಲಿ free pomegranate juiceಗೆ pass ಕೊಡಿ ಅಂದೆ.pomegranate pass?ಅಂತ ನಗ್ತಿದ್ರು!
ನನಗೆ ಒಂದೊಳ್ಳೆ ವಿಚಾರ ಅಷ್ಟೇ ನನ್ನ ನೆನಪಲ್ಲಿ ಉಳಿದಿದೆ!!! ಹಾಗೇ ನನ್ನ ಮನಸ್ಸಲ್ಲಿ ಯಾವಗ್ಲೂ ಇದ್ದುಬಿಡಿ ಸಿದ್ಧಾರ್ಥ ಸರ್ .
Discussion about this post