ಪ್ರತೀ ವರ್ಷ ಬಿಗ್ ಬಾಸ್ Bigg Boss Kannada ಮನೆಗೆ ಹೋಗುವವರ ಹೆಸರುಗಳು ಬಹಿರಂಗವಾಗುತ್ತಿತ್ತು, ಈ ಬಾರಿ ಕಲರ್ಸ್ ವಾಹಿನಿ ಗೌಪ್ಯತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ
ಹಾಗಿದ್ದರೂ ಈ ಬಾರಿಯ 10ನೇ ಸೀಸನ್ ಗೆ Bigg Boss Kannada ಹೋಗುವವರು ಇವರೇ ಅನ್ನುವ ಲೆಕ್ಕಚಾರಗಳು ಪ್ರಾರಂಭವಾಗಿದೆ. ಬಿಗ್ಬಾಸ್ ಸೀಸನ್ 10ರಲ್ಲಿ ಯಾರೆಲ್ಲಾ ಸ್ಪರ್ಧಿಗಳು ಇರಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೊಂದು ವಾರದಲ್ಲಿ ಈ ಪ್ರಶ್ನೆಗೆ ಉತ್ತರ ಸಿಗಲಿದೆ.
ಈಗ ಹರಿದಾಡುತ್ತಿರುವಸಂಭಾವ್ಯರ ಪಟ್ಟಿಯಲ್ಲಿ ಗಟ್ಟಿಮೇಳ ಖ್ಯಾತಿಯ ನಟಿ ಸ್ವಾತಿ, ಕಾಮಿಡಿ ಕಿಲಾಡಿಗಳು ಶೋ ಖ್ಯಾತಿಯ ಶಿವರಾಜ್ ಕೆ.ಆರ್ ಪೇಟೆ, ನಟಿ ರೂಪಾ ರಾಯಪ್ಪ, ನಟ ಸುನೀಲ್ ರಾವ್, ಕ್ರಿಕೆಟರ್ ವಿನಯ್ ಕುಮಾರ್, ಹಾಸ್ಯ ನಟ ದಿವಗಂತ ಬುಲೆಟ್ ಪ್ರಕಾಶ್ ಮಗ ರಕ್ಷಕ್, ಹಾಡುಗಾರ್ತಿ ಇಶಾನಿ, ಮಿಮಿಕ್ರಿ ಆರ್ಟಿಸ್ಟ್ ಗೋಪಿ, ಅಗ್ನಿಸಾಕ್ಷಿ ಖ್ಯಾತಿಯ ರಾಜೇಶ್ ಧ್ರುವ ಹಾಗೂ ನಾಗಿಣಿ ಖ್ಯಾತಿಯ ನಮ್ರತಾ ಗೌಡ ಹೆಸರಿದೆ.
Discussion about this post