ನಿರೀಕ್ಷೆಯಿಂದ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡದ (Bigg Boss Kannada ) OTT ಆವೃತ್ತಿಗೆ ಚಾಲನೆ ಸಿಕ್ಕಿದ್ದು ನಿರೀಕ್ಷೆಯಂತೆ ಸಮಾಜಕ್ಕೆ ದಂಡ ಪಿಂಡಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆಸಿಕೊಂಡ ಕೆಲ ಸ್ಪರ್ಧಿಗಳು ಮನೆ ಪ್ರವೇಶಿಸಿದ್ದಾರೆ. ನೆಗೆಟಿವ್ ಮನಸ್ಥಿತಿಯ ಮಂದಿಯೊಂದಿಗೆ ಪಾಸಿಟಿವ್ ಮನಸ್ಥಿತಿಯ ಮಂದಿಗೂ ಮನೆ ಪ್ರವೇಶಿಸಿದ್ದಾರೆ.
ಆರ್ಯವರ್ಧನ್ ಗುರೂಜಿ
ಸಂಖ್ಯೆ ಅಂದ್ರೆ ನಾನು, ನಾನು ಅಂದ್ರೆ ಸಂಖ್ಯೆ ಎಂದು ಖ್ಯಾತವಾಗಿದ್ದ ಸ್ವಯಂಘೋಷಿತ ಗುರೂಜಿ ಆರ್ಯವರ್ಧನ್ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಮೊದಲ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿರುವ ಆರ್ಯವರ್ಧನ್ ಅವರನ್ನು ಸುದೀಪ್ ಸ್ವಾಗತಿಸಿದ್ದಾರೆ. ಐಪಿಎಲ್ ಸಂದರ್ಭದಲ್ಲಿ ಸುಳ್ಳು ಸುಳ್ಳು ಭವಿಷ್ಯ ಹೇಳಿ ಆರ್ಯವರ್ಧನ್ ಟ್ರೋಲ್ ಆಗಿದ್ದರು.
ಸೋನು ಶ್ರೀನಿವಾಸ ಗೌಡ
ಕಳೆದ ಹಲವು ವರ್ಷಗಳಿಂದ ಬಿಗ್ ಬಾಸ್ ಎಂಟ್ರಿ ಪಡೆಯಲು ಸೋನು ಶ್ರೀನಿವಾಸ್ ಗೌಡ ಸರ್ಕಸ್ ನಡೆಸುತ್ತಿದ್ರು. ಸಾಮಾಜಿಕ ಜಾಲತಾಣಗಳಲ್ಲಿ ಇದೇ ಕಾರಣಕ್ಕಾಗಿ ಪ್ರಯತ್ನವೂ ಸಾಗಿತ್ತು. ಇದೀಗ ಮಹಾಮನೆಗೆ ಎಂಟ್ರಿ ಸಿಗದಿದ್ರೂ ಓಟಿಟಿ ಮನೆಗೆ ಎಂಟ್ರಿ ಸಿಕ್ಕಿದೆ. ಎರಡನೇ ಸ್ಪರ್ಧಿಯಾಗಿ ಬಂದಿರುವ ಸೋನು ಶ್ರೀನಿವಾಸಗೌಡ ಅವರನ್ನು ಸುದೀಪ್ ತಮ್ಮದೇ ಶೈಲಿಯಲ್ಲಿ ಸ್ವಾಗತಿಸಿದ್ದಾರೆ.
ರೂಪೇಶ್ ಶೆಟ್ಟಿ
ಮಂಗಳೂರು ಮೂಲದ ರೂಪೇಶ್ ಶೆಟ್ಟಿ, ಬಹುಮುಖ ಪತ್ರಿಭೆ. ಕನ್ನಡ ತುಳು ಮತ್ತು ಕೊಂಕಣಿ ಸಿನಿಮಾ ರಂಗದಲ್ಲಿ ಸದ್ದು ಮಾಡಿದ್ದ ರೂಪೇಶ್ ಆರ್.ಜೆ ಆಗಿ ಚಿರಪರಿಚಿತ ಮುಖ. ಸುದೀರ್ಘ ಕಾಲ ಮಾಡೆಲ್ ಆಗಿದ್ದ ರೂಪೇಶ್ ಇದೀಗ ವಿಡಿಯೋ ಜಾಕಿಯಾಗಿ ಪ್ರಸಿದ್ಧರಾಗಿದ್ದಾರೆ.
ಸೋಮಣ್ಣ ಮಾಚಿಮಡ
ಪತ್ರಕರ್ತರಾಗಿರುವ ಸೋಮಣ್ಣ, ಕೇವಲ ಸೆಲೆಬ್ರೆಟಿಗಳ ಸಂದರ್ಶನ ಮಾತ್ರವಲ್ಲದೆ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಮಂದಿಗೆ ಪ್ರತೀ ನಿತ್ಯ ಆಹಾರ ಕೊಟ್ಟ ಹಿರಿಮೆ ಇವರದ್ದು. ಇನ್ನು ಕ್ರೀಡೆ ಅದರಲ್ಲೂ ಐಪಿಎಲ್ ಬಗ್ಗೆ ವಿಶೇಷ ಆಸಕ್ತಿ ಉಳ್ಳವರು ಸೋಮಣ್ಣ ಮಾಚಿಮಾಡ
Discussion about this post