ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿದೆ. ಜೋಡಿ ಹಕ್ಕಿಗಳಿಗೆ ಈ ಬಾರಿ ವೀಕ್ಷಕರು ಮಣೆ ಹಾಕಿದ್ದು, ಇದೇ ಕಾರಣಕ್ಕೆ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಮಿಂಚುತ್ತಿದ್ದಾರೆ.
ನಡುವೆ ಬಿಗ್ ಬಾಸ್ ಮನೆಯಲ್ಲಿ ಕಿಸ್ಸಿಂಗ್ ಸದ್ದು ಕೇಳಿಸಿದೆ. ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರಿಗೆ ಪೈಪೋಟಿ ಅನ್ನುವಂತೆ ಆಡುತ್ತಿರುವ ದಿವ್ಯಾ ಸುರೇಶ್ ಹಾಗೂ ಮಂಜು ಇದೀಗ ಕಿಸ್ಸಿಂಗ್ ಕಾರಣದಿಂದ ಸುದ್ದಿಯಲ್ಲಿದ್ದಾರೆ.
ಈ ವಾರ ಎಲಿಮಿನೇಷನ್ ಪ್ರಕ್ರಿಯೆಯ ಭಾಗವಾಗಿ ನಡೆದ ಟಾಸ್ಕ್ ಒಂದರಲ್ಲಿ ಈ ಘಟನೆ ನಡೆದಿದೆ. ಸೇಫ್ ಆಗೋ ಸದಸ್ಯರನ್ನು ಗುರುತಿಸುವ ಸಲುವಾಗಿ ಬಿಗ್ ಬಾಸ್ ಪ್ರಿಂಟರ್ ಒಂದನ್ನು ಇಟ್ಟಿದ್ದರು. ಅದರಲ್ಲಿ ಯಾರ ಫೋಟೋ ಸೇಫ್ ಎಂದು ಮುದ್ರಣವಾಗುತ್ತದೋ ಅವರು ಸೇಫ್ ಅಂತಾ ಬಿಗ್ ಬಾಸ್ ಸೂಚಿಸಿದ್ದರು.
ಈ ವೇಳೆ ದಿವ್ಯಾ ಸುರೇಶ್ ಅವರ ಫೋಟೋ ಸೇಫ್ ಎಂದು ಬಂದಾಗಸ ಫೋಟೋ ನೋಡಿ ಚೆನ್ನಾಗಿದ್ದೀಯಾ ಎಂದು ಫೋಟೋಗೋ ಮುತ್ತು ಕೊಟ್ಟಿದ್ದಾರೆ. ಬೇರೆ ಘಳಿಗೆಯಲ್ಲಿ ಈ ಘಟನೆ ನಡೆದಿದ್ರೆ ಉಳಿದ ಸ್ಪರ್ಧಿಗಳು ರಿಯಾಕ್ಷನ್ ಕೊಡ್ತಾ ಇದ್ರು, ಆದರೆ ಎಲಿಮಿನೇಷನ್ ಒತ್ತಡದಲ್ಲಿದ್ದ ಕಾರಣ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಲಿಲ್ಲ, ಜೊತೆಗೆ ದಿವ್ಯಾ ಸುರೇಶ್ ಕೂಡಾ ನಕ್ಕು ಸುಮ್ಮನಾಗಿದ್ದಾರೆ.
Discussion about this post