ಬಿಗ್ ಬಾಸ್ ಸೀಸನ್ 8ರ ಎರಡನೇ ವಾರ ಹಲವು ನಾಟಕೀಯ ಬೆಳವಣಿಗೆಗಳು ನಡೆದಿದೆ.
ಅದರಲ್ಲೂ ವಾರಾಂತ್ಯದಲ್ಲಿ ಕಿಚ್ಚನೊಂದಿಗೆ ನಡೆದ ಮಾತುಕತೆ ಸಂದರ್ಭದಲ್ಲಿ ಬಿಸಿಯೇರಿದ ಚರ್ಚೆಗಳು ಕೂಡಾ ನಡೆದಿದೆ.
ನಿಧಿ ಸುಬ್ಬಯ್ಯ, ವೈಷ್ಣವಿ ಸೇರಿದಂತೆ ಅನೇಕ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಕೆಯನ್ನು ಕೂಡಾ ಕೊಟ್ಟಿದ್ದಾರೆ.
ಈ ನಡುವೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನಿರ್ಮಲಾ ಕೊನೆ ಘಳಿಗೆಯಲ್ಲಿ ಆಡಿದ ಆಟಗಳು ಜನರಿಗೆ ಕಿರಿ ಕಿರಿ ಉಂಟು ಮಾಡಿದ್ದು ಸತ್ಯ.
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ನಿರ್ಮಲಾ ಜವನರನ್ನು ರಂಜಿಸಲಿಲ್ಲ, ಬದಲಾಗಿ ವೀಕ್ಷಕರಿಗೆ ಟಾರ್ಚರ್ ಕೊಟ್ಟಿದ್ದರು. ಹಾಸಿಗೆಗೆ ಹೋಗುವ ಮುನ್ನ ಒಂದಿಷ್ಟು ಒಳ್ಳೆಯದನ್ನು ನೋಡೋಣ ಎಂದು ಬಿಗ್ ಬಾಸ್ ಮುಂದೆ ಕೂತ್ರೆ ನಿದ್ದೆ ಹಾರಿ ಹೋಗುತ್ತಿತ್ತು. ಹೀಗಾಗಿಯೇ ನಿರ್ಮಲಾ ಬಿಗ್ ಬಾಸ್ ಮನೆಯಿಂದ ಎರಡೇ ವಾರಕ್ಕೆ ಹೊರಗೆ ಬಂದಿದ್ದಾರೆ.
ಇನ್ನು ಬಿಗ್ ಬಾಸ್ ಮನೆ ಪ್ರವೇಶಿಸುವ ಸಂದರ್ಭದಲ್ಲೂ ಸುದೀಪ್ ಮೆದುಳಿಗೆ ಕೈ ಹಾಕಿದ್ದ ನಿರ್ಮಲಾ, ವಾರಾಂತ್ಯದಲ್ಲೂ ಅದನ್ನು ಮುಂದುವರಿಸಿದ್ದರು.
ರಿಯಾಲಿಟಿ ಶೋಗಳನ್ನು ಅರೆದು ಕುಡಿದಿದ್ದೇನೆ ಅನ್ನುವ ಭ್ರಮೆಯಲ್ಲಿದ್ದ ನಿರ್ಮಲಾ ಫೈನಲ್ ತನಕ ಹೋಗೋದು ಖಚಿತ ಅಂದುಕೊಂಡಿದ್ದರು. ಆದರೆ ಬಿಗ್ ಬಾಸ್ ಮನೆಗೆ ಹೋದ ತಕ್ಷಣ ಅವರು ಬದಲಾದ ರೀತಿ ಜನರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಫೈನಲ್ ಕನಸು ಕನಸಾಗಿಯೇ ಉಳಿಯಿತು.
ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಕಾರ್ಯಕ್ರಮದ ನಿರ್ಮಾಣದ ಹೊಣೆ ಹೊತ್ತಿದ್ದ ನಿರ್ಮಲಾ, ಆ ಮೂಲಕ ಓಟು ಗಳಿಸಿಕೊಳ್ಳಲು ಪ್ಲಾನ್ ಕೂಡಾ ಹಾಕಿದ್ದರು. ಕನ್ನಡ ಕೋಗಿಲೆ ಹಾಡುಗಾರರ ಮೂಲಕ ಓಟ್ ಗಾಗಿ ಆಪೀಲ್ ಮಾಡಿಕೊಂಡಿದ್ದರು ಕೂಡಾ. ಆದರೆ ಬಿಗ್ ಬಾಸ್ ವೀಕ್ಷಕರು ದಡ್ಡರಾಗಲಿಲ್ಲ.
ಇನ್ನು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ತಕ್ಷಣ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಜೊತೆ ಮಾತುಕತೆಯ ಬಳಿಕ ಕಳುಹಿಸಿಕೊಡುವುದು ವಾಡಿಕೆ.
ಆದರೆ ನಿರ್ಮಲಾ ಅವರಿಗೆ ವೇದಿಕೆ ಹತ್ತುವ ಅವಕಾಶವೇ ಸಿಗಲಿಲ್ಲ. ಮಹಾಮನೆಯ ಮಹಾ ಬಾಗಿಲ ಮೂಲಕ ಹೊರಗೆ ಬಂದವರೇ ಸಿಕ್ಕಿದ್ದು ಬಿಡದಿ ಹೆದ್ದಾರಿ.
ಮಾಹಿತಿಗಳ ಪ್ರಕಾರ ನಿರ್ಮಲಾ ಅವರ ಉತ್ತರ ಶೈಲಿ, ಪ್ರಶ್ನೆಗೆ ಸಂಬಂಧವಿಲ್ಲದ ಉತ್ತರಗಳಿಂದ ಸುದೀಪ್ ಅವರು ಬೇಸತ್ತು ಹೋಗಿದ್ರಂತೆ. ಜೊತೆಹೆ ರಿಯಾಲಿಟಿ ಶೋಗಳ ಬಗ್ಗೆ ಜ್ಞಾನ ಉಳ್ಳ ನಿರ್ಮಲಾ ಬಿಗ್ ಬಾಸ್ ಮನೆಯ ನಿಯಮಗಳನ್ನು ಮುರಿದಿದ್ದರು.
ಯಾರನ್ನಾದರೂ ನಾಮಿನೇಷನ್ ಮಾಡಿ ಅಂದ್ರೆ ನನಗದು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದಿದ್ದರು.
ಈ ಕಾರಣದಿಂದ ಸುದೀಪ್ ನಿರ್ಮಲಾ ಅವರ ಜೊತೆ ಮಾತುಕತೆಗೆ ಮಾಡಲು ಒಪ್ಪಿಲ್ಲ ಎನ್ನಲಾಗಿದೆ. ಹೀಗಾಗಿ ನಿರ್ಮಲಾ ಬಿಗ್ ಬಾಸ್ ಮನೆಯಿಂದ ನೇರವಾಗಿ ಬೆಂಗಳೂರು ತಲುಪಿದ್ದಾರಂತೆ.
Discussion about this post