Israel-Hamas war: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಬುಧವಾರ (ಅಕ್ಟೋಬರ್ 18) ಇಸ್ರೇಲ್ಗೆ ಭೇಟಿ ನೀಡಲಿದ್ದು, ಅಲ್ಲಿನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ( Joe Biden Visit Israel)
ಇಸ್ರೇಲ್ ಹಮಾಸ್ ಉಗ್ರರ ನಡುವಿನ ಯುದ್ಧ 11ನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರನ್ನು ಸದೆ ಬಡಿಯಲು ದೃಢ ನಿರ್ಧಾರ ಕೈಗೊಂಡಿರುವ ಇಸ್ರೇಲ್ ಗಾಜಾ ಪ್ರದೇಶದಲ್ಲಿ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗುತ್ತಿದೆ. ಈಗಾಗಲೇ ಇಸ್ರೇಲ್ ಪರ ನಿಂತಿರುವ ಅಮೆರಿಕ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಯುದ್ದ ನೌಕೆ, ಯುದ್ಧ ವಿಮಾನಗಳನ್ನು ಇಸ್ರೇಲ್ ಗೆ ಕಳುಹಿಸಿಕೊಟ್ಟಿರುವ ಅಮೆರಿಕಾ ಭವಿಷ್ಯದಲ್ಲಿ ಜಗತ್ತಿಗೆ ಕಂಟಕವಾಗಬಲ್ಲ ಉಗ್ರರ ನಿಗ್ರಹಕ್ಕೆ ಕೈ ಜೋಡಿಸಿದೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಬುಧವಾರ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ. ( Joe Biden Visit Israel)
ಈ ನಡುವೆ ಹಮಾಸ್ ದಾಳಿಯ ನಂತರ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿಯಾಗಿದ್ದು ಎರಡು ಗಂಟೆಗಳ ಕಾಲ ಇಬ್ಬರ ನಡುವೆ ಮಾತುಕತೆಗಳು ನಡೆದಿದೆ. ಇದಾದ ನಂತ್ರ ಮಾತನಾಡಿರುವ ಆಂಟೋನಿ ಬ್ಲಿಂಕೆನ್, ಮಾತುಕತೆ ವೇಳೆ ಗಾಜಾಕ್ಕೆ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಇಸ್ರೇಲ್ ಮತ್ತು ವಾಷಿಂಗ್ಟನ್ ಒಪ್ಪಿಕೊಂಡಿವೆ ಅಂದಿದ್ದಾರೆ.
ಗಾಜಾದಲ್ಲಿನ ನಾಗರಿಕರನ್ನು ತಲುಪಲು ದಾನಿ ರಾಷ್ಟ್ರಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳಿಂದ ಮಾನವೀಯ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಆಂಟೋನಿ ಬ್ಲಿಂಕೆನ್ ತಿಳಿಸಿದ್ದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಬುಧವಾರ ಇಸ್ರೇಲ್ಗೆ ಭೇಟಿ ನೀಡಲಿದ್ದಾರೆ ಎಂದು ಘೋಷಿಸಿದ್ದಾರೆ.
Read this : ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ: ಸುಪ್ರೀಂಕೋರ್ಟ್ ನಿಂದ ಇಂದು ತೀರ್ಪು ಪ್ರಕಟ
ಈಗಾಗಲೇ ಯುನೈಟೆಡ್ ನೇಷನ್ಸ್ ಮತ್ತು ಇತರ ಸಂಸ್ಥೆಗಳಿಂದ ಗಾಜಾ ನಿವಾಸಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಜನರೇಟರ್ಗಳಿಗೆ ನೀರು, ಆಹಾರ ಮತ್ತು ಇಂಧನವನ್ನು ಈಜಿಪ್ಟ್ನ ಗಾಜಾ ಗಡಿಗೆ ತಲುಪಿಸಲಾಗಿದೆ. ಹೀಗಾಗಿಯೇ ಮಾನವೀಯ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಎರಡು ರಾಷ್ಟ್ರಗಳು ಚಿಂತನೆ ನಡೆಸಿವೆ.
Read this : BIGG BOSS KANNADA 10 : ಡ್ರೋನ್ ಪ್ರತಾಪ್ ನೆರವಿಗೆ ಧಾವಿಸಿದ ಕಿಚ್ಚ ಸುದೀಪ್
US President Joe Biden will pay a solidarity visit to Israel on Wednesday following the Hamas attacks
Discussion about this post