ಭೋಪಾಲ್ : ಸಂತಾನ ಪಡೆದ ಸಂಭ್ರಮವನ್ನು ಪೋಷಕರು ಸಿಹಿ ಹಂಚಿ ಸಂಭ್ರಮಿಸುವುದು ವಾಡಿಕೆ. ಆದರೆ ಮಧ್ಯಪ್ರದೇಶ ಭೋಪಾಲ್ ನ ಬೀದಿ ಬದಿ ಪಾನಿಪುರಿ ವ್ಯಾಪಾರಿಯೊಬ್ಬ ಗ್ರಾಹಕರಿಗೆ ಉಚಿತವಾಗಿ ಪಾನಿಪುರಿ ಹಂಚಿದ್ದಾರೆ.
ರಸ್ತೆ ಬದಿಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿರುವ ಅಂಚಲ್ ಗುಪ್ತಾ, ಮದುವೆಯಾದ ಬಳಿಕ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದರು. ನಿರೀಕ್ಷೆಯಂತೆ ಅವರಿಗೆ ಹೆಣ್ಣು ಮಗುವಾಗಿದ್ದು, ಈ ಸಂಭ್ರಮವನ್ನು ತಮ್ಮ ಗ್ರಾಹಕರೊಂದಿಗೆ ಹಂಚಿಕೊಂಡಿದ್ದಾರೆ.
ಒಂದು ಇಡೀ ದಿನ ಉಚಿತವಾಗಿ ಪಾನಿಪುರಿ ಹಂಚಿರುವ ಅಂಚಲ್, ಕಾಸು ಕೊಡಲು ಬಂದವರಿಗೆಲ್ಲಾ ನಾನು ಮಗಳೊಬ್ಬಳಿಗೆ ತಂದೆಯಾಗಿದ್ದೇನೆ ಕಾಸು ಬೇಡ ಅಂದಿದ್ದಾರೆ. ಹೀಗಾಗಿ ಪಾನಿಪುರಿ ತಿಂದ ಅನೇಕರು ಶುಭಾಶಯ ಕೋರಿ ಹೋಗಿದ್ದಾರೆ. ಇನ್ನು ಒಂದು ದಿನ ಸುಮಾರು 50 ಸಾವಿರ ಬೆಲೆಯ ಪಾನಿಪುರಿಯನ್ನು ಅವರು ಹಂಚಿದ್ದಾರೆ ಎನ್ನಲಾಗಿದೆ.
A street food vendor from Bhopal, Madhya Pradesh served free Pani Puri to all visitors and the reason behind this generous act was that he was celebrating the birth of his daughter.