ಭವ್ಯಾ ಗೌಡ ಒಂದು ಕಾಲ ಟಿಕ್ ಟಾಕ್ ಸ್ಟಾರ್. ಹೀಗೆ ಟಿಕಾ ಟಾಕ್ ಮೂಲಕ ಟ್ರಾಲ್ ಪೇಜ್ ಗಳಿಗೆ ಆಹಾರವಾಗಿದ್ದ ಭವ್ಯಾ ಗೌಡ ಅವರಿಗೆ ಗೀತಾ ಧಾರವಾಹಿ ದೊಡ್ಡ ಬ್ರೇಕ್ ಕೊಟ್ಟಿದೆ. ಟಿಕ್ ಟಾಕ್ ಸ್ಟಾರ್ ಆದ ಮಾತ್ರಕ್ಕೆ ಧಾರವಾಹಿ ಹಿಟ್ ಆಗುತ್ತಾ ಅನ್ನುವ ಪ್ರಶ್ನೆ ಮೊದಲಿತ್ತು. ಆದರೆ ಹೊಸ ಪ್ರತಿಭೆಗಳನ್ನು ಸ್ಟಾರ್ ಮಾಡುವುದರಲ್ಲಿ ಎತ್ತಿದ ಕೈ ನಿರ್ದೇಶಕ ರಾಮ್ ಜಿ ಧಾರವಾಹಿ ಅಂದ ಮೇಲೆ ಕೇಳಬೇಕಾ. ಹೀಗಾಗಿಯೇ ಗೀತಾ ಸೀರಿಯಲ್ ಸಿಕ್ಕಾಪಟ್ಟೆ ಹಿಟ್ ಆಗಿದೆ.
ಕೆಲವೊಂದು ಸೀನ್ ಗಳು ಬಕ್ವಾಸ್ ಅನ್ನಿಸಿದ್ದು, ಟಿಆರ್ಪಿಯಲ್ಲಿ ಮಾತ್ರ ಮೋಸವಾಗಿಲ್ಲ. ಹೀಗಾಗಿ ಗೀತಾ ಧಾರವಾಹಿ ಯಶಸ್ವಿಯಾಗಿ ಮುನ್ನುಗುತ್ತಿದೆ.
ಅಂದ ಹಾಗೇ ಇಷ್ಟೆಲ್ಲಾ ಕಥೆ ಯಾಕೆ ಅಂದ್ರೆ ರಾಮ್ ಜೀ ಬಳಗದಲ್ಲಿ ಬೆಳಗಿದ ಪ್ರತಿಭೆ ಭವ್ಯಾ ಗೌಡ ಅವರಿಗೆ ಇದೀಗ ತೆಲುಗು ಧಾರವಾಹಿಯ ಆಫರ್ ಬಂದಿದೆ. ಈಗಾಗಲೇ ಭವ್ಯಾ ಸಹಿ ಹಾಕಿರುವ ಡಿಯರ್ ಕಣ್ಮಣಿ ಚಿತ್ರ ಟೇಕಾಫ್ ಆಗದಿರುವ ಹಿನ್ನಲೆಯಲ್ಲಿ ತೆಲುಗು ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.
ಡಿಸೆಂಬರ್ 13 ರಿಂದ ಮಧ್ಯಾಹ್ನ 1 ಗಂಟೆಗೆ ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರ ಪ್ರಾರಂಭಿಸಲಿರುವ ಕಲಸೆವುಂಟೆ ಕಲೆದ ಸುಖಂ ಅನ್ನುವ ಧಾರವಾಹಿಯಲ್ಲಿ ಭವ್ಯಾ ಗೌಡ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲಿ ಪೂಜಾ ಅನ್ನುವ ಪಾತ್ರಕ್ಕೆ ಬಣ್ಣ ಹಚ್ಚಿರುವ ಭವ್ಯಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಪಾತ್ರಕ್ಕೆ ಹೋಲಿಸಿದರೆ ಇದೊಂದು ಡಿಫರೆಂಟ್ ಕ್ಯಾರೆಕ್ಟರ್. ಈಗಾಗಲೇ ಧಾರವಾಹಿಯ ಶೂಟಿಂಗ್ ಪ್ರಾರಂಭವಾಗಿದ್ದು, ಕನ್ನಡದಲ್ಲಿ ಸದ್ದು ಮಾಡಿದ ಭವ್ಯಾ ತೆಲುಗು ನಾಡಿನಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಹಾಗಾದ್ರೆ ಗೀತಾ ಧಾರವಾಹಿಗೆ ಭವ್ಯಾ ಗುಡ್ ಬೈ ಹೇಳ್ತಾರ ಕಾದು ನೋಡಬೇಕು
Discussion about this post