ಅಗ್ನಿಸಾಕ್ಷಿ, ಒಂದು ಕಾಲದಲ್ಲಿ ಕನ್ನಡ ಕಿರುತೆರೆ ಲೋಕದಲ್ಲಿ ಸಂಚಲನ ಮೂಡಿಸಿದ ಧಾರವಾಹಿ. ಈ ಧಾರವಾಹಿಯ ಕಲಾವಿದರನ್ನೂ ಈಗ್ಲೂ ಪಾತ್ರದ ಹೆಸರಿನಿಂದಲೇ ಗುರುತಿಸುತ್ತಿದ್ದಾರೆ ಅಂದ್ರೆ ಧಾರವಾಹಿ ಮೂಡಿಸಿದ ಸಂಚಲನ ಹೇಗಿರಬಹುದು.
ಇನ್ನು ಈ ಧಾರವಾಹಿಯನ್ನು ಆರ್ಕಾ ಮೀಡಿಯಾ ಸಂಸ್ಥೆ ನಿರ್ಮಿಸಿತ್ತು. ಈ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಮೈಲುಗಲ್ಲು ಸೃಷ್ಟಿಸಿದ ಹಿರಿಮೆ ಈ ಸಂಸ್ಥೆಯದ್ದು. ಆರ್ಕಾ ಮೀಡಿಯಾ ಬಾಹುಬಲಿ ಸೇರಿದಂತೆ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಿಸಿದೆ. ಅಗ್ನಿಸಾಕ್ಷಿಯ ಬಳಿಕ ಸೀತಾವಲ್ಲಭ ಅನ್ನೋ ಧಾರವಾಹಿಯನ್ನು ಈ ಸಂಸ್ಥೆ ನಿರ್ಮಿಸಿತ್ತು. ಅದಾದ ಬಳಿಕ ಬೇರೆ ಕನ್ನಡ ಧಾರವಾಹಿಗೆ ಕೈ ಹಾಕಿರಲಿಲ್ಲ.
ಇದೀಗ ಇದೇ ಸಂಸ್ಥೆ ಕನ್ನಡ ಧಾರವಾಹಿಯ ನಿರ್ಮಾಣಕ್ಕೆ ಮುಂದಾಗಿದ್ದು ಸ್ಟಾರ್ ಸುವರ್ಣದಲ್ಲಿ ಬೆಟ್ಟದ ಹೂ ಅನ್ನುವ ಟೈಟಲ್ ವಲ್ಲಿ ಧಾರವಾಹಿ ಪ್ರಸಾರವಾಗಲಿದೆ. ಇನ್ನಷ್ಟೇ ಕಲಾವಿದರ ಆಯ್ಕೆಯಾಗಬೇಕಾಗಿದ್ದು, ಪ್ರತಿಭೆಗಳಿಗಾಗಿ ಮಾತುಕತೆ ನಡೆಯುತ್ತಿದೆ.
ಬೆಟ್ಟದ ಅಪ್ಪು ಅಭಿನಯದ ಅದ್ಭುತ ಸಿನಿಮಾವಾಗಿದೆ. ಈ ಸಿನಿಮಾದ ನಟನೆಗಾಗಿ ಅವರು ನ್ಯಾಷನಲ್ ಫಿಲ್ಮ್ ಆವಾರ್ಡ್ ಕೂಡಾ ಪಡೆದಿದ್ದರು. ಇದೇ ಸಿನಿಮಾದ ಟೈಟಲ್ ನಲ್ಲಿ ಧಾರವಾಹಿ ಮೂಡಿ ಬರಲಿದ.
ಅಂದ ಹಾಗೇ ಬೆಟ್ಟದ ಹೂ ಧಾರವಾಹಿ ರಿಮೇಕ್ ಆಗಿದ್ದು, 2012 ರಿಂದ 15 ರ ತನಕ ಬೆಂಗಾಲಿಯ ಸ್ಟಾರ್ ಜಲ್ಸಾ ವಾಹಿನಿಯಲ್ಲಿ ಪ್ರಸಾರ ಕಂಡ ಇಷ್ಟಿ ಕುಟುಮ್ ಧಾರವಾಹಿಯನ್ನು ಕನ್ನಡಕ್ಕೆ ತರಲಾಗುತ್ತಿದೆ.
ಇಷ್ಟಿ ಕುಟುಮ್ ಬಹಾ ಅನ್ನು ಹುಡುಗಿಯ ಸುತ್ತ ಹೆಣೆಯಲಾದ ಕಥೆಯಾಗಿದೆ. ಆರ್ಚಿ ಅನ್ನೋ ಸಿಟಿಯ ಹುಡುಗನನ್ನು ಬಹಾ ಮದುವೆಯಾಗುತ್ತಾಳೆ. ಆದರೆ ಆರ್ಚಿ ಕೊಮೊಲಿಕಾ ಅನ್ನೋ ಹುಡುಗಿಯನ್ನು ಪ್ರೀತಿಸುತ್ತಿರುತ್ತಾನೆ. ಹೀಗಾಗಿ ಇಷ್ಟವಿಲ್ಲದ ಸಂಸಾರ ಸಾಗುವ ರೀತಿಯೇ ಧಾರವಾಹಿಯ ಒನ್ ಲೈನ್ ಸ್ಟೋರಿ.
Discussion about this post