ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಸವರಾಜ ಬೊಮ್ಮಾಯಿ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಈ ನಡುವೆ ಕಿಚ್ಚ ಸುದೀಪ್ ಕೂಡಾ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಶುಭ ಹಾರೈಸಿದ್ದಾರೆ.
ಅವರ ಸರಳತೆಯನ್ನು ನೋಡಿ ಬೆಳೆದವನು ನಾನು, ನನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ನನಗೆ ಅವರು ತುಂಬಾ ಪ್ರೋತ್ಸಾಹ ನೀಡಿದ್ದಾರೆ. ನಿಮಗೆ ಶುಭ ಕೋರುತ್ತೇನೆ ಮಾಮ ಎಂದು ಟ್ವೀಟ್ ಮಾಡಿದ್ದಾರೆ. ಮಾಮ ಅನ್ನುವ ಸಂಬೋಧನೆಯೇ ಸಾಕು ಬೊಮ್ಮಾಯಿ ಹಾಗೂ ಕಿಚ್ಚ ಅವರ ನಡುವಿನ ಆತ್ಮೀಯತೆ ಏನು ಅನ್ನುವುದನ್ನು ಸಾರಲು.
ಆದರೆ ಈ ಟ್ವೀಟ್ ಅನ್ನು ಪತ್ರವಳ್ಳಿ ಖ್ಯಾತಿಯ ಚಂದ್ರಚೂಡ್ ನೋಡಿದ್ರೆ ಹೇಗಿರಬಹುದು. ಬಿಗ್ ಬಾಸ್ ಮನೆಯಲ್ಲಿ ಮಾವ ಎಂದು ಸಂಬರಗಿಯನ್ನು ಮಂಜು ಕರೆಯುವುದೇ ತಪ್ಪು ಎಂದು ಸಾರಿದವರು ಚಂದ್ರಚೂಡ್. ಮಾಮ ಹಾಗೂ ಮಾವ ಎರಡು ಪದಗಳ ಅರ್ಥ ಬಳಕೆಯ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಆದರೆ ಮಿಡಲ್ ಫಿಂಗರ್ ಖ್ಯಾತಿಯ ಬಿಪ್ ಚಂದ್ರಚೂಡ್ ಅವರಿಗೆ ಇದು ಅರ್ಥವಾಗಿರಲಿಲ್ಲ.
ಇದೀಗ ಸುದೀಪ್ ಅವರು ನೂತನ ಸಿಎಂ ಅವರನ್ನು ಗೌರವದಿಂದ , ಪ್ರೀತಿಯಿಂದ ಮಾಮ ಎಂದು ಕರೆದಿರುವುದು ಚಂದ್ರಚೂಡ್ ಕಣ್ಣಿಗೆ ಬಿದ್ರೆ ಅಷ್ಟೇ ಕಥೆ. ಸುದೀಪ್ ಮಾಮ ಎಂದು ಕರೆಯಬಾರದಿತ್ತು ಅನ್ನುತ್ತಾರೆ ಅವರು. ಮಾಮ ಅನ್ನುವುದು ಕೂಡಾ ಅತ್ಯಂತ ಗೌರವಯುತವಾಗಿ ಹಿರಿಯರಿಗೆ ಬಳಸುವ ಗೌರವಯುತ ಪದ ಅನ್ನುವುದು ಚಂದ್ರಚೂಡ್ ಗೆ ಗೊತ್ತಿಲ್ಲ. ಮಾವ ಪದದ ಅರ್ಥವೇ ಗೊತ್ತಿಲ್ಲದವರಿಗೆ ಮಾಮ ಪದದ ತೂಕ ಗೊತ್ತಿರಲು ಹೇಗೆ ಸಾಧ್ಯ.
ಮಿಡಲ್ ಫಿಂಗರ್ ಅನ್ನು ಸಮತೋಲನದ ಬೆರಳು ಎಂದು ವಾದಿಸುವವರಿಂದ ಇನ್ನೇನು ನಿರೀಕ್ಷಿಸಬಹುದು.
Discussion about this post