ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಪೊಲೀಸರ ಕಾರ್ಯವೈಖರಿ ತೀವ್ರ ಟೀಕೆಗೆ ಗುರಿಯಾಗುತ್ತಿದೆ. ನಿಯಮ ಮೀರಿ ವಾಹನಗಳನ್ನು ಟೋಯಿಂಗ್ ಮಾಡುವುದೇ ಇದಕ್ಕೆ ಕಾರಣ. ನಿಯಮಗಳ ಪ್ರಕಾರ ಟೋಯಿಂಗ್ ಮಾಡುವ ಮುನ್ನ ಮೈಕ್ ನಲ್ಲಿ ಅನೌನ್ಸ್ ಮಾಡಬೇಕು. ಒಂದಿಷ್ಟು ನಿಮಿಷ ಕಾಯಬೇಕು, ಒಂದು ವೇಳೆ ಟೋಯಿಂಗ್ ವಾಹನಕ್ಕೆ ವಾಹನ ಏರಿಸದ ತಕ್ಷಣ ಮಾಲೀಕರು ಬಂದರೆ ಕೇವಲ ದಂಡ ವಿಧಿಸಿ ವಾಹನ ನೀಡಬೇಕು. ಆದರೆ ಇದ್ಯಾವುದನ್ನೂ ಮಾಡದ ಪೊಲೀಸರು, ವಾಹನಗಳನ್ನು ಕೊಂಡೊಯ್ಯುತ್ತಾರೆ.
ಈ ಬಗ್ಗೆ ಕಡಿವಾಣ ಹಾಕಬೇಕಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡಾ ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇನ್ನು ಗೃಹ ಸಚಿವರು ಇಲಾಖೆಗೆ ಸುಧಾರಣೆ ತರುತ್ತೇನೆ ಅನ್ನುತ್ತಿದ್ದಾರೆ. ಈ ನಡುವೆ ಟೋಯಿಂಗ್ ವಾಹನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ವಿಧಿಸೋ ದಂಡ ಹಾಗೂ ಟೋಯಿಂಗ್ ವೆಚ್ಚದ ಬಗ್ಗೆ ಬ್ಯಾನರ್ ಕಟ್ಟಿ ಜಾಗೃತಿ ಮೂಡಿಸಲು ಪೊಲೀಸರು ಹೊರಟಿದ್ದಾರೆ.
ಪ್ರತಿ ಟೋಯಿಂಗ್ ವಾಹನಗಳಲ್ಲಿ ದಂಡದ ದರ ಪಟ್ಟಿಗಳನ್ನು ಪ್ರಕಟಿಸಲಾಗಿದೆ. ಈ ಮೂಲಕ ಪಾರ್ಕಿಂಗ್ ದಂಡದ ನೆಪದಲ್ಲಿ ಭ್ರಷ್ಟಚಾರ ನಿಯಂತ್ರಣವಾಗಲಿದೆ ಅನ್ನುವುದು ಅಧಿಕಾರಿಗಳ ಅಭಿಪ್ರಾಯ. ಹಾಗೇ ನೋಡಿದರೆ ಟೋಯಿಂಗ್ ದರ ಅವೈಜ್ಞಾನಿಕ ಅನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಬೈಕ್ ನೋ ಪಾರ್ಕಿಂಗ್ ನಲ್ಲಿದ್ರೆ 500 ರೂಪಾಯಿ ದಂಡ ಟೋಯಿಂಗ್ ಗೆ 650 ರೂಪಾಯಿ. ಹಾಗಾದ್ರೆ ಟೋಯಿಂಗ್ ವಾಹನಗಳು ದಿನಕ್ಕೆ ಸಂಪಾದಿಸುವ ಮೊತ್ತವೆಷ್ಟಾಯ್ತು. ಇದೇ ಮೊತ್ತದಲ್ಲಿ ವಾಹನದ ಡಿಸೇಲ್, ಸಿಬ್ಬಂದಿಗಳ ಸಂಬಳ ನೀಡಿದರೂ ಎಷ್ಟು ಲಾಭ ಉಳಿಯಬಹುದು.
Discussion about this post