ಬೆಂಗಳೂರು : 3 ತಿಂಗಳ ಹಿಂದೆ ಕೆಜಿಗೆ 10 ರೂಪಾಯಿ ಇದ್ದ ಟೊಮೆಟೋ ಬೆಲೆ ಇದೀಗ 70 ರೂಪಾಯಿಯ ಗಡಿಗೆ ಬಂದು ನಿಂತಿದೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಟೊಮೆಟೋ ದರ ಏರಿಕೆಯಾಗಿದೆ ಅನ್ನಲಾಗಿದ್ದು, ಮಳೆಯಿಂದ ಟೊಮೆಟೋ ಬೆಳೆಗೆ ತೀವ್ರವಾಗಿ ಹಾನಿಯಾಗಿದೆ. ಹೀಗಾಗಿ ದರ ಗಗನಮುಖಿಯಾಗಿದೆ. ಮಳೆ ಹೆಚ್ಚಾದ ಕಾರಣ ಇಳುವರಿ ಕಡಿಮೆಯಾಗಿದ್ದು, ಬೆಂಗಳೂರು ನಗರಕ್ಕೆ ಪ್ರತೀ ದಿನ 60 ರಿಂದ 70 ಲಾರಿಗಳಲ್ಲಿ ಬರುತ್ತಿದ್ದ ಟೊಮೆಟೋ ಇದೀಗ 20 ರಿಂದ 30 ಲಾರಿಗೆ ಬಂದು ನಿಂತಿದೆ.
ಬೆಂಗಳೂರಿನ ಎಪಿಎಂಸಿ ಹಾಗೂ ಹಾಪ್ ಕಾಮ್ಯ್ ನಲ್ಲಿ ಒಳ್ಳೆಯ ಗುಣ್ಣಮಟ್ಟದ ಟೊಮೆಟೋವನ್ನು 60 ರೂಪಾಯಿಗೆ ಮಾರಾಟ ಮಾಡಲಾಗಿದೆ. ಇನ್ನು ಪರಿಸ್ಥಿತಿ ಹೀಗೆ ಮುಂದುವರಿದರೆ ಈ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದೆ.
Discussion about this post