ಬೆಂಗಳೂರು ಈಗಾಗಲೇ ಕನ್ನಡಿಗರ ನೆಲ ಅನ್ನುವುದಕ್ಕಿಂತ ಅದು ಪರ ಭಾಷಿಕರ ನೆಲವಾಗಿ ಹೋಗಿದೆ ಅನ್ನುವುದಕ್ಕೆ ಸಾವಿರ ಸಾಕ್ಷಿಗಳಿವೆ.
ಈಗಾಗಲೇ ಬಿಡುಗಡೆಯಾಗಿರುವ ಜನಗಣತಿ ವರದಿ ಕೂಡಾ ಬೆಂಗಳೂರಿನಲ್ಲಿ ಕನ್ನಡಿಗರ ಪಾಡೇನು ಅನ್ನುವುದನ್ನು ಸಾರಿ ಸಾರಿ ಹೇಳಿದೆ. ವಲಸಿಗರ ಕಾರಣದಿಂದ ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಕೈ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗೆ ಬೆಂಗಳೂರಿನಲ್ಲಿ ಕನ್ನಡಕ್ಕಾಗಿ ಎತ್ತಿದ ಕನ್ನಡಿಗರೊಬ್ಬರ ಮೇಲೆ ದೌರ್ಜನ್ಯ ಎಸಗಿದ ರೌಡಿಶೀಟರ್ ಗಳ ಚಳಿಯನ್ನು ಕರವೇ ಕಾರ್ಯಕರ್ತರು ಬಿಡಿಸಿದ್ದಾರೆ.
ಶನಿವಾರ ರಾತ್ರಿ ಜೆಜೆ ನಗರ ಬಳಿಯ ಮಾರ್ಕಂಡೇಶ್ವರ ನಗರದಲ್ಲಿ ಗಂಗಮ್ಮ ದೇವಿ ಉತ್ಸವದ ಸಂದರ್ಭದಲ್ಲಿ ಆರ್ಕೆಸ್ಟ್ರಾ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ನಿರ್ಲಕ್ಷ್ಯ ಮಾಡಿ ಕೇವಲ ತಮಿಳು ಹಾಡನ್ನು ಹಾಡಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಕರವೇ ಕಾರ್ಯಕರ್ತರ ಮೇಲೆ ದೌರ್ಜನ್ಯ ಕೂಡಾ ನಡೆದಿತ್ತು ಎನ್ನಲಾಗಿದೆ.
ಇದರಿಂದ ಕುಪಿತಗೊಂಡ ಕರವೇ ಕಾರ್ಯಕರ್ತರು ಒಟ್ಟಾಗಿ ಕಾರ್ಯಕ್ರಮದ ವೇದಿಕೆಗೆ ನುಗ್ಗಿ ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ ಅನ್ನುವುದನ್ನು ತೋರಿಸಿ ಬಂದಿದ್ದಾರೆ.
ಈ ಆರ್ಕೆಸ್ಟ್ರಾದ ಉಸ್ತುವಾರಿಯನ್ನು ರೌಡಿಶೀಟರ್ ಗಳಾದ ಲವ, ಕುಶ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
Discussion about this post