ಬೆಳಗಾವಿ : ಮತ ಪಡೆಯಲು ನಮ್ಮ ಜನಪ್ರತಿನಿಧಿಗಳು ಅದ್ಯಾವ ಕೆಲಸ ಬೇಕಾದ್ರೂ ಮಾಡ್ತಾರೆ, ಗೆದ್ದ ಮೇಲೆ ಎಲ್ಲವನ್ನೂ ಮರೆತು ಬಿಡ್ತಾರೆ. ಇವತ್ತು ಜನಪ್ರತಿನಿಧಿಗಳ ಬಗ್ಗೆ ಹೇಸಿಗೆ ಹುಟ್ಟಿದೆ ಅಂದ್ರೆ ಅವರ ವರ್ತನೆಗಳೇ ಕಾರಣ. ಈ ನಡುವೆ ಬೆಳಗಾವಿಯಲ್ಲಿ ಚುನಾವಣೆ ಗೆಲ್ಲುವ ಸಲುವಾಗಿ ಬಿಜೆಪಿ ಕೊಟ್ಟಿರುವ ಭರವಸೆ ಅಚ್ಚರಿ ಹುಟ್ಟಿಸಿದೆ. ಅಂದ ಹಾಗೇ ಬಿಜೆಪಿಯವರು ಕೊಟ್ಟಿರುವ ಭರವಸೆ ಈಡೇರಬೇಕಾದರೆ ಮತ ಕೊಟ್ಟವನು ಸಾಯಬೇಕು.
ಹೌದು ಕುಂದಾನಗರಿಯಲ್ಲಿ ಪಾಲಿಕೆ ಚುನಾವಣೆ ಕಾವು ಏರಿದ್ದು, ಸೆಪ್ಟಂಬರ್ 3 ರಂದು ನಡೆಯಲಿರುವ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಸರ್ಕಸ್ ಪ್ರಾರಂಭಿಸಿವೆ. ಮತದಾರ ಪ್ರಭುವಿನ ಮನಗೆಲ್ಲಲು ಬಣ್ಣ ಬಣ್ಣದ ಭರವಸೆಗಳನ್ನು ನೀಡಲಾಗುತ್ತಿದೆ. ಈ ನಡುವೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಭರ್ಜರಿ ಭರವಸೆಗಳನ್ನು ಕೊಟ್ಟಿದೆ. ದುರಂತ ಅಂದ್ರೆ ಬಿಜೆಪಿ ಇದೇ ಪ್ರಣಾಳಿಕೆಯಲ್ಲಿ ಪರೋಕ್ಷವಾಗಿ ಮತದಾರರ ಸಾವು ಬಯಸಿದೆ.
ಒಂದು ವೇಳೆ ಬಿಜೆಪಿಯನ್ನು ಗೆಲ್ಲಿಸಿದರೆ, ಸತ್ತರೆ ಉಚಿತ ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡುತ್ತೇವೆ ಅನ್ನುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದು, ಬಿಜೆಪಿ ನಡೆಯನ್ನೇ ಪ್ರಶ್ನಿಸುವಂತಾಗಿದೆ. ಅಷ್ಟೇ ಅಲ್ಲದೆ ಉಚಿತ ಶವಸಂಸ್ಕಾರದ ಭರವಸೆ ಬೇರೆ ಕೊಡಲಾಗಿದೆ. ಇವೆಲ್ಲವೂ ಪ್ರಣಾಳಿಕೆಯಲ್ಲಿ ಸೇರಿಸುವ ಅಂಶಗಳೇ..? ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾದ ಬಿಜೆಪಿ ಸಾವಿನ ವಿಷಯದಲ್ಲೂ ಮತ ಭೇಟೆ ಪ್ರಾರಂಭಿಸಿರುವುದು ದುರಂತವೇ ಸರಿ.
Discussion about this post