ಮೊನ್ನೆ ಮೊನ್ನೆ ಮೆಕ್ ಡೊನಾಲ್ಡ್ಸ್ ರೆಸ್ಟೋರೆಂಟ್ ನಲ್ಲಿ ಮಗುವೊಂದು ಉಪಯೋಗಿಸಿದ ಕಾಂಡೋಮ್ ಜಗಿದದ್ದು ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಚೀನಾದಲ್ಲಿ ‘ಮೆಕ್ ವಿಂಗ್ಸ್’ ಖರೀದಿಸಿದ್ರೆ ಸಂಸ್ಥೆಯವರು ಚಿಕನ್ ಜೊತೆಗೆ ಪುಕ್ಕವನ್ನು ಕರಿದು ಕೊಟ್ಟಿದ್ದಾರೆ.
ಚೀನಾ ರಾಜಧಾನಿ ಬೀಜಿಂಗ್ ಮೂಲದ ಮಹಿಳೆಯೊಬ್ಬರು ಏಪ್ರಿಲ್ 21ರಂದು ಟೇಕ್ ಅವೇ ಪದ್ದತಿ ಪ್ರಕಾರ ರೆಸ್ಟೊರೆಂಟ್ ನಿಂದ ಮನೆಗೆ ಚಿಕನ್ ವಿಂಗ್ಸ್ ಅನ್ನೋ ಖಾದ್ಯವನ್ನು ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದರು.
ಮನೆಯಲ್ಲಿ ಆತೀ ಆಶೆಯಿಂದ ಪಾರ್ಸೆಲ್ ಬಿಚ್ಚಿದ ಮಹಿಳೆಯ ಮಗಳು ಚಿಕನ್ ವಿಂಗ್ಸ್ ಸವಿದಿದ್ದಾಳೆ. ಕೆಲ ಹೊತ್ತಿನಲ್ಲೇ ಹುಡುಗಿ ವಾಂತಿ ಮಾಡಿಕೊಳ್ಳಲಾರಂಭಿಸಿದೆ. ಎನೆಂದು ನೋಡಿದ್ರೆ ಹೆಸರಿಗೆ ತಕ್ಕ ಅನ್ನುವಂತೆ ಪುಕ್ಕಗಳನ್ನು ಪಾರ್ಸೆಲ್ ಮಾಡಿದ್ದರು ರೆಸ್ಟೊರೆಂಟ್ ಮಂದಿ.
ಕೋಳಿ ರೆಕ್ಕೆಯಿಂದ ಡಿಶ್ ತಯಾರಿಸುವ ಮುನ್ನ ಪುಕ್ಕಗಳನ್ನು ಕ್ಲೀನ್ ಮಾಡುವುದು ವಾಡಿಕೆ, ಆದರೆ ಈ ರೆಸ್ಟೊರೆಂಟ್ ಮಂದಿ ಮಾತ್ರ ರೆಕ್ಕೆ ಜೊತೆ ಪುಕ್ಕವನ್ನೂ ಕಳುಹಿಸಿಕೊಡ್ಡಿದ್ದರು.
ಇನ್ನು ಮಹಿಳೆ ತಂದ ಡಿಶ್ ನಲ್ಲಿ ಗರಿಗಳಿದೆ ಎಂದು ಕಂಡುಹಿಡಿಯುವಷ್ಟರಲ್ಲಿ ಮಗಳು ಮೂರು ಚಿಕನ್ ರೆಕ್ಕೆಗಳನ್ನು ತಿಂದಾಗಿತ್ತು.
ಇನ್ನು, ಘಟನೆಯ ಬಳಿಕ ಹೋಟೆಲ್ಗೆ ಹೋಗಿ ಮಹಿಳೆ ದೂರು ಕೊಟ್ಟಿದ್ದು, ರೆಸ್ಟೊರೆಂಟ್ ಮಂದಿ ಪರಿಹಾರ ಕೊಡಲು ಮುಂದೆ ಬಂದಿದ್ದಾರೆ. ಇದನ್ನು ನಿರಾಕರಿಸಿರುವ ಮಹಿಳೆ ರೆಸ್ಟೋರೆಂಟ್ ನವರು ಆಹಾರದ ಸುರಕ್ಷತೆ ಸಂಬಂಧ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪ್ರಶ್ನೆಗಳಿವೆ ಅಂದಿದ್ದಾರೆ.
ಇದರೊಂದಿಗೆ ಚೀನಾ ಮಹಿಳೆ ರಾಜ್ಯ ಆಹಾರ ಹಾಗೂ ಔಷಧ ಆಡಳಿತಕ್ಕೆ ಈ ಘಟನೆ ಸಂಬಂಧ ದೂರು ನೀಡಿದ್ದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಮೆಕ್ಡೊನಾಲ್ಡ್ಸ್ ಸಂಸ್ಥೆಯ ವಿರುದ್ಧ ಇದೇನೂ ಹೊಸ ಆರೋಪಗಳಲ್ಲ. ಸ್ವಚ್ಛತೆ ಕೊರತೆ ಮತ್ತು ನಿರ್ಲಕ್ಷ್ಯದ ಕಾರಣಕ್ಕೆ ಈ ಸಂಸ್ಥೆ ಮೇಲೆ ಸಾಕಷ್ಟು ದೂರುಗಳಿದೆ. ಆದರೆ ಬಹುರಾಷ್ಟ್ರೀಯ ಕಂಪನಿ ಅನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳುವವರು ಯಾರು ಇಲ್ಲ.
Discussion about this post