ಹಾಸನದಲ್ಲಿ ಎಸ್ಎಸ್ಎಲ್ಸಿ ಉತ್ತಮ ಫಲಿತಾಂಶ ಬರಲು ಡಿಸಿ ರೋಹಿಣಿ ಸಿಂಧೂರಿಯಲ್ಲ, ನನ್ನ ಪತ್ನಿ ಭವಾನಿ ರೇವಣ್ಣ ಕಾರಣ ಎಂದು ಲೋಕೋಪಯೋಗಿ ಸಚಿವ ಹೆಚ್ಡಿ ರೇವಣ್ಣ ಹೇಳಿದ್ದಾರೆ.
SSLC ಫಲಿತಾಂಶದಲ್ಲಿ ಹಾಸನ ನಂಬರ್ 1 ಸ್ಥಾನಕ್ಕೆ ಏರಿರುವುದರ ಹಿಂದೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಕೊಡುಗೆ ಹೆಚ್ಚಿದೆ ಎಂದು ನಿನ್ನೆ ಮಾಧ್ಯಮಗಳ ಪ್ರಕಟವಾದ ಬೆನ್ನಲ್ಲೇ ಇದೀಗ ರೇವಣ್ಣ ಅವರು ರೋಹಿಣಿ ಸಿಂಧೂರಿ ಅವರ ಕೊಡುಗೆ ಏನು ಇಲ್ಲ ಅಂದಿದ್ದಾರೆ.
ಈ ಸಾಧನೆಗೆ ನನ್ನ ಪತ್ನಿ ಭವಾನಿ ಜಿಲ್ಲಾ ಪಂಚಾಯಿತಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿದ್ದು ಹಾಸನ ಪ್ರಥಮ ಸ್ಥಾನಕ್ಕೇರಲು 3-4 ಬಾರಿ ಸಭೆ ನಡೆಸಲಾಗಿತ್ತು. ಅಲ್ಲದೆ ವಿಶೇಷ ತರಗತಿ ನಡೆಸಲು ಸೂಚಿಸಿದ್ದರು. ಇದೇ ಮುಖ್ಯ ಕಾರಣ ಎಂದು ಹೇಳಿದ್ದಾರೆ.
ನಾನು ಸಚಿವನಾದ ಬಳಿಕ ವಿಶೇಷ ತರಬೇತಿ ನಡೆಸಲು ಸೂಚಿಸಿದ್ದೆ ಅದರೆ ಕೆಲವು ಶಾಲೆಗಳಲ್ಲಿ ಭಾನುವಾರವೂ ಶಿಕ್ಷಕರು ತರಗತಿ ಮಾಡಿದ್ದಾರೆ. ಹಾಸನಕ್ಕೆ ಉತ್ತಮ ಫಲಿತಾಂಶ ಬಂದ ಶಾಲೆಗೆ ಶಿಕ್ಷಕರಿಗೆ ಮುಖ್ಯಮಂತ್ರಿಗಳನ್ನು ಕರೆಸಿ ಸನ್ಮಾನ ಮಾಡುವುದಾಗಿ ಹೇಳಿದ್ದೆ ಎಂದರು.
ಇದೇ ವೇಳೆ ಹಿಂದಿನ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದ ರೇವಣ್ಣ, ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಜಿಲ್ಲೆಯಲ್ಲಿ ಏನು ಕಡಿದು ಕಟ್ಟಿ ಹಾಕಿದ್ದಾರೆ ಹೇಳಿ. ಜಿಲ್ಲೆಯಲ್ಲಿ ಫಲಿತಾಂಶ ಹೆಚ್ಚಾಗುವಲ್ಲಿ ನನ್ನ ಪತ್ನಿ ಭವಾನಿ ಯತ್ನ ಇದೆ ಪತ್ನಿ ಪರ ಎರಡೆರಡು ಹಾರಿ ಬ್ಯಾಟಿಂಗ್ ಮಾಡಿದ ರೇವಣ್ಣ, ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಕೊಡುಗೆ ಏನೂ ಇಲ್ಲ. ಅವರು ಶಿಕ್ಷಕರಿಗೆ ಪರೀಕ್ಷೆ ಮಾಡಲು ಹೋಗಿದ್ದು ಸದನದಲ್ಲಿ ಚರ್ಚೆಯಾಗಿತ್ತು. ಅಲ್ಲಿ ಎಲ್ಲರೂ ಅವರ ನಿರ್ಧಾರಕ್ಕೆ ಉಗಿದಿದ್ರು. ಬಳಿಕ ಅದು ರದ್ದಾಗಿತ್ತು ಎಂದು ವ್ಯಂಗ್ಯವಾಡಿದ್ರು.
ಏನೇ ಹೇಳಿ ಫಲಿತಾಂಶದ ಹಿಂದೆ ಮಕ್ಕಳು ಮತ್ತು ಶಿಕ್ಷಕರ ಪಾತ್ರವಿದೆ. ಇನ್ನು ಈ ಫಲಿತಾಂಶದ ಹಿಂದೆ
ರೋಹಿಣಿಯವರ ದೊಡ್ಡ ಸಾಧನೆ ಇದೆ. ಅವರು ಜಿಲ್ಲಾಧಿಕಾರಿಯಾಗಿ ಹೋದ ಸಂದರ್ಭದಲ್ಲಿ ತೆಗೆದುಕೊಂಡ ಮೊದಲ ಟಾಸ್ಕ್ ಜಿಲ್ಲೆಯ ಫಲಿತಾಂಶವನ್ನು ಉತ್ತಮಗೊಳಿಸುವುದಾಗಿತ್ತು. ಏನೇ ಆದ್ರೂ ಟಾಪ್ 3ಯಲ್ಲಿ ಹಾಸನ ಇರಲೇಬೇಕು ಎಂದು ಅವರು ಸೂಚನೆ ಕೊಟ್ಟಿದ್ದರು. ಕೇವಲ ಸೂಚನೆ ಮಾತ್ರವಲ್ಲದೆ, ತಾಯಂದಿರ ಸಭೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ರೇವಣ್ಣ ಇವತ್ತು ಪತ್ನಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದೇ ರೇವಣ್ಣ ಹಲವು ಕಾಲದಿಂದ ಶಾಸಕರಾಗಿದ್ದಾರೆ, ಆಗ ಫಲಿತಾಂಶದ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಲಿಲ್ಲ. ಒಂದು ವೇಳೆ ಇದು ಭವಾನಿಯವರ ಸಾಧನೆಯೇ ಆಗಿದ್ದರೆ, ನೀವ್ಯಾಕೆ ಇನ್ನೂ ಶಾಸಕರಾಗಿರಬೇಕು, ಭವಾನಿಯವರೇ ಶಾಸಕರಾಗ್ಲಿ ಅಲ್ವಾ..ಮತ್ತಷ್ಟು ಕ್ರಾಂತಿಕಾರಿ ಕೆಲಸಗಳಾಗಬಹುದು ತಾನೇ.
Discussion about this post