ರಸ್ತೆಯಲ್ಲಿ ಗುಂಡಿ ಬಿದ್ದಿದೆ ಮುಚ್ಚುವ ಬಗ್ಗೆ ಬಿಬಿಎಂಪಿ ( bbmp high court ) ತಲೆ ಕೆಡಿಸಿಕೊಂಡಿಲ್ಲ. ಮನೆಯಲ್ಲಿ ಜ್ಯೋತಿಷ್ಯ ಹೇಳಿದ್ರೆ ಬಿಬಿಎಂಪಿಗೆ ಕಾನೂನು ಉಲ್ಲಂಘನೆಯಾಗುತ್ತದೆಯಂತೆ.
ಬೆಂಗಳೂರು : ರಾಜಾಜಿನಗರದ 2ನೇ ಬ್ಲಾಕ್ ನಲ್ಲಿರುವ ತಮ್ಮ ಮನೆಯಲ್ಲಿ ಬಾಲಕೃಷ್ಣ ಶಾಸ್ತ್ರಿ ಅನ್ನುವವರು ಜ್ಯೋತಿಷ್ಯ ಹೇಳುತ್ತಿದ್ದರು. ಅದು ಯಾರೂ ಬಿಬಿಎಂಪಿಗೆ ( bbmp high court )ದೂರು ಕೊಟ್ಟರೋ ಗೊತ್ತಿಲ್ಲ. 2013ರ ಡಿಸೆಂಬರ್ 12 ರಂದು ಶಾಸ್ತ್ರಿಯವರಿಗೆ ನೋಟಿಸ್ ಕೊಟ್ಟ ಬಿಬಿಎಂಪಿ ಆರೋಗ್ಯಾಧಿಕಾರಿ ನೀವು ಅನಧಿಕೃತವಾಗಿ ಕೈಗಾರಿಕಾ ಚಟುವಟಿಕೆ ನಡೆಸುತ್ತಿದ್ದೀರಿ. ಜನವಸತಿ ಪ್ರದೇಶದಲ್ಲಿ ನಿಯಮಬಾಹಿರವಾಗಿ ವಾಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಆರೋಪ ಹೊರಿಸಿದ್ದರು.
ಬಳಿಕ 2014ರ ಡಿಸೆಂಬರ್ 12 ರಂದು ಮತ್ತೊಂದು ನೋಟಿಸ್ ಕೊಟ್ಟ ಜಂಟಿ ಆಯುಕ್ತರು ಜ್ಯೋತಿಷ್ಯ ಕೇಂದ್ರವಿರುವ ಜಾಗ ವಸತಿ ಪ್ರದೇಶದ ವ್ಯಾಪ್ತಿಯಲ್ಲಿದೆ. ಅಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವಂತಿಲ್ಲ. ಹೀಗಾಗಿ ಮನೆಯ ಆವರಣದಲ್ಲಿರುವ ಜ್ಯೋತಿಷ್ಯ ಕೇಂದ್ರ ಮುಚ್ಚಿ ಎಂದು ಸೂಚಿಸಿದ್ದರು. ಈ ನೊಟೀಸ್ ಗೆ ಬಾಲಕೃಷ್ಣ ಶಾಸ್ತ್ರಿ ಉತ್ತರಿಸಿದ್ದರು. ನನ್ನ ಈ ಕೆಲಸದಿಂದ ಸ್ಥಳೀಯ ನಿವಾಸಿಗಳಿಗೆ ಯಾವುದೇ ತೊಂದರೆ ಇಲ್ಲ. ಮನೆಯಲ್ಲಿ ನಾನು ಯಾವುದೇ ಉತ್ಪಾದನಾ ಅಥವಾ ವಾಣಿಜ್ಯ ಚಟುವಟಿಕೆ ನಡೆಸುತ್ತಿಲ್ಲ. ಜೊತೆಗೆ ಜ್ಯೋತಿಷ್ಯ ಕೇಂದ್ರ ನಡೆಸಲು ಯಾವುದೇ ಟ್ರೇಡ್ ಲೈಸೆನ್ಸ್ ಬೇಕಾಗಿಲ್ಲ ಎಂದು ವಾದಿಸಿದ್ದರು. ಆದರೆ ಶಾಸ್ತ್ರಿಗಳ ಮಾತು ಕೇಳಲು ಬಿಬಿಎಂಪಿ ಸಿದ್ದವಿರಲಿಲ್ಲ.
ಇದನ್ನೂ ಓದಿ : DMK MP Senthilkumar : ನಾವು ನಾಸ್ತಿಕರು : ಭೂಮಿ ಪೂಜೆ ವೇಳೆ ಹಿಂದೂ ಅರ್ಚಕರನ್ನು ಕಂಡು ಡಿಎಂಕೆ ಸಂಸದ ಗರಂ
ಹೀಗಾಗಿ 2015ರ ಎಪ್ರಿಲ್ 8 ರಂದು ಜ್ಯೋತಿಷ್ಯ ಕೇಂದ್ರ ಮುಚ್ಚುವಂತೆ ಬಿಬಿಎಂಪಿ ಆದೇಶ ಹೊರಡಿಸಿತ್ತು. ಈ ಆದೇಶ ಹೊರಡಿಸುವ ವೇಳೆ ವಸತಿ ನಿಲಯದಲ್ಲಿ ತಾವು ನಡೆಸುತ್ತಿರುವ ವಾಣಿಜ್ಯ ಚಟುವಟಿಕೆ ಎಂದು ಹೇಳಿತ್ತು. ಜೊತೆಗೆ ತಾವು ಮನೆಯಲ್ಲಿ ವಾಣಿಜ್ಯ ವ್ಯವಹಾರ ನಡೆಸಲು ಅವಕಾಶವಿಲ್ಲ ಹೀಗಾಗಿ ನಿಮ್ಮ ಕೇಂದ್ರವನ್ನು ಮುಚ್ಚಿ ಅಂದಿತ್ತು. ಈ ಆದೇಶದ ವಿರುದ್ಧ ಶಾಸ್ತ್ರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೂ ಬಿಬಿಎಂಪಿ ಕೊಟ್ಟ ಉತ್ತರವನ್ನೇ ವಾದವನ್ನಾಗಿ ಮಂಡಿಸಿದ್ದರು. ಹೈಕೋರ್ಟ್ ನಲ್ಲಿ ಬಿಬಿಎಂಪಿ ಜ್ಯೋತಿಷ್ಯ ಕೇಳಲು ವಾಣಿಜ್ಯ ಪರವಾನಿಗೆ ಪಡೆದಿಲ್ಲ, ವಸತಿ ವಲಯಕ್ಕೆ ಬರೋ ಭಾಗದಲ್ಲಿ ಅರ್ಜಿದಾರರು ವಾಣಿಜ್ಯ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ವಾದಿಸಿದ್ದರು.
ವಾದ ವಿವಾದ ಆಲಿಸಿದ ಹೈಕೋರ್ಟ್ 2015ರಲ್ಲಿ ಬಿಬಿಎಂಪಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದು, ಜ್ಯೋತಿಷ್ಯ ಹೇಳುವ ಚಟುವಟಿಕೆಗೆ ಅಡ್ಡಿಪಡಿಸಬೇಡಿ ಎಂದು ಬಿಬಿಎಂಪಿಗೆ ಸೂಚಿಸಿದೆ. ಜೊತೆಗೆ ಜ್ಯೋತಿಷ್ಯ ಕೇಳಲು ಬರುವ ಗ್ರಾಹಕರಿಂದಾಗಿ ಸ್ಥಳದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿದೆ.
ಇನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಜ್ಯೋತಿಷ್ಯವನ್ನು ವ್ಯಾಪಾರ ಎಂದು ಪರಿಗಣಿಸಲಾಗದು. ಸಿಎಗಳು, ವಕೀಲರು, ವೈದ್ಯರು ತಮ್ಮ ಮನೆ ಆವರಣದಲ್ಲೇ ಕಚೇರಿ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೆ ಬಿಬಿಎಂಪಿ ಆಕ್ಷೇಪಿಸಿಲ್ಲ. ಇನ್ನು ವೃತಿಪರ ಸೇವೆ ಒದಗಿಸುವ ವರ್ಗದವರು ವಸತಿ ಪ್ರದೇಶಗಳಲ್ಲಿ ಚಟುವಟಿಕೆ ನಡೆಸಲು 2015ರ ನಿಯಮದಲ್ಲೇ ಅವಕಾಶವಿದೆ ಎಂದು ಹೇಳಿದೆ.
ಪಂಜಾಬ್ ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ರೆ ದಂಡದ ಜೊತೆಗೆ ರಕ್ತದಾನವೂ ಕಡ್ಡಾಯ
ಪಂಜಾಬ್ ಪೊಲೀಸರು ಭಾನುವಾರ ಬಿಡುಗಡೆ ಮಾಡಿರುವ ಹೊಸ ಟ್ರಾಫಿಕ್ ನಿಯಮಗಳ ಪ್ರಕಾರ ಈ ಹೊಸ ನಿಯಮಗಳನ್ನು ಸೇರಿಸಲಾಗಿದೆ
ಚಂಡೀಗಢ : ಅತೀ ವೇಗದ ವಾಹನ ಚಾಲನೆ, ಮದ್ಯ ಸೇವಿಸಿ ವಾಹನ ಚಾಲನೆ ಹೀಗೆ ವಿವಿಧ ರೀತಿಯ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ರೆ ಪಂಜಾಬ್ ನಲ್ಲಿ ದಂಡ ಮಾತ್ರವಲ್ಲ ಆಸ್ಪತ್ರೆಯಲ್ಲಿ ಸಮುದಾಯ ಸೇವೆ ಅಥವಾ ರಕ್ತದಾನ ಕಡ್ಡಾಯವಾಗಿ ಮಾಡಲೇಬೇಕು. ಇಂತಹುದೊಂದು ಆದೇಶವನ್ನು ಪಂಜಾಬ್ ಪೊಲೀಸರು ಬಿಡುಗಡೆ ಮಾಡಿದ್ದು, ಟ್ರಾಫಿಕ್ ನಿಯಮಗಳ ಉಲ್ಲಂಘನೆಗೆ ದಂಡ, ಲೈಸೆನ್ಸ್ ತಾತ್ಕಾಲಿಕ ರದ್ದು ಜೊತೆಗೆ ರಕ್ತದಾನವನ್ನೂ ಸೇರಿಸಲಾಗಿದೆ.
ವೇಗದ ಮಿತಿಯನ್ನು ಮೀರಿ ವಾಹನ ಚಲಾಯಿಸಿ ಮೊದಲ ಬಾರಿಗೆ ಸಿಕ್ಕಿ ಹಾಕಿದ್ರೆ ಸಾವಿರ ರೂಪಾಯಿ ದಂಡ, ಮೂರು ತಿಂಗಳ ಕಾಲ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ರೆ 5 ಸಾವಿರ ರೂ ದಂಡದೊಂದಿಗೆ ಮೂರು ತಿಂಗಳ ಕಾಲ ಲೈಸೆನ್ಸ್ ರದ್ದು ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ : punjab traffic rules : ಪಂಜಾಬ್ ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ರೆ ದಂಡದ ಜೊತೆಗೆ ರಕ್ತದಾನವೂ ಕಡ್ಡಾಯ
Discussion about this post