ಬೆಂಗಳೂರು : ಬೆಂಗಳೂರಿನಲ್ಲಿ ಕಸದ ಸಮಸ್ಯೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಇದೀಗ ತಡವಾಗಿ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮತ್ತೊಂದು ಕಠಿಣ ನಿಯಮ ಜಾರಿಗೆ ತರಲು ಮುಂದಾಗಿದೆ.
ಹಸಿ ತ್ಯಾಜ್ಯವನ್ನು ವಿಂಗಡಿಸಿ ಕಡ್ಡಾಯವಾಗಿ ಪ್ರತ್ಯೇಕ ಕಸದ ಬುಟ್ಟಿಯಲ್ಲಿ ಹಾಕದೇ ಪ್ಲಾಸ್ಟಿಕ್ ಕವರ್ ನಲ್ಲಿ ಕಟ್ಟಿ ಕೊಟ್ರೆ 500 ರೂಪಾಯಿಯಿಂದ ಸಾವಿರ ರೂಪಾಯಿ ತನಕ ದಂಡ ವಿಧಿಸಲು ನಿರ್ಧರಿಸಿದೆ.
ನಿಯಮಗಳ ಪ್ರಕಾರ ಹಸಿ, ಒಣ ಹಾಗೂ ಸ್ಯಾನಿಟರ್ ತ್ಯಾಜ್ಯವನ್ನು ಪ್ರತ್ಯೇಕ ಮಾಡಿ ಪೌರಕಾರ್ಮಿಕರಿಗೆ ಕೊಡಬೇಕು. ಆದರೆ ಸಾರ್ವಜನಿಕರು ಇದನ್ನು ಪಾಲಿಸುವ ಬಗ್ಗೆ ಒಲವು ತೋರುತ್ತಿಲ್ಲ. ಅನೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಹಾಕಿ ಹಸಿ ಕಸವನ್ನು ಕೊಡುತ್ತಿದ್ದಾರೆ. ಇದು ಘನ ತ್ಯಾಜ್ಯ ವಿಲೇವಾರಿ ನಿಯಮಗಳ ಉಲ್ಲಂಘನೆಯಾಗಲಿದೆ.
ಹೀಗಾಗಿ ಇನ್ನು ಮುಂದೆ ಸಾರ್ವಜನಿಕರು ಹಸಿ ಕಸವನ್ನು ಮರು ಬಳಕೆಯಲ್ಲಿ ಡಬ್ಬಿಯಲ್ಲಿ ಹಾಕಿ ಪೌರ ಕಾರ್ಮಿಕರಿಗೆ ಕೊಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದ್ರೆ ಮೊದಲ ಬಾರಿಗೆ 500 ರೂಪಾಯಿ ಹಾಗೂ ಎರಡನೇ ಬಾರಿಗೆ ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ಇನ್ನು ಸ್ಯಾನಿಟರಿ ತ್ಯಾಜ್ಯವನ್ನು ಪೇಪರ್ ನಲ್ಲಿ ಸುತ್ತಿ ನೀಡುವಂತೆ ಬೆಂಗಳೂರು ನಾಗರಿಕರಲ್ಲಿ ಬಿಬಿಎಂಪಿ ಮನವಿ ಮಾಡಿದೆ.
Discussion about this post