ಸರ್ಕಾರದ ಬೊಕ್ಕಸದಿಂದ ಹಣ ಹೇಗೆ ಲೂಟಿ ಹೊಡೆಯಬೇಕು ಅನ್ನುವುದರ ಕುರಿತಂತ ಹತ್ತಾರು ಪಿಎಚ್ಡಿ ಮಾಡಬಹುದು.ಅದರಲ್ಲೂ ಸರ್ಕಾರಿ ಕಚೇರಿಗಳಿಗೆ ಹೋಗಿ ಅಧ್ಯಯನ ಮಾಡಿದರೆ ಹೀಗೂ ಕೊಳ್ಳೆ ಹೊಡೆಯಬಹುದೇ ಎಂದು ಅನ್ನಿಸದಿರದು.
ಇದಕ್ಕೊಂದು ಬೆಸ್ಟ್ ಏಕ್ಸಾಂಪಲ್ ಬಿಬಿಎಂಪು ಆಯುಕ್ತರ ಸಾಮಾಜಿಕ ಜಾಲತಾಣ ಖಾತೆ ನಿರ್ವಹಣೆಯ ವೆಚ್ಚ.
ಬಿಬಿಎಂಪಿ ಆಯುಕ್ತರ ಟ್ವಿಟರ್ ಹಾಗೂ ಫೇಸ್ ಬುಕ್ ಖಾತೆಗಳನ್ನು ನಿರ್ವಹಿಸುವ ಕುರಿತಂತೆ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರೈ ಟೈಸಿಂಗ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.
ಈ ಸಲುವಾಗಿ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವರೈ ಟೈಸಿಂಗ್ ಸಂಸ್ಥೆಗೆ ಮಾಸಿಕ 7.17 ಲಕ್ಷಗಳನ್ನು ಪಾವತಿಸಲಾಗುತ್ತಿತ್ತು.
ಬಿಬಿಎಂಪಿ ಆಯುಕ್ತರ ಈ ಖಾತೆಗಳಲ್ಲಿ ಸಭೆ, ಸಮಾರಂಭ ಕಾಮಗಾರಿ ತಪಾಸಣೆ ಸೇರಿದಂತೆ ವಿವಿಧ ವಿಚಾರಗಳನ್ನು ಅಪ್ ಲೋಡ್ ಮಾಡಲಾಗುತ್ತದೆ. ಫೋಟೋ, ವಿಡಿಯೋ ತೆಗೆದು ಅದಕ್ಕೊಂದು ತಲೆ ಬರಹ ಬರೆದು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪ್ರಕಟಿಸುವುದಷ್ಟೇ ಕೆಲಸ. ಅದಕ್ಕೆ ಗುತ್ತಿಗೆ ಸಂಸ್ಥೆ ದಿನವೊಂದಕ್ಕೆ 24 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿತ್ತು.
ಇದೇ ರೀತಿಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ,ಘನ ತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಸೇರಿದಂತೆ ಬಿಬಿಎಂಪಿಯ ಅನೇಕ ಸಾಮಾಜಿಕ ಜಾಲತಾಣ ಖಾತೆಗಳನ್ನು ಗುತ್ತಿಗೆ ನೀಡಲಾಗಿದೆ. ಅಲ್ಲಿಗೆ ಬೆಂಗಳೂರಿಗರ ತೆರಿಗೆ ದುಡ್ಡು ಹೇಗೆ ಪೋಲಾಗುತ್ತಿದೆ ಎಂದು ಗಮನಿಸಿ.
ಇನ್ನು ಈ ದುಂದು ವೆಚ್ಚದ ಬಗ್ಗೆ ಎಚ್ಚೆತ್ತುಕೊಂಡಿರುವ ಆಯುಕ್ತ ಮಂಜುನಾಥ ಪ್ರಸಾದ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯನ್ನು ತಾವೇ ನಿರ್ವಹಣೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ಪಾಲಿಕೆ ಬೊಕ್ಕಸಕ್ಕೆ ಹೊರೆಯಾಗಿದ್ದ ಮಾಸಿಕ 7.17 ಲಕ್ಷ ರೂಪಾಯಿ ಉಳಿತಾಯ ಮಾಡಲು ಮುಂದಾಗಿದ್ದಾರೆ.
ಇದು ಪಾಲಿಕೆಯ ಕಥೆ, ಮುಖ್ಯಮಂತ್ರಿ, ಸಚಿವರು, ಸರ್ಕಾರದ ವಿವಿಧ ಇಲಾಖೆಗಳು ಹೀಗೆ ಅನೇಕ ಸಾಮಾಜಿಕ ಜಾಲತಾಣ ಖಾತೆ ನಿರ್ವಹಣೆ ಹೆಸರಿನಲ್ಲಿ ಅದೆಷ್ಟು ಕೋಟಿ ದುಡ್ಡು ಹೊಡೆಯಲಾಗುತ್ತಿದೆಯೋ ಗೊತ್ತಿಲ್ಲ.
ಪಾಲಿಕೆ ಆಯುಕ್ತರಂತೆ ಎಲ್ಲರೂ ಯೋಚಿಸಿದ್ರೆ ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ಕರ್ನಾಟಕದ ಮೂಲೆಯ ಅದ್ಯಾವುದೋ ಹಳ್ಳಿಯೊಂದನ್ನು ಉದ್ಧಾರ ಮಾಡಬಹುದಾಗಿದೆ.
Discussion about this post