ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಅಂತ್ಯಕ್ಕೆ ಇನ್ನು ಕೆಲವೇ ವಾರಗಳು ಬಾಕಿ. ಹೀಗಾಗಿ ಗೆಲುವಿನ ಕಡೆಗೆ ಗುರಿ ಇಟ್ಟಿರುವ ಸ್ಪರ್ಧಿಗಳು ಟಾಪ್ 5 ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಹೊಡೆದಾಡುತ್ತಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಆತ್ಮೀಯರಾಗಿದ್ದವರೆಲ್ಲಾ ಇದೀಗ ಪರಸ್ಪರ ಕಚ್ಟಾಟ ಪ್ರಾರಂಭಿಸಿದ್ದಾರೆ.
ಈಗಾಗಲೇ ಮಂಜು ಹಾಗೂ ದಿವ್ಯಾ ಸುರೇಶ್ ನಡುವೆ ಬಿರುಕು ಮೂಡಿದೆ. ಮತ್ತೊಂದು ಕಡೆ ಶುಭ ಪೂಂಜಾ ಹಾಗೂ ನಿಧಿ ನಡುವೆಯೂ ಸಂಬಂಧ ಹಳಸಿದೆ. ಈ ನಡುವೆ ರಘು ಹಾಗೂ ವೈಷ್ಣವಿ ನಡುವೆ ಕೂಡಾ ಮೋಡ ಆವರಿಸಿತ್ತು. ಆದರೆ ಅವರಿಬ್ಬರು ಅದನ್ನು ಕೂತು ಮಾತನಾಡುವ ಮೂಲಕ ಕರಗಿಸಿಕೊಂಡಿದ್ದಾರೆ.
ತಮ್ಮ ನಡುವಿನ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕುವ ಸಲುವಾಗಿಯೇ ತಡರಾತ್ರಿ ಮಾತು ಪ್ರಾರಂಭಿಸಿದ ವೈಷ್ಣವಿ ಹಾಗೂ ರಘು ನಮ್ಮ ನಡುವೆ ಹೀಗೆ ಮೋಡ ಆವರಿಸಿದ್ಯಾಕೆ ಅನ್ನುವ ಕುರಿತಂತೆ ಚರ್ಚೆ ನಡೆಸಿದ್ದಾರೆ. ಮಾತು ಪ್ರಾರಂಭಿಸಿದ ವೈಷ್ಣವಿ, ನಾನು ನಿಮ್ಮ ಜೊತೆ ಮಾತನಾಡಿಸಲು ಬಂದೆ, ಆದರೆ ನೀವು ನನ್ನ ನೋಡದೆ ಹೋದಿರಿ ಎಂದು ದೂರಿದ್ದಾರೆ.
ಇದಕ್ಕೆ ಉತ್ತರಿಸಿದ ರಘು, ಹೊರಗಡೆ ಮೋಡ ನೋಡಲು ನಿಮ್ಮನ್ನು ಕರೆಯಲು ಬಂದೆ ಆದರೆ ನೀವು ಬರಲಿಲ್ಲ. ಹೀಗಾಗಿ ನಾನು ಸುಮ್ಮನಾದೆ ಅಂದರು. ಹೀಗೆ ಇಬ್ಬರೂ ಸುದೀರ್ಘವಾಗಿ ತಾವು ಎಡವಿದ್ದು ಎಲ್ಲಿ ಅನ್ನುವ ಕುರಿತಂತೆ ಅವಲೋಕನ ನಡೆಸಿದ್ದಾರೆ. ಇಲ್ಲಿನ ಕೆಲವು ಘಟನೆಗಳು ನೋಡಿದ ಮೇಲೆ ಮನಸ್ಸು ಹಾಗಾಗಿದೆ. ಹೀಗಾಗಿ ಮನಸ್ಥಿತಿ ಬದಲಾಗಬೇಕು ಎಂದು ಇಬ್ಬರೂ ಪರಸ್ಪರ ಕ್ಷಮೆಯಾಚಿಸಿ ದೊಡ್ಡತನ ಮರೆತಿದ್ದಾರೆ.
ಪಾಪ ಇವರಿಬ್ಬರ ಈ ಗೆಳೆತನ ಬಿಗ್ ಬಾಸ್ ಮನೆಯ ಬಾಡಿಗಾರ್ಡ್ ಗಳಿಗೆ ಗೊತ್ತೇ ಆಗಲಿಲ್ಲ.
Discussion about this post