ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ ಎಲ್ಲಿ ಸಪ್ಪೆಯಾಗಿ ಬಿಡುತ್ತದೋ ಅನ್ನುವ ಆತಂಕವಿತ್ತು. ಆದರೆ ಸೂಪರ್ ಸಂಡೇ ಎಪಿಸೋಡ್ ನಲ್ಲಿ ಸಿಡಿದೆದ್ದಿರುವ ಚಂದ್ರಚೂಡ್, ಪಾವಗಡ ಮಂಜು ಬೆವರಿಳಿಸಿದ್ದಾರೆ.
ಇವತ್ತಿನ ಮಟ್ಟಿಗೆ ಚಂದ್ರಚೂಡ್ ಮಾತುಗಳು ಸರಿ ಇತ್ತು ಅನ್ನುವುದರಲ್ಲಿ ಎರಡು ಮಾತಿಲ್ಲ.ಮೂರನೇ ದರ್ಜೆ ಜೋಕ್ಸ್, ಗೆಲುವಿಗಾಗಿ ಪ್ರೀತಿಯ ಆಟ, ಶೋ ಸಲುವಾಗಿ ಹೆಂಡ್ತಿ ಎಂದು ಕರೆಯುವುದು ಇವೆಲ್ಲವನ್ನೂ ಕನ್ನಡದ ಸಂಸ್ಕೃತಿ ಒಪ್ಪಿಕೊಳ್ಳುವುದಿಲ್ಲ. ಇದೇ ಕಾರಣಕ್ಕಾಗಿ ಚಂದ್ರಚೂಡ್ ಸಿಡಿದೆದಿದ್ದಾರೆ.
ಅಷ್ಟೇ ಅಲ್ಲದೆ, ಚಂದ್ರಚೂಡ್ ವೈಯುಕ್ತಿಕ ಬದುಕಿನ ಬಗ್ಗೆಯೂ ಮಂಜು ಪ್ರಸ್ತಾಪಿಸಿದ್ದಾರೆ. ಇಡೀ ಕರ್ನಾಟಕ ನೋಡುವ ಶೋದಲ್ಲಿ ಮತ್ತೊಬ್ಬರ ವೈಯುಕ್ತಿಕ ಬದುಕಿನ ಬಗ್ಗೆ ಮಾತನಾಡುವ ಅಗತ್ಯವಿರಲಿಲ್ಲ. ಅಷ್ಟಲ್ಲದೆ ಚಂದ್ರಚೂಡ್ ಮಾಡಿರುವ ಸಾಧನೆಗಳ ಮುಂದೆ ಮಂಜು ಸಾಧನೆ ಶೂನ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಈ ಬಾರಿ ಮಂಜು ಎಡವಿದ್ದಾರೆ ಅನ್ನುವುದು ಸ್ಪಷ್ಟ. ಹೀಗಾಗಿಯೇ ಬಿಪಿ ಏರಿಸಿಕೊಂಡ ಚಂದ್ರಚೂಡ್ ತೂಕದ ಮಾತುಗಳನ್ನಾಡಿದ್ದಾರೆ.
ಈ ನಡುವೆ ಚಂದ್ರಚೂಡ್ ಹಾಗೂ ಮಂಜು ನಡುವಿನ ಕಿತ್ತಾಟವನ್ನು ಸರಿಯಾಗಿ ನಿಭಾಯಿಸಿದ ಹಿರಿಮೆ ಕಿಚ್ಚ ಸುದೀಪ್ ಅವರದ್ದು. ಮಂಜು ಮಾಡಿದ್ದು ತಪ್ಪು ಎಂದು ಗೊತ್ತಿದ್ದರೂ, ಅವರನ್ನು ತಪ್ಪಿತಸ್ಥ ಎಂದು ಕರೆಯದೇ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಇದೇ ವೇಳೆ ಚಂದ್ರಚೂಡ್ ಆಕ್ರೋಶದ ಲಾಭ ಪಡೆಯಲು ಹೊರಟ ಪ್ರಶಾಂತ್ ಸಂಬರಗಿಗೆ ರೇಷ್ಮೆ ಸಾಲಿನಲ್ಲೇ ಹೊಡೆಯುವ ಮೂಲಕ ಸುದೀಪ್ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
Discussion about this post