ಬೆಂಗಳೂರು : ಬಣ್ಣಗಳು ಇದೀಗ ಭಾವನೆಗಳ ಸಂಕೇತವಾಗಿಲ್ಲ. ಹೊಲಸು ರಾಜಕೀಯದ ನಾಯಕರಿಗೆ ರಾಜಕಾರಣದ ಸೊತ್ತಾಗಿ ಪರಿಣಣಿಸಿದೆ. ಇದೇ ರಾಜಕೀಯ ನಾಯಕರು ಧರ್ಮಕ್ಕೊಂದು, ಜಾತಿಗೊಂದು ಬಣ್ಣ ಹಂಚಿ ಇದೀಗ ಎಂಜಾಯ್ ಮಾಡುತ್ತಿದ್ದಾರೆ.
ಅದರಲ್ಲೂ ಇದೀಗ ಸದ್ದು ಮಾಡುತ್ತಿರುವುದು ಸಿದ್ದರಾಮಯ್ಯ ಅವರ ಕೇಸರಿ ರಾಜಕಾರಣ. ಹಾಗಂತ ಬಿಜೆಪಿಯೂ ಕಡಿಮೆ ಇಲ್ಲ. ಕೇಸರಿ ಬಣ್ಣವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ. ಟಿಪ್ಪು ಸುಲ್ತಾನ್ ವಿರೋಧಿಸಿದ ಬಿಜೆಪಿ ನಾಯಕರೇ ಟಿಪ್ಪು ವೇಷ ಭೂಷಣ ಧರಿಸಿದ್ದನ್ನು ಜನ ಮರೆತಿಲ್ಲ.
ಅವೆಲ್ಲಾ ಹಳೆ ಕಥೆ ಅಂದ್ರೆ ಹೊಸ ಕಥೆ ಸಿದ್ದರಾಮಯ್ಯ ಅವರದ್ದು. ವಿಜಯಪುರ ಮತ್ತು ಉಡುಪಿಯ ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಕೇಸರಿ ಶಾಲು ಧರಿಸಿ ಹಬ್ಬ ಆಚರಿಸಿದ್ದು ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಉದ್ದೇಶಗಳಿಲ್ಲದೆ ಖಾಕಿ ಪಡೆಯ ಮಂದಿ ಕೇಸರಿ ಶಾಲು ಧರಿಸಿ ಹಬ್ಬವನ್ನು ಸಂಭ್ರಮಿಸಿದ್ದರು. ಇದನ್ನು ರಾಜಕೀಯವಾಗಿ ಬಳಸಿಕೊಂಡಿರುವ ಸಿದ್ದರಾಮಯ್ಯ ಇದೀಗ ಟ್ವಿಟರ್ ನಲ್ಲಿ ಸಮರ ಸಾರಿದ್ದಾರೆ.
ಆದರೆ ಇದೇ ಸಿದ್ದರಾಮಯ್ಯ ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೇಸರಿ ಶಾಲು ಹಾಕಿಕೊಂಡು ಮತಯಾಚನೆ ಮಾಡಿದಾಗ ಸುಮ್ಮನಿದ್ದರು.
ಇದೇ ವರ್ಷದ ಜನವರಿಯಲ್ಲಿ ತೇಜಸ್ವಿ ಸೂರ್ಯ ಜಮೀರ್ ಅಹಮ್ಮದ್ ಅವರಿಗೆ ಕೇಸರಿ ಶಾಲು ಹಾಕಿ ಸನ್ಮಾನಿಸಿದಾಗ ಸುಮ್ಮನಿದ್ದರು.
ಅಷ್ಟೇ ಅಲ್ಲದೆ 2019ರ ಮೇ ತಿಂಗಳಲ್ಲಿ ಭೋಪಾಲ್ ನಲ್ಲಿ ದಿಗ್ವಿಜಯ್ ಸಿಂಗ್ ಪೊಲೀಸರಿಗೆ ಕೇಸರಿ ಶಾಲು ಹಾಕಿಸಿದ್ದಾರೆ ಅನ್ನುವ ಆರೋಪ ಬಂದಾಗ ಸುಮ್ಮನಿದ್ದರು.
ಇದೀಗ ಪೊಲೀಸರು ಕೇಸರಿ ಶಾಲು ಧರಿಸಿದಾಗ ಮಾತ್ರ ಸಿದ್ದರಾಮಯ್ಯ ಎದ್ದು ನಿಂತಿದ್ದಾರೆ ಅಂದ್ರೆ ಇದು ರಾಜಕೀಯವಲ್ಲದೆ ಮತ್ತೇನು..?
Discussion about this post