ಮಂಗಳೂರು : ಕೊರೋನಾ ಅನ್ನುವ ಮಹಾಮಾರಿ ಜನರ ನಡುವಿನ ಧರ್ಮ ಜಾತಿಯ ಗೋಡೆಗಳನ್ನು ಛಿದ್ರ ಮಾಡಿದೆ. ಮಾನವ ಧರ್ಮವೊಂದೇ ಈ ವಿಶ್ವಕ್ಕೆ ಮಾನ್ಯ ಅನ್ನುವುದನ್ನು ತೋರಿಸಿಕೊಟ್ಟಿದೆ. ಕೊರೋನಾ ಸೋಂಕಿತರ ಸಹಾಯಕ್ಕೆ ಬರವವರೇ ಮನುಷ್ಯತ್ವ ಉಳ್ಳವರು ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಮಹಾಮಾರಿ ಅದೆಷ್ಟರ ಮಟ್ಟಿಗೆ ಸಂಬಂಧಗಳನ್ನು ಸೂಕ್ಷ್ಮಗೊಳಿಸಿದ್ರೆ ಅಂದ್ರೆ ತಂದೆ ಶವ ಮುಟ್ಟಲು ಮಗನೇ ಹಿಂಜರಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೊರೋನಾ ಸತ್ತವರು ಬೀದಿ ಹೆಣವಾಗಬಾರದು ಎಂದು ಮುಂದೆ ಬಂದಿದ್ದು ಅನೇಕ ಸಂಘಟನೆಗಳು.
ಹೀಗೆ ಕೊರೋನಾ ಸಂಕಷ್ಟದ ಸನ್ನಿವೇಶದಲ್ಲಿ ಕೊರೋನಾ ಸೋಂಕಿತರ ನೆರವಿಗಾಗಿ ಆರ್ ಎಸ್ ಎಸ್ ನ ಭಾಗವಾಗಿರುವ ಸೇವಾ ಭಾರತಿ ಕೊರೋನಾ ಆಪತ್ತಿಗೆ ತುತ್ತಾಗಿದ್ದ ಮುಸ್ಲಿಂ ಕುಟುಂಬದ ಸಹಾಯಕ್ಕೆ ದೌಡಾಯಿಸಿದೆ.
ಸೋಂಕಿಗೆ ತುತ್ತಾಗಿದ್ದ ಮುಸ್ಲಿಂ ಕುಟುಂಬದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ಸೇರಿಸಿರುವ ಸೇವಾ ಭಾರತಿ ಸದಸ್ಯರು ಅವರು ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮತ್ತೆ ಅವರನ್ನು ಮನೆಗೆ ತಲುಪಿಸುವ ಕೆಲಸವನ್ನು ಕೂಡಾ ಮಾಡಿದ್ದಾರೆ. ಈ ಮೂಲಕ ಆರ್ ಎಸ್ ಎಸ್ ಸಂಘಟನೆ ಸಂಕಷ್ಟ ಕಾಲದಲ್ಲಿ ಧರ್ಮಕ್ಕೆ ಅಂಟಿಕೊಂಡಿರುವುದಿಲ್ಲ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
Discussion about this post