ಬೆಂಗಳೂರು : ಕಳೆದ ತಿಂಗಳು 100 ರೂಪಾಯಿಯ ಗಡಿ ದಾಟಿದ್ದ ಟೊಮೆಟೋ ಬೆಲೆ ಪಾತಾಳಕ್ಕೆ ಕುಸಿಯಲಾರಂಭಿಸಿದೆ. ಸಗಟು ವ್ಯಾಪಾರಸ್ಥರು ಶನಿವಾರ 26 ರೂಪಾಯಿಗೆ ಟೊಮೆಟೋ ಮಾರಾಟ ಮಾಡಿದ್ದಾರೆ.
ಈ ಬಾರಿ ಬೆಂಗಳೂರು ಸುತ್ತ ಮುತ್ತ ಟೊಮೆಟೋ ಫಸಲು ಚೆನ್ನಾಗಿ ಬಂದಿದ್ದು, ಜೊತೆಗೆ ಮಹಾರಾಷ್ಟ್ರದಿಂದಲೂ ಟೊಮೆಟೋ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಆಗಮಿಸಿದೆ. ಹೀಗಾಗಿ ದರ ಕುಸಿಯುತ್ತಿದೆ ಅನ್ನಲಾಗಿದೆ.
ಕಳೆದ ತಿಂಗಳು ಸುರಿದ ಅಕಾಲಿಕ ಮಳೆ ಟೊಮೆಟೋ ಬೆಳೆಯನ್ನು ನಾಶ ಮಾಡಿತ್ತು. ಹೀಗಾಗಿ ಟೊಮೆಟೋ ದರ ಕೆಜಿಗೆ 100 ರೂಪಾಯಿ ಗಡಿ ದಾಟಿತ್ತು. ಇದೀಗ ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಟೊಮೆಟೋ ಉತ್ತಮ ಫಸಲು ಬಂದಿದ್ದು ದರ ಕುಸಿಯಲು ಕಾರಣವಾಗಿದೆ.
Discussion about this post