ಸಾಮಾಜಿಕ ಜಾಲತಾಣಗಳು ಇದೀಗ ಸಿಕ್ಕಾಪಟ್ಟೆ ಕುಲಗೆಟ್ಟು ಹೋಗಿದೆ. ಸುಳ್ಳು ಸುದ್ದಿಗಳ ಭರಾಟೆ ನಡುವೆ ಸತ್ಯ ಮತ್ತು ಜನಪರ ಸುದ್ದಿಗಳಿಗೆ ಜಾಗವಿಲ್ಲದಂತಾಗಿದೆ.
ಟಿವಿ ಚಾನೆಲ್ ಗಳು TRP ಗಾಗಿ ಸಾಯುತ್ತಿವೆ. ಡಿಜಿಟಲ್ ಮಾಧ್ಯಮ ಹಿಟ್ಸ್ ಗಾಗಿ cheap gimmick ಮೊರೆ ಹೋಗುತ್ತಿದೆ. ಇದರಿಂದ ಆಗುವ ಅನಾಹುತಗಳ ಬಗ್ಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಹೀಗೆ ಇವತ್ತು ಕನ್ನಡಿಗರು ಆತಂಕಗೊಂಡಿದ್ದು, ಆರ್.ಜೆ. ಪ್ರದೀಪ್ ಮತ್ತು ಶ್ವೇತಾ ಪ್ರಸಾದ್ ಅವರ ಸುದ್ದಿ ಕೇಳಿ. ಕನ್ನಡದ ವೆಬ್ ಸೈಟ್ ಚಿತ್ರರಂಗಕ್ಕೆ ದೊಡ್ಡ ಅಘಾತ,ಸೀರಿಯಲ್ ಸ್ಟಾರ್ ನಟಿ ಇನ್ನಿಲ್ಲ ಎಂದು ಸುದ್ದಿ ಪ್ರಕಟಿಸಿತ್ತು. ಒಳಗಿನ ಸುದ್ದಿ ಬೇರೆಯಾಗಿದ್ದರು. ಹೊರಗಡೆ ಆರ್.ಜೆ. ಪ್ರದೀಪ್ ಮತ್ತು ಶ್ವೇತಾ ಪ್ರಸಾದ್ ಅವರ ಫೋಟೋ ಬಳಸಲಾಗಿತ್ತು.
ಹೀಗಾಗಿ ಸುದ್ದಿ ವೈರಲ್ ಆಯ್ತು, ಪ್ರದೀಪ್ ಹಾಗೂ ಶ್ವೇತಾ ಸಿಕ್ಕಾಪಟ್ಟೆ ಫೋನ್ ಕರೆಗಳನ್ನು ಸ್ವೀಕರಿಸಬೇಕಾಯ್ತು. ನಾವು ಬದುಕಿದ್ದೇವೆ ಸ್ವಾಮಿ ಎಂದು ಹೇಳುವ ಹೊತ್ತಿಗೆ ಇಬ್ಬರೂ ಸುಸ್ತಾಗಿದ್ದಾರೆ.
ಇನ್ನು ಈ ಬಗ್ಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿರುವ ಪ್ರದೀಪ್, ನಾವಿಬ್ಬರೂ ಬದುಕಿದ್ದೇವೆ, ಚೆನ್ನಾಗಿದ್ದೇವೆ. ನಾನು ಚುನಾವಣಾ ಆಯೋಗದ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿದ್ದೇನೆ. ಶ್ವೇತಾ ಮತದಾನ ಸಲುವಾಗಿ ಶಿವಮೊಗ್ಗದಲ್ಲಿದ್ದಾರೆ ಅಂದಿದ್ದಾರೆ.
ಜೊತೆಗೆ ಜನರ ಹಾದಿ ತಪ್ಪಿಸುವಂತ ಸುದ್ದಿ ಪ್ರಕಟಿಸಿದ ವೆಬ್ ಸೈಟ್ ವಿರುದ್ಧ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.
Discussion about this post