ತುಮಕೂರು ಅರಸೀಕೆರೆ ರೈಲ್ವೆ ಮಾರ್ಗ ಚತುಷ್ಪದ ಮಾರ್ಗವಾಗಿ ಪರಿವರ್ತನೆ
ಬೆಂಗಳೂರಿನ ಉಪನಗರಿ ರೈಲ್ವೆ ಯೋಜನೆಯನ್ನು ೨೦೨೫ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ೨೨೦ ಕೋಟಿ ವೆಚ್ಚದಲ್ಲಿ ಬೆಂಗಳೂರು -ಅರಸೀಕೆರೆ ಮಾರ್ಗದ ಸಿಗ್ನಲ್ ವ್ಯವಸ್ಥೆಯನ್ನು ಉತ್ತಮ ಪಡಿಸಲಾಗುವುದು.
ಇದರಿಂದ ಮುಂದಿನ ದಿನಗಳಲ್ಲಿ ರೈಲ್ವೆ ಸಂಚಾರ ಸರಗವಾಗಲಿದೆ ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರಕಲಿದೆ ಎಂದರು. ತುಮಕೂರು ಅರಸೀಕೆರೆ ರೈಲ್ವೆ ಮಾರ್ಗವನ್ನು ಚತುಷ್ಪದ ಮಾರ್ಗವನ್ನಾಗಿ ಮಾಡುವ ಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ.
ಪ್ರಯಾಣಿಕರ ಬೇಡಿಕೆಯಂತೆ ತುಮಕೂರು-ಯಶವಂತಪುರ ನಡುವೆ ಮೆಮು ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಬೆಂಗಳೂರಿನ ಸರ್ಕ್ಯೂಲರ್ ರೈಲ್ವೆ ಯೋಜನೆಗೆ ೮೦ ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.