ಬೆಂಗಳೂರು : ಪ್ರಧಾನಿ ನರೇಂದ್ರ ಹುಟ್ಟು ಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್ ಕೊರೋನಾ ಲಸಿಕಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಜನ ಸರತಿ ಸಾಲಿನಲ್ಲಿ ಲಸಿಕೆ ಪಡೆಯಲು ಆಗಮಿಸಿದ್ದು, ಲಸಿಕೆ ನೀಡಿಕೆಯಲ್ಲಿ ಇಡೀ ದೇಶಕ್ಕೆ ಬೆಂಗಳೂರು ನಂಬರ್ 1 ಅನ್ನಿಸಿಕೊಂಡಿದೆ.
ಶುಕ್ರವಾರ ಬೆಳಗ್ಗೆ 7 ರಿಂದ ರಾತ್ರಿ 10 ಗಂಟೆಯ ತನಕ ಲಸಿಕೆ ನೀಡಲಾಗಿದ್ದು ಒಂದೇ ದಿನ ಒಟ್ಟು 4.79 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಒಟ್ಟು 8 ವಲಯಗಳಲ್ಲಿ 1886 ಸರ್ಕಾರಿ ಲಸಿಕಾ ಕೇಂದ್ರ ಮತ್ತು 3.1 ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗಿದೆ. ಒಂದೇ ದಿನ 4,08,259 ಮಂದಿಗೆ ಲಸಿಕೆ ಹಾಕಲಾಗಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 70,936 ಮಂದಿ ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆ ನೀಡಿಕೆಯಲ್ಲಿ ಇಡೀ ದೇಶಕ್ಕೆ ಬೆಂಗಳೂರು ನಂಬರ್ 1 ಅನ್ನಿಸಿಕೊಂಡಿದೆ.
ವಲಯವಾರು ಪ್ರಕಾರ ಬಿಬಿಎಂಪಿಯ ದಕ್ಷಿಣ ವಲಯದಲ್ಲಿ 84,280 ಮಂದಿಗೆ ಲಸಿಕೆ ನೀಡಲಾಗಿದ್ದು, ಈ ಮೂಲಕ ದಕ್ಷಿಣ ವಲಯ ಒಂದೇ ದಿನ ಅತೀ ಹೆಚ್ಚು ಲಸಿಕೆ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ನಂತರದ ಸ್ಥಾನದಲ್ಲಿ ಪಶ್ಚಿಮ ವಲಯವಿದ್ದು ಇಲ್ಲಿ 75874 ಮಂದಿಗೆ ಲಸಿಕೆ ನೀಡಲಾಗಿದೆ. ಕೊನೆಯ ಸ್ಥಾನದಲ್ಲಿ ಯಲಹಂಕ ವಲಯವಿದ್ದು ಇಲ್ಲಿ 22,834 ಮಂದಿಗೆ ಲಸಿಕೆ ನೀಡಲಾಗಿದೆ.
ಇನ್ನು ಇಂದು ಕೂಡಾ ಲಸಿಕಾ ಅಭಿಯಾನ ನಡೆಯಲಿದ್ದು, ವ್ಯಾಕ್ಸಿನ್ ಹಾಕಿಸಿಕೊಳ್ಳದವರು ಹಾಕಿಸಿಕೊಳ್ಳಬಹುದಾಗಿದೆ.
Discussion about this post