ಕೆಲ ವರ್ಷಗಳ ಸೋಶಿಯಲ್ ಮೀಡಿಯಾ ಅಷ್ಟೊಂದು ಗಟ್ಟಿಯಾಗಿರಲಿಲ್ಲ. ಆಗ್ಲೂ ಮೆಗಾ ಧಾರಾವಾಹಿಗಳು ಪ್ರಸಾರವಾಗುತ್ತಿತ್ತು. ಆಗ ಪ್ರಸಾರವಾಗುತ್ತಿದ್ದ ಧಾರವಾಹಿಯ ನಾಯಕ ನಾಯಕಿಯರಿಗೂ ಈಗಿನಷ್ಟೇ ಅಭಿಮಾನಿಗಳಿದ್ದರು. ಈಗಿನ ಧಾರವಾಹಿಗಳಂತೆ ಆಗಿನ ಧಾರವಾಹಿಗಳು ಕೂಡಾ ಸಾಕಷ್ಟು ಸದ್ದು ಮಾಡುತ್ತಿತ್ತು. ಆ ಪೈಕಿ ಸದ್ದು ಮಾಡಿದ ಧಾರವಾಹಿ ಪೈಕಿ ‘ರಂಗೋಲಿ’, ‘ಮನೆಯೊಂದು ಮೂರು ಬಾಗಿಲು’, ‘ಬದುಕು ಕೂಡಾ ಸೇರಿದೆ.
ಈ ಧಾರವಾಹಿಗಳಲ್ಲಿ ನಟಿಸಿದ ಸಿರಿ ಆಗಿನ ಕಿರುತೆರೆ ಪ್ರೇಕ್ಷಕರ ಹಾಟ್ ಫೇವರಿಟ್ ನಟಿಯಾಗಿದ್ದರು. ಅದರಲ್ಲೂ ಮನೆ ಮನೆಯ ಗೃಹಿಣಿಯರ ಪಾಲಿಗಂತು ಸಿರಿ ಸ್ಟಾರ್ ನಟಿಯಾಗಿದ್ದರು.
9ನೇ ತರಗತಿಯಲ್ಲಿದ್ದಾಗಲೇ ಅಂಬಿಕಾ ಧಾರವಾಹಿಯಲ್ಲಿ ನಟಿಸಿದ್ದ ಸಿರಿ, ಬಳಿಕ ಹಲವು ಪ್ರಾಜೆಕ್ಟ್ ಗಳಲ್ಲಿ ಕಾಣಿಸಿಕೊಂಡಿದ್ದರು. ಉಷಾ ಕಿರಣ್ ಬ್ಯಾನರ್ನಡಿ ಜ್ಯೂನಿಯರ್ ಎನ್ಟಿಆರ್ ಅವರ ‘ನಿನ್ನು ಚೂಡಾಲನಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಇದೇ ಸಂದರ್ಭದಲ್ಲಿ ಇನ್ನು ರಂಗೋಲಿ ಧಾರವಾಹಿ ಮಾಡುವಾಗ ಸಿರಿ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು.
3oಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ ಸಿರಿ, ಒಮ್ಮೊಮ್ಮೆ 3-4 ಧಾರಾವಾಹಿ ಮಾಡುತ್ತಿದ್ದರು. ಏಕಕಾಲಕ್ಕೆ ಕನ್ನಡ ಹಾಗೂ ತಮಿಳು, ತೆಲುಗು ಪ್ರಾಜೆಕ್ಟ್ ಮಾಡೋ ಮೂಲಕ ದಣಿವರಿಯದೆ ದುಡಿದಿದ್ದರು. ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಧಾರವಾಹಿ ಕಡೆ ಮುಖ ಮಾಡಿದ ಸಿರಿ ಅಲ್ಲೆ ಬ್ಯುಸಿಯಾಗಿದ್ದರು.
ಈ ನಡುವೆ ಮನೆಯವರಿಗೆ ಟೈಮ್ ಕೊಡೋದು ಕಷ್ಟವಾಗುತ್ತಿರುವ ಕಾರಣ ಪ್ರಾಜೆಕ್ಟ್ ಕಡಿಮೆ ಮಾಡಿದ ಸಿರಿ ಕೊರೋನಾ ಕಾರಣದಿಂದ ತಮಿಳು ಪ್ರಾಜೆಕ್ಟ್ ಕೂಡಾ ಕೈ ಬಿಟ್ಟರು. ಕೆಲ ತಿಂಗಳ ಹಿಂದೆ ನಮ್ಮನೆ ಯುವರಾಣಿ ಧಾರವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದ ಸಿರಿಜಾ, ಕನ್ನಡ ಕಿರುತೆರೆ ಪ್ರೇಕ್ಷಕರಿಗೂ ದರ್ಶನ ಕೊಟ್ಟಿರಲಿಲ್ಲ.
Discussion about this post