ಏಕರೂಪ ಸಂಹಿತೆಯತ್ತ ಹೆಜ್ಜೆ ಹಾಕಿದ ಬಿಜೆಪಿ ಆಡಳಿತ ರಾಜ್ಯ ಅಸ್ಸಾಂ
ಮುಸ್ಲಿಂ ಸಮುದಾಯದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಅಸ್ಸಾಂ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಮೂಲಕ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಪಣ ತೊಟ್ಟಿದೆ. ಈ ಸಲುವಾಗಿಯೇ ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿರುವ ಅಸ್ಸಾಂ ಸರ್ಕಾರ ಮುಸ್ಲಿಂ ವಿವಾಹ ಮತ್ತು ನೋಂದಣಿಯನ್ನು ಸರ್ಕಾರದಲ್ಲೇ ಮಾಜಿಸಬೇಕು ಎಂದು ತಂದ ಮಸೂದೆಯನ್ನು ಅಂಗೀಕರಿಸಿದೆ.
ಈ ಮೂಲಕ ಏಕರೂಪದ ನಾಗರಿಕ ಸಂಹಿತೆ ಜಾರಿಯತ್ತ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೆಜ್ಜೆ ಇಟ್ಟಿದ್ದಾರೆ.
ಈ ತನಕ ಅಸ್ಸಾಂನಲ್ಲಿ 1935ರ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆ ಜಾರಿಯಲ್ಲಿತ್ತು. ಅದರಂತೆ ಮುಸ್ಲಿಂ ಜನಾಂಗದಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶವೂ ಇತ್ತು.
ವಿವಾಹ ಮತ್ತು ವಿಚ್ಛೇದನಗಳನ್ನು ಸರ್ಕಾರ ಬದಲಾಗಿ ಮುಸ್ಲಿಂ ಸಮುದಾಯದ ಕಾಜಿಗಳು ನೋಂದಣಿ ಮಾಡಿಕೊಳ್ಳುತ್ತಿದ್ದರು. ಇದೀಗ ಈ ಕಾಯ್ದೆಯನ್ನು ರದ್ದುಪಡಿಸೋ ಮಸೂದೆ ಗುರುವಾರ ಅಂಗೀಕಾರಗೊಂಡಿದೆ.
ಈಗ ಅಂಗೀಕಾರವಾಗಿರುವ ಅಸ್ಸಾಂ ಮುಸ್ಲಿಂ ವಿವಾಹಗಳ ಕಡ್ಡಾಯ ನೋಂದಣಿ ಮತ್ತು ವಿಚ್ಛೇದನ ಮಸೂದೆ 2024 ಪ್ರಕಾರ, ಮುಸ್ಲಿಮರು ಇನ್ನು ಮುಂದೆ ಕಾಜಿಗಳ ಬದಲು ಸರ್ಕಾರದಲ್ಲೇ ಮದುವೆಯನ್ನು ನೋಂದಣಿ ಮಾಡಿಕೊಳ್ಳಬೇಕು ಮತ್ತು ನ್ಯಾಯಾಲಯದಲ್ಲೇ ವಿಚ್ಛೇದನ ಪಡೆಯಬೇಕು.
ಈ ತನಕ ಕಾಜಿಗಳು ನೋಂದಣಿ ಮಾಡಿದ ಮುಸ್ಲಿಂ ಮದುವೆಗಳು ಊರ್ಜೀತವಾಗಿರುತ್ತದೆ. ಇನ್ನು ಮುಂದೆ ನಡೆಯೋ ಮದುವೆಯನ್ನು ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ಇದೇ ವೇಳೆ ಕಾಯ್ದೆ ಕುರಿತಂತೆ ಪ್ರತಿಕ್ರಿಯಿಸಿರುವ ಅಸ್ಸಾಂ ಕಂದಾಯ ಸಚಿವ ಜೋಗೆನ್ ಮೋಹನ್, ಈ ಕಾಯ್ದೆಯಿಂದ ಬಹುಪತ್ನಿತ್ವಕ್ಕೆ ಕಡಿವಾಣ ಬೀಳಲಿದೆ. ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಗಂಡನ ಮನೆಯಲ್ಲಿ ವಾಸಿಸೋ ಹಕ್ಕು ಹಾಗೂ ಜೀವನಾಂಶ ಲಭಿಸಲಿದೆ. ವಿಧವೆಯರಿಗೂ ಪತಿಯ ಆಸ್ತಿಯ ಮೇಲೆ ಹಕ್ಕು ಸಿಗಲಿದೆ ಅಂದಿದ್ದಾರೆ.
The 126-member Assam Assembly on Thursday (August 29, 2024) passed a Bill to make the registration of Muslim marriages and divorces with the government compulsory.
The Assam Compulsory Registration of Muslim Marriages and Divorces Bill, 2024, introduced in the House by Revenue and Disaster Management Minister Jogen Mohan, will replace the British-era Assam Moslem Marriages and Divorces Registration Act, 1935.