ಬೆಂಗಳೂರು : ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಗಂಭೀರ ಚರ್ಚೆಗಳು ನಡೆಯುತ್ತಿದೆ. ಸಿಎಂ ಆಗಿರುವ ಯಡಿಯೂರಪ್ಪ ಹೊಸ ನಾಯಕರನ್ನು ಬೆಳೆಸುವ ಸಲುವಾಗಿ ಈಗಾಗಲೇ ಕುರ್ಚಿ ಬಿಟ್ಟುಕೊಡಬೇಕಾಗಿತ್ತು. ಆದರೆ ಮುಂದಿನ ಅವರ ನಡೆ ನೋಡಿದರೆ 2023ರ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ನಾನೇ ಸಿಎಂ ಆಗಬೇಕು ಅನ್ನುವಂತಿದೆ.
ಈ ನಡುವೆ ಶಾಸಕರ ಮಾತಿಗೆ ಕವಡೆ ಕಾಸು ಕಿಮ್ಮತ್ತು ಕೊಡದಿರುವ ಕಾರಣದಿಂದ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಪ್ರಾರಂಭವಾಗಿದೆ. ಯಡಿಯೂರಪ್ಪ ಅವರನ್ನು ಬದಲಾಯಿಸಿ ಹೊಸ ಮುಖವನ್ನು ಸಿಎಂ ತರುವ ಕುರಿತಂತೆ ಕೆಲ ಮುಖಂಡರು ಪ್ರಯತ್ನಿಸುತ್ತಿದೆ.
ಅದರಲ್ಲಿ ಮೊದಲ ಸಾಲಿನಲ್ಲಿ ಅರವಿಂದ್ ಬೆಲ್ಲದ್ ಹೆಸರಿದೆ. ಸಚಿವರಾಗಿಯೂ ಅನುಭವಿಲ್ಲ, ಆದರೆ ಕ್ಲೀನ್ ಹ್ಯಾಂಡ್ ಹಾಗೂ ಲಿಂಗಾಯತ ಅನ್ನುವ ಕಾರಣಕ್ಕಾಗಿ ಅವರನ್ನು ಸಿಎಂ ಮಾಡಲು ಪ್ರಯತ್ನಗಳು ಸಾಗಿದೆ. ಉತ್ತರ ಕರ್ನಾಟಕದ ಬಹುತೇಕ ಮುಖಂಡರು ಬೆಲ್ಲದ್ ಸಿಎಂ ಆಗ್ಲಿ ಎಂದು ಹೇಳಿಯಾಗಿದೆ. ಹೀಗಾಗಿ ಬೆಲ್ಲದ್ ಅವರನ್ನು ಸಿಎಂ ಮಾಡಿದರೂ ಯಡಿಯೂರಪ್ಪ ಕಿರಿಕ್ ಎತ್ತೋ ಹಾಗಿಲ್ಲ.
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಸಿಎಂ ಅರವಿಂದ್ ಬೆಲ್ಲದ್ ಅನ್ನುವ ಪೋಸ್ಟ್ ಗಳು ರಾರಾಜಿಸುತ್ತಿದೆ. ಉತ್ತರ ಕರ್ನಾಟಕದ ವೀರಶೈವ ಮುಖಂಡ ಅರವಿಂದ್ ಬೆಲ್ಲದ್ ಸಿಎಂ ಆಗಲಿದ್ದಾರೆ ಅನ್ನುವ ಬರಹದೊಂದಿಗೆ ಶೇರ್ ಆಗುತ್ತಿರುವ ಪೋಸ್ಟ್ ಯಡಿಯೂರಪ್ಪ ಅವರ ನಿದ್ದೆಗೆಡಿಸುವುದರಲ್ಲಿ ಸಂಶಯವಿಲ್ಲ.
ಬೆಲ್ಲದ್ ಅಭಿಮಾನಿಗಳೇ ಈ ಪೋಸ್ಟ್ ಅನ್ನು ಹರಿಬಿಟ್ಟಿದ್ದಾರೆ. ಈ ಪೋಸ್ಟ್ ಗಳ ಮೂಲವನ್ನು ಗಮನಿಸಿದರೆ ಸೈಲೆಂಟ್ ಆಗಿ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವ ಕೆಲಸ ಶುರುವಾಗಿದೆ ಅನ್ನುವುದು ಸ್ಪಷ್ಟ. ಗೌರವಯುತವಾಗಿ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆಯೇ ಅನ್ನುವುದು ಈಗಿರುವ ಪ್ರಶ್ನೆ.
ಈ ನಡುವೆ ದೆಹಲಿಯಲ್ಲಿ ಬೀಡು ಬಿಟ್ಟಿರುವ ಅರವಿಂದ್ ಬೆಲ್ಲದ್ ಬಿ ಎಲ್ ಸಂತೋಷ್ ಸೇರಿ ಅನೇಕ ನಾಯಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೇ ಅವರು ಕಿಡಿ ಕಾರಿದ್ದು, ಸಿಎಂ ಯಡಿಯೂರಪ್ಪ ಅವರು ಬಿಜೆಪಿ ಶಾಸಕರ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದಾರೆ. ಇನ್ನು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುವ ಅರುಣ್ ಸಿಂಗ್ ಕೂಡಾ ಶಾಸಕರನ್ನು ಕರೆದು ಅವರ ಸಂಕಷ್ಟಗಳನ್ನು ಆಲಿಸುವುದಿಲ್ಲ. ಅಂದ ಮೇಲೆ ನಮ್ಮ ನೋವುಗಳನ್ನು ಯಾರ ಜೊತೆ ಹಂಚಿಕೊಳ್ಳಬೇಕು, ಸಮಸ್ಯೆಗಳನ್ನು ಎಲ್ಲಿ ಇತ್ಯರ್ಥ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
Discussion about this post