ತೋಟಗಾರಿಕೆ ಮತ್ತು ಕೃಷಿ ಕಾರ್ಯ ವ್ಯಾಪ್ತಿಯ ವಿಸ್ತರಣೆಗಾಗಿ ಭಾರತೀಯ ತೋಟಗಾರಿಕಾ ಸಂಸಶೋಧನಾ ಕೇಂದ್ರ ಅಭಿವೃದ್ಧಿ ಪಡಿಸಿದ ಅರ್ಕಾ ಬಾಗವಾನಿ ಮೊಬೈಲ್ app ಮತ್ತು ಸೀಡ್ ಪೋರ್ಟಲ್ ಅನ್ನು ಬಿಡುಗಡೆ ಮಾಡಲಾಗಿದೆ.
ಐಐಎಚ್ ಆರ್ ಹೆಸರುಘಟ್ಟ ಆವರಣದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ 2020 ರಲ್ಲಿ ಅರ್ಕಾ ಬಾಗವಾನಿ ಮೊಬೈಲ್ app ಮತ್ತು ಸೀಡ್ ಪೋರ್ಟಲ್ ಅನ್ನು ಬಾರತೀಯ ಕೃಷಿ ಸಂಶೋಧನಾ ಕೇಂದ್ರದ ಪ್ರಧಾನ ನಿರ್ದೇಶಕ ಡಾ. ಟಿ.ಮೊಹಾಪಾತ್ರ ಬಿಡುಗಡೆ ಮಾಡಿದರು.
ಅರ್ಕಾ ಬಾಗವಾನಿ APP ಸಹಾಯದಿಂದ ತೋಟಗಾರಿಕೆ ಮತ್ತು ಕೃಷಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಹೂವು ಹಣ್ಣು ಹಾಗೂ ತರ್ಕಾರಿಗಳ, ತರಕಾರಿ ಬೀಜಗಳ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಿದೆ.
ಮಾತ್ರವಲ್ಲದೆ ಐಐಎಚ್ ಆರ್ ಸಂಶೋಧಿಸಿದ ತಂತ್ರಜ್ಞಾನ, ಅವುಗಳ ಪ್ರಯೋಜನ ಕುರಿತಂತೆಯೂ ಇಲ್ಲಿ ಮಾಹಿತಿಗಳಿವೆ.
ಅಷ್ಟೇ ಅಲ್ಲದೆ ಬೀಜಗಳನ್ನು ಆನ್ ಲೈನ್ ಮೂಲಕವೇ ಖರೀದಿಸಿಲು ಅವಕಾಶವಿದೆ. ತಮ್ಮ ಜಿಲ್ಲೆ ತಾಲೂಕುಗಳನ್ನು ಬೀಜ ಖರೀದಿಗೂ ಮುನ್ನ ನಮೂದಿಸುವುದರಿಂದ ನೀವು ಖರೀದಿಸುತ್ತಿರುವ ಬೀಜ ನಿಮ್ಮ ಪ್ರದೇಶಕ್ಕೆ ಸೂಕ್ತ ಹೌದೇ ಅಲ್ಲವೇ ಅನ್ನುವುದನ್ನು ತಿಳಿಸುತ್ತದೆ. ಹೀಗಾಗಿ ರೈತರು ಮತ್ತು ಹೊಸದಾಗಿ ಕೃಷಿ ಕ್ಷೇತ್ರಕ್ಕೆ ಬರುವವರಿಗೆ ಈ app mಸಾಕಷ್ಟು ಅನುಕೂಲ ಮಾಡಿಕೊಡಲಿದೆ.
Discussion about this post