ಕೆಲಸಗಾರರ ಸಮಸ್ಯೆ ಕಾರಣದಿಂದ ಸಂಕಷ್ಟ ಸಿಲುಕಿರುವ ಅಡಿಕೆ ಕೆಲಸಗಾರರ ಸಮಸ್ಯೆಗೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ನಡೆದ ಸಂಶೋಧನೆಗಳು ಒಂದಲ್ಲ ಎರಡಲ್ಲ. ಅದರಲ್ಲೂ ಅಡಿಕೆ ಕೊಯ್ಲು ಹಾಗೂ ಮದ್ದು ಸಿಂಪಡಣೆ ವಿಚಾರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದಿದೆ. ಆದರೆ ಪರಿಚಯಿಸಿದ ನಾಲ್ಕೈದು ತಂತ್ರಜ್ಞಾನಗಳು ಶಾಶ್ವತ ಪರಿಹಾರ ಅನ್ನಿಸಲಿಲ್ಲ.
ಈ ನಿಟ್ಟಿನಲ್ಲಿ ಕಳೆದ ಒಂದೆರೆಡು ವರ್ಷಗಳಿಂದ ತೋಟಕ್ಕೆ ಲಗ್ಗೆ ಇಟ್ಟಿರುವ ಕಾರ್ಬನ್ ಫೈಬರ್ ದೋಟಿ ಸಮಸ್ಯೆಗೆ ಒಂದಿಷ್ಟು ಪರಿಹಾರ ನೀಡುತ್ತಿದೆ. ಆದರೆ ಇದಕ್ಕೂ ನುರಿತ ಕೆಲಸಗಾರರ ಕೊರತೆಯಿದೆ. ಹೀಗಾಗಿ ಕ್ಯಾಂಪ್ಕೋ ಸಂಸ್ಥೆ, ಅಡಿಕೆ ಪತ್ರಿಕೆ ಜಂಟಿಯಾಗಿ ಆಸಕ್ತ ಕೃಷಿಕರಿಗೆ ಮತ್ತು ಕೆಲಸಗಾರರಿಗೆ ತಂತ್ರಜ್ಞಾನದ ಬಗ್ಗೆ ಅರಿವು, ತರಬೇತಿ ಮೂಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಅಲ್ಲಲ್ಲಿ ತರಬೇತಿಗಳು ಕೂಡಾ ನಡೆಯುತ್ತಿದೆ. ಉತ್ತರ ಕನ್ನಡದ ಕಡೆಗೆ ಹೋಲಿಸಿದರೆ ದಕ್ಷಿಣ ಕನ್ನಡದಲ್ಲಿ ತರಬೇತಿಗೆ ಸಿಕ್ಕಿರುವ ವೇಗ ಏನೇನೂ ಅಲ್ಲ. ಉತ್ತರ ಕನ್ನಡದಲ್ಲಿ ಸಹಕಾರಿ ಸಂಘಗಳು ಕಾರ್ಬನ್ ಫೈಬರ್ ದೋಟಿ ತರಬೇತಿ ನೀಡಲು ಮುಂದೆ ಬಂದಿದೆ. ಕೇವಲ ಬ್ಯಾಕಿಂಗ್ ವ್ಯವಹಾರ ಮಾತ್ರ ನಮ್ಮ ಕೆಲಸವಲ್ಲ. ರೈತರ ನೋವು ನಲಿವು, ಬೇಕು ಬೇಡಗಳಿಗೂ ಸ್ಪಂದಿಸಬೇಕು ಅನ್ನುವ ಜ್ಞಾನ ಅವುಗಳಿಗಿದೆ. ಆದರೆ ದಕ್ಷಿಣ ಕನ್ನಡ ಮತ್ತು ಕಾಸರಗೋಡಿನ ಬಹುತೇಕ ಸಹಕಾರಿ ಸಂಘಗಳು ಸಾಲ ಕೊಡುವುದು, ಸಾಲ ಸಂಗ್ರಹಿಸುವುದರ ಕಡೆ ಫೋಕಸ್ ಕೊಟ್ಟಿದೆ.
ಈ ನಡುವೆ ಶಿರಸಿಯ ಟಿಎಸ್ಎಸ್ ಸಂಸ್ಥೆಯವರು ಇದೇ ತಿಂಗಳ 27 ಮತ್ತು 28ರಂದು ದೋಟಿಗೊಯ್ಲು ತರಬೇತಿ ಶಿಬಿರ ನಡೆಸಲು ನಿರ್ಧರಿಸಿದ್ದಾರೆ.
50 ಅಭ್ಯರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ದೋಂಟಿ ಖರೀದಿಗೆ ಸಂಸ್ಥೆಯೇ ಸಾಲ ನೀಡಲಿದೆ. ಇನ್ನು ಈ ತರಬೇತಿ ಪಾಲ್ಗೊಂಡವರು ತಿಂಗಳಿಗೆ 45 ಸಾವಿರ ರೂಪಾಯಿ ಸಂಪಾದಿಸುವ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಬರ್ತ್ ಡೇ ದಿನದಂದು ಬಾಡಿಗೆದಾರಳಿಗೆ ಒಳ ಉಡುಪು ಗಿಫ್ಟ್ : ಮನೆ ಮಾಲೀಕನ ವಿರುದ್ಧ FIR
ಬೆಂಗಳೂರು : ತನ್ನ ಬರ್ತ್ ಡೇ ದಿನದಂದು ಮನೆ ಮಾಲೀಕನ ಒಳಉಡುಪು ಗಿಫ್ಟ್ ಕೊಟ್ಟಿದ್ದಾನೆ ಎಂದು ಆರೋಪಿಸಿ ಬಾಡಿಗೆದಾರ ಮಹಿಳೆಯೊಬ್ಬರು ಪೊಲೀಸ್ ಮನೆ ಮೆಟ್ಟಿಲು ಹತ್ತಿದ್ದಾರೆ.
ಅಂದ ಹಾಗೇ ಈ ಘಟನೆ ನಡೆದಿರುವುದು ಹನುಮಂತರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಶ್ರೀನಗರ ಸಮೀಪದ ಕಲ್ಲಪ್ಪ ಬ್ವಾಕ್ ನಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಮನೆ ಮಾಲೀಕನ ವಿರುದ್ಧ ಈ ಸಂಬಂಧ ದೂರು ದಾಖಲಿಸಿದ್ದಾರೆ. ಸೂಕ್ಷ್ಮ ಪ್ರಕರಣವಾಗಿರುವ ಹಿನ್ನಲೆಯಲ್ಲಿ FIR ದಾಖಲಿಸಿರುವ ಪೊಲೀಸರು, ವಿಚಾರಣೆ ಬರುವಂತೆ ಮನೆ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಇನ್ನು ಮಹಿಳೆ ಕೊಟ್ಟಿರುವ ದೂರಿನಲ್ಲಿ, ನನ್ನ birthday ದಿನ ಮನೆ owner ಒಳ ಉಡುಪುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ಮಾತ್ರವಲ್ಲದೆ ಈ ಉಡುಪುಗಳನ್ನು ಧರಿಸಿ ಮನೆಯಿಂದ ಹೊರ ಬರುವಂತೆ ಒತ್ತಾಯಿಸುತ್ತಿದ್ದ. ಮೊಬೈಲ್ ಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡುತ್ತಾನೆ. ಇವಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದ ಕಾರಣದಿಂದ ಮನೆ ಖಾಲಿ ಮಾಡುವಂತೆ ಟಾರ್ಚರ್ ಕೊಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಅಂದ ಹಾಗೇ ಮಹಿಳೆ ಈ ಮನೆಯಲ್ಲಿ 12 ವರ್ಷಗಳಿಂದ ಬಾಡಿಗೆಗಿದ್ದಾರಂತೆ. ಬಾಡಿಗೆ ವಿಚಾರವಾಗಿ ಇಬ್ಬರ ನಡುವೆ ಮನಸ್ತಾಪವಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇನ್ನುಳಿದಂತೆ ದೂರಿನ ಇತರ ಅಂಶಗಳ ಕುರಿತಂತೆ ಪೊಲೀಸರ ತನಿಖೆ ಮುಂದುವರಿದಿದೆ.
Discussion about this post