ವಾಷಿಂಗ್ಟನ್ : Apple ಸಂಸ್ಥೆ ಐಫೋನ್ ಸೇರಿದಂತೆ ತನ್ನ ವಿವಿಧ ಉತ್ಪನ್ನಗಳನ್ನು ಒರೆಸುವ ಬಟ್ಟೆಯನ್ನು ಬಿಡುಗಡೆ ಮಾಡಿದೆ. ಅಂದ ಹಾಗೇ ಇದರ ಬೆಲೆ 1900 ರೂಪಾಯಿ. ಅರೇ ಲಕ್ಷ ರೂಪಾಯಿ ಕೊಟ್ಟು Apple ಪ್ರಾಡಕ್ಟ್ ಖರೀದಿಸುವ ಮಂದಿಗೆ 1900 ರೂಪಾಯಿ ಅದ್ಯಾವ ಮೊತ್ತ ಎಂದು ನೀವು ಕೇಳಬಹುದು. ಅದು ಹೌದು ಕೂಡಾ.
ಹಾಗಾದ್ರೆ ಅದ್ಯಾಕೆ ಈ ಬಟ್ಟೆ ಅದಷ್ಟು ದುಬಾರಿ ಅಂದ್ರೆ, ಈ ಬಟ್ಟೆಯಷ್ಟು ಸಾಫ್ಟ್ ಅದ್ಯಾವ ಬಟ್ಟೆಯೂ ಇಲ್ವಂತೆ. ಈ ಬಟ್ಟೆಯಲ್ಲಿ ಒರೆಸುವುದರಿಂದ ಯಾವುದೇ ಗೀರುಗಳು ಬೀಳುವುದಿಲ್ಲವಂತೆ. ಇನ್ನು ಈ ಉತ್ಪನ್ನ ಕೇವಲ Apple ಸ್ಟೋರ್ ಗಳಲ್ಲಿ ಮಾತ್ರ ಲಭ್ಯವಿದೆ.
ಅಂದ ಹಾಗೇ ಈ ಬಟ್ಟೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಿಡುಗಡೆಯಾದ ಸಂದರ್ಭದಲ್ಲಿ ಗ್ರಾಹಕರು ಮುಗಿ ಬಿದ್ದು ಖರೀದಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪುಟ್ಟ ಬಟ್ಟೆ ತುಂಡಿಗೆ 1900 ರೂಪಾಯಿ ಕೊಡಬೇಕಾ ಎಂದು ಪ್ರಶ್ನಿಸುತ್ತಿದ್ದಾರಂತೆ.
peak capitalism might be this $19 Apple polishing cloth pic.twitter.com/f5vbRwe3fG
— Andrew Cunningham (@AndrewWrites) October 18, 2021
Discussion about this post