ಬ್ರಿಟಿಷ್ ಬಾಲಕಿಯರ ಹ*ತ್ಯೆ ನಡೆದ ಬೆನ್ನಲ್ಲೇ ಬ್ರಿಟನ್ ಪ್ರತಿಭಟನೆ
ಮೂವರು ಬಾಲಕಿಯರ ಹತ್ಯೆ ಸಂಬಂಧ ಹರಡಿದ ವದಂತಿಯೊಂದು ಬ್ರಿಟನ್ ಸ್ಥಳೀಯರು ಮತ್ತು ವಲಸಿಗ ಸಮುದಾಯದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಸಣ್ಣದಾಗಿ ಪ್ರಾರಂಭವಾದ ಪ್ರತಿಭಟನೆ ಇದೀಗ ಹಿಂಸಾಚಾರದ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆ ದೇಶವ್ಯಾಪ್ತಿ ಹರಡಿದ್ದು ಪೊಲೀಸ್ ಪಡೆಗಳು 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿವೆ.
ಇತ್ತೀಚೆಗೆ ನಡೆದ ಸಂಸತ್ ಚುನಾವಣೆ ಸಂದರ್ಭದಲ್ಲಿ ಹಲವು ಭರವಸೆ ನೀಡಿ ಆಯ್ಕೆಯಾಗಿದ್ದ ಪ್ರಧಾನಿ ಕೀರ್ ಸ್ಟಾರ್ಮರ್ ಹಿಂಸಾಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.
ಘಟನೆ ಹಿನ್ನಲೆ
ಇತ್ತೀಚೆಗೆ ಮೂವರು ಬ್ರಿಟಿಷ್ ಬಾಲಕಿಯರ ಹತ್ಯೆ ನಡೆದಿತ್ತು. ಹತ್ಯೆ ಮಾಡಿದ ನಂತರ 17 ವರ್ಷದ ಆಕ್ಸೆಲ್ ರುಡಕುಬಾನಾ ಎಂಬಾತನನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಆತನ ಜಾತಿಯ ಬಗ್ಗೆ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿತು. ಹೀಗಾಗಿ ಸ್ಥಳೀಯರು ಮತ್ತು ಬಲಪಂಥೀಯ ಸಂಘಟನೆಗಳು ಬೀದಿಗಿಳಿದವು. ಆದರೆ ಹಂತಕನ ಜಾತಿಯೇ ಬೇರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ಬ್ರಿಟನ್ ಪೊಲೀಸ್ ಅಧಿಕಾರಿಗಳ ಹೇಳಿಕೆ ಆಧರಿಸಿ ವರದಿ ಮಾಡಿದೆ.
ಈ ನಡುವೆ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ಹೋಟೆಲ್ ಗಳ ಮೇಲೆ ಹಿಂಸಾಕೋರರು ದಾಳಿ ನಡೆಸಿದ್ದಾರೆ. ಲಿವರ್ ಪೂಲ್, ಹಲ್, ಬ್ರಿಸ್ಟಲ್ ಲೀಡ್ಸ್ ನಲ್ಲಿ ನಲ್ಲಿ ಸರ್ಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಕೆಲವೊಂದು ಕಡೆ ಮಾರಕಾಸ್ತ್ರ ಹಿಡಿದು ಧಾರ್ಮಿಕ ಘೋಷಣೆಯೊಂದಿಗೆ ಹಿಂಸಾಕೋರರು ಓಡಾಡುತ್ತಿದ್ದಾರೆ.
ಮತ್ತೆ ಕೆಲವು ಕಡೆ ಬ್ರಿಟನ್ ಧ್ವಜ ಹಿಡಿದ ಮಂದಿ ನೀವು ಮುಂದೆ ಬ್ರಿಟನ್ ಮಂದಿಯಲ್ಲ ಎಂದು ಘೋಷಣೆ ಕೂಗುತ್ತಿದ್ದಾರೆ.