ಎರಡನೇ ಬಬಿಯಾ ಮೃತಪಟ್ಟ 13 ತಿಂಗಳ ಬಳಿಕ ಮೂರನೇ ಬಬಿಯಾ ( Babiya ) ಕಾಣಿಸಿಕೊಂಡಿದೆ
ಕರ್ನಾಟಕದ ಗಡಿಗೆ ಭುಜ ಕೊಟ್ಟು ನಿಂತಿರುವ ಕೇರಳ ಕಾಸರಗೋಡಿನ ಲೇಕ್ ಟೆಂಪಲ್ ಎಂದೇ ಖ್ಯಾತವಾಗಿರುವ ಶ್ರೀ ಅನಂತಪುರ ಅನಂತಪದ್ಮನಾಭ ದೇವಸ್ಥಾನದ ಕೆರೆಯಲ್ಲಿ ಎರಡನೇ ಬಬಿಯಾ ( Babiya ) ಮೃತಪಟ್ಟ 13 ತಿಂಗಳ ಬಳಿಕ ಮರಿ ಮೊಸಳೆಯೊಂದು ಕಾಣಿಸಿಕೊಂಡಿದೆ.
ಕಳೆದ ವರ್ಷ ಅಂದ್ರೆ ಅಕ್ಟೋಬರ್ 9 2022 ರಂದು ಅಂದಾಜು 75 ವರ್ಷ ಪ್ರಾಯದ ಬಬಿಯಾ ಮೊಸಳೆ ಮೃತಪಟ್ಟಿತ್ತು. ಆ ಸಂದರ್ಭದಲ್ಲೇ ಶೀಘ್ರದಲ್ಲೇ ಮರಿ ಮೊಸಳೆಯೊಂದು ಕೆರೆಯ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಅದೆಷ್ಟು ತಿಂಗಳು ಕಳೆದರೂ ದೇವಸ್ಥಾನದ ಕೆರೆಯಲ್ಲಿ ಮೊಸಳೆಯ ಇರುವಿಕೆ ಪತ್ತೆಯಾಗಿರಲಿಲ್ಲ.
ಈ ನಡುವೆ ನವೆಂಬರ್ 7 ರಂದು ಕಾಞಂಗಾಡಿನಿಂದ ಬಂದ ಕುಟುಂಬಕ್ಕೆ ಪ್ರಥಮವಾಗಿ ಮರಿ ಮೊಸಳೆ ದರ್ಶನ ನೀಡಿದೆ. ಅನಂತ ಪದ್ಮನಾಭ ಸನ್ನಿಧಾನಕ್ಕೆ ಬಂದಿದ್ದ ಕುಟುಂಬದ ಜೊತೆಗಿದ್ದ ಮಗು ಮೊಸಳೆ ನೋಡಬೇಕೆಂದು ಹಠ ಹಿಡಿಯಿತಂತೆ. ಆದರೆ ಮೊಸಳೆ ಇಲ್ಲ ಎಂದು ಸಮಾಧಾನಪಡಿಸಿದರೂ ಮಗು ಹಠ ಬಿಡಲಿಲ್ಲ. ಈ ವೇಳೆ ಗುಹೆಯಿಂದ ಹೊರ ಬಂದ ಮೊಸಳೆ ದರ್ಶನ ನೀಡಿದೆ. ಇದೇ ವೇಳೆ ಅವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಅಲ್ಲಿಂದ್ದವರಿಗೆ ತೋರಿಸಿದ್ದರು. ಆದರೆ ನಂಬೋದಿಕ್ಕೆ ಯಾರೊಬ್ಬರೂ ಸಿದ್ದವಿರಲಿಲ್ಲ.
ಹೀಗಾಗಿ ನಾಲ್ಕೈದು ದಿನ ಇದು ಚರ್ಚಾ ವಿಷಯವಾಗಿತ್ತು. ಅನೇಕರು ಮೊಸಳೆಯ ಇರುವಿಕೆಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದರು. ಅದೆಷ್ಟು ಕಾದು ಕುಳಿತರೂ ಮೊಸಳೆಯ ದರ್ಶನವಾಗಲಿಲ್ಲ. ಹೀಗಾಗಿ ಮೊಸಳೆ ಇರುವುದೇ ಅನುಮಾನ ಎಂದು ಹೇಳಲಾಗಿತ್ತು.
ಇದಾದ ಕೆಲ ದಿನದ ನಂತರ ಮೊದಲು ಮೊಸಳೆ ಕಂಡ ಕುಟುಂಬ ಕುತೂಹಲದಿಂದ ಮತ್ತೆ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ಈ ವೇಳೆ ಅಚ್ಚರಿ ಅನ್ನುವಂತೆ ಅನಂತ ಪದ್ಮನಾಭವನ ಕೆರೆಯಲ್ಲಿ ಮತ್ತೊಮ್ಮೆ ಮೂರನೇ ಬಬಿಯಾ ದರ್ಶನ ನೀಡಿತ್ತು. ಈ ವೇಳೆ ಅರ್ಚಕರು, ಆಡಳಿತ ಮಂಡಳಿಯವರು ಇದ್ದ ಕಾರಣ ಮೊಸಳೆ ಇರುವುದು ದೃಢಪಟ್ಟಿದೆ.
ಒಟ್ಟಿನಲ್ಲಿ ಈ ಮೂಲಕ ಅನಂತ ಪದ್ಮನಾಭನ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ.
ಇನ್ನು ಬಬಿಯಾನ ಕುರಿತ ಕುತೂಹಲಕರ ಮಾಹಿತಿಗಾಗಿ ನೀವು ನನ್ನ ಭಕ್ತಿ ಯೂಟ್ಯೂಬ್ ವಾಹಿನಿಗೆ ಭೇಟಿ ನೀಡಿ.
ಅನಂತಪದ್ಮನಾಭ ದೇವಾಲಯದ ಬಬಿಯಾ ಸಸ್ಯಹಾರಿ ಎಂದು ಕೆಲ ಬುದ್ದಿಜೀವಿಗಳು ಈ ಹಿಂದೆ ಅಪಪ್ರಚಾರದಲ್ಲಿ ತೊಡಗಿದ್ದರು. ಆದರೆ ಆಸ್ತಿಕರಾದ ಬಹುತೇಕರಿಗೆ ಬಬಿಯಾ ಮಾಂಸಹಾರಿ ಅನ್ನುವ ವಿಚಾರ ಗೊತ್ತಿತ್ತು. ಈ ಕುರಿತ ವಿವರ ಈ ಕೇಳಗಿನ ವಿಡಿಯೋದಲ್ಲಿದೆ.
13 months of Babiya’s death, another crocodile seen at Ananthapura Lake Temple
Discussion about this post