ಬೆಂಗಳೂರು : ಚಂದನವನದ ಡ್ರಗ್ಸ್ ದಂಧೆಯಲ್ಲಿ ನಿರೂಪಕಿ ಅನುಶ್ರೀ ಹೆಸರು ಈ ಹಿಂದೆಯೇ ಕೇಳಿ ಬಂದಿತ್ತು. ಈ ಸಂಬಂಧ ಮಂಗಳೂರು ಪೊಲೀಸರು ವಿಚಾರಣೆಯನ್ನೂ ನಡೆಸಿದ್ದರು. ಆದರೆ ಇದೀಗ ಜಾರ್ಜ್ ಶೀಟ್ ವಿವರಗಳು ಬಹಿರಂಗವಾಗಿದ್ದು ಅದರಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ.
ಇನ್ನು ಈ ಜಾರ್ಜ್ ಶೀಟ್ ನಲ್ಲಿ ಅನುಶ್ರೀ ಹೇಳಿಕೆ ದಾಖಲಾಗಿಲ್ಲ ಅನ್ನಲಾಗಿದ್ದು, ಉಳಿದ ಆರೋಪಿಗಳು ನೀಡಿದ ಹೇಳಿಕೆಯನ್ನು ಮಾತ್ರ ದಾಖಲಿಸಲಾಗಿದೆ. ಅದರಲ್ಲಿ ಅನುಶ್ರೀಯ ಹೆಸರು ಪ್ರಸ್ತಾಪವಾಗಿದೆ. ಮೇಲ್ನೋಟಕ್ಕೆ ಇದರಲ್ಲಿ ಅನುಶ್ರೀಯನ್ನು ರಕ್ಷಿಸುವ ಕೆಲಸ ನಡೆದಿದೆ ಎಂದು ತೋರುತ್ತಿದೆ. ಆದರೆ ಪೊಲೀಸರು ಅನುಶ್ರೀ ವಿರುದ್ಧ ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ ಅನ್ನುವ ಸಾಧ್ಯತೆಗಳಿದೆ. ಮಾತ್ರವಲ್ಲದೆ ಅನುಶ್ರೀಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸದಿರುವುದು, ಯಾವುದೇ ಮಾದರಿಗಳನ್ನು ಲ್ಯಾಬ್ ಗೆ ಕಳುಹಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಈ ನಡುವೆ ಪ್ರಕರಣ ಕುರಿತಂತೆ ಮಾತನಾಡಿರುವ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ, ಮಾಜಿ ಸಿಎಂ ಒಬ್ಬರು ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕಿದ್ದಾರೆ. ಗಾಂವ್ಕರ್ ಅನ್ನುವ ಪೊಲೀಸ್ ಅಧಿಕಾರಿಯ ಪಾತ್ರವೂ ಇದರಲ್ಲಿದೆ. ಹೀಗಾಗಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಸಂಬರಗಿ ಆಗ್ರಹಿಸಿದ್ದಾರೆ.
ಜೊತೆಗೆ ಅನುಶ್ರೀ ಆದಾಯ ಮೂಲ ಕೆದಕಿರುವ ಸಂಬರಗಿ, ಕೇವಲ ನಿರೂಪಣೆಯಿಂದ ಸಂಪಾದಿಸುವ ಹಣದಲ್ಲಿ ಅನುಶ್ರೀ ಇಷ್ಟೊಂದು ಆಸ್ತಿ ಮಾಡಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ 12 ಕೋಟಿ ಮನೆ, ಬೆಂಗಳೂರಿನಲ್ಲಿ ನಾಲ್ಕು ಕೋಟಿ ಮನೆ ಹೇಗೆ ಬಂತು. ಇವೆಲ್ಲವೂ ದುಡಿಮೆಯ ಹಣ ಅಂದ್ರೆ ನಂಬಲು ಸಾಧ್ಯವೇ ಅಂದಿದ್ದಾರೆ.
Anchor anushree 12 crore worth property in mangalore and 4 crore worth property in bengaluru prashanth sambargi
Discussion about this post