ಮಂಗಳೂರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿರುವ ಎಲ್ಲಾ ಆರೋಪಗಳು ಸುಳ್ಳಾಗಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ತನಿಖೆ ನಡೆದ್ರೆ ನಾನು ವಿಚಾರಣೆ ಎದುರಿಸಲು ಸಿದ್ದ ಎಂದು ನಟಿ, ನಿರೂಪಕಿ ಅನುಶ್ರೀ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು 12 ಕೋಟಿ ಆಸ್ತಿ ಮಂಗಳೂರಿನಲ್ಲಿ, 4 ಕೋಟಿ ಆಸ್ತಿ ಬೆಂಗಳೂರಿನಲ್ಲಿ ಅನ್ನುವ ಆರೋಪದಲ್ಲಿ ಹುರುಳಿಲ್ಲ. ಬೆಂಗಳೂರಿನಲ್ಲಿ ನಾನು ಬಾಡಿಗೆ ಮನೆಯಲ್ಲಿದ್ದೇನೆ. ಮಂಗಳೂರಿನಲ್ಲಿ ಆಸ್ತಿ ಇರುವುದು ನಿಜ. ಅದರ ಸಾಲವನ್ನು ಇನ್ನೂ ಕಟ್ಟುತ್ತಿದ್ದೇನೆ. ಕದ್ರಿ ಅನ್ನುವ ಪ್ರದೇಶದಲ್ಲಿ ಆ ಜಾಗವಿದೆ. ಆ ಜಾಗದ ಮೌಲ್ಯ ಎಷ್ಟಿದೆ ಆ ಆಸ್ತಿ ಹೇಗಿದೆ ಎಂದು ಯಾರು ಬೇಕಾದರೂ ನೋಡಿಕೊಂಡು ಬರಬಹುದು ಅಂದಿದ್ದಾರೆ.
ಇದೇ ವೇಳೆ ಮಾಧ್ಯಮಗಳ ವರದಿ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅನುಶ್ರೀ, ಯಾವುದೇ ಆರೋಪಗಳು ಬಂದ ತಕ್ಷಣ ನಾನು ಕುಗ್ಗಿ ಹೋಗುವುದಿಲ್ಲ, ಆದರೆ ನನ್ನ ತಾಯಿಗೆ 60 ವರ್ಷವಾಗಿದೆ. ಅವರ ಆರೋಗ್ಯದಲ್ಲಿ ಏರುಪೇರಾದ್ರೆ ಯಾರೇ ಆಗಿರಲಿ, ಯಾವನೇ ಆಗಿರಲಿ, ಎಷ್ಟು ಪ್ರಭಾವಶಾಲಿಯೇ ಆಗಿರಲಿ, ಸುಮ್ನೇ ಬಿಡೋದಿಲ್ಲ ಎಂದು ಭಾವುಕರಾಗಿದ್ದಾರೆ.
ಇದೇ ಸಂಬರಗಿ ಬಗ್ಗೆ ಮಾತನಾಡಿದ ಅನುಶ್ರೀ, ಬೆಂಗಳೂರಿಗೆ ಬಂದು ದಶಕಗಳೇ ಕಳೆಯಿತು. ಅವರು ಯಾರು ಅನ್ನುವುದು ನನಗೆ ಗೊತ್ತಿರಲಿಲ್ಲ. ಕಳೆದ ವರ್ಷ ನನ್ನ ಬಗ್ಗೆ ಮಾತನಾಡಿದ ವೇಳೆಯೇ ನನಗೆ ಗೊತ್ತಾಗಿದ್ದು. ಹೀಗಾಗಿ ನನ್ನ ಮೇಲೆ ಸಾವಿರ ಆರೋಪಗಳು ಬರುತ್ತಿರುತ್ತವೆ. ಎಲ್ಲದಕ್ಕೂ ಉತ್ತರಿಸಲು ಸಾಧ್ಯವಿಲ್ಲ. ಕಾನೂನಿಗೆ ತಲೆ ಬಾಗುವ ನಾನು, ಕಾನೂನು ಚೌಕಟ್ಟಿನಲ್ಲೇ ಉತ್ತರಿಸುತ್ತೇನೆ ಅಂದಿದ್ದಾರೆ.
Discussion about this post