ಬೆಂಗಳೂರು : ಬಸವರಾಜ್ ಬೊಮ್ಮಾಯಿ ಸಂಪುಟ ಸಚಿವರಿಗೆ ಖಾತೆ ಹಂಚಿದ ಬೆನ್ನಲ್ಲೇ ಅಸಮಾಧಾನ ಶುರುವಾಗಿದೆ. ಶಶಿಕಲಾ ಜೊಲ್ಲೆಯವರನ್ನು ಬೊಮ್ಮಾಯಿ ಸೈಡ್ ಲೈನ್ ಮಾಡಿದ್ದಾರೆ ಅನುಮಾನ ವ್ಯಕ್ತವಾಗಿದೆ. ಮತ್ತೊಂದು ಕಡೆ ಆನಂದ್ ಸಿಂಗ್ ಅಸಮಾಧಾನ ಹೊರಗೆ ಹಾಕಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿರುವ ಅವರು ಬಿಜೆಪಿ ಸರ್ಕಾರ ಬರುವ ಸಲುವಾಗಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಸಲುವಾಗಿ ಮೊದಲು ರಾಜೀನಾಮೆ ಕೊಟ್ಟವನೇ ನಾನು. ನಾನು ರಾಜೀನಾಮೆ ಕೊಟ್ಟ ಕಾರಣದಿಂದಲೇಸರಕ್ರಾ ರಚನೆಯಾಗಿದೆ.
ಈಗ ಖಾತೆ ಹಂಚುವಾಗ ನಾನು ಕೇಳಿರುವುದೇ ಒಂದು ಖಾತೆ ಕೊಟ್ಟಿರುವುದೇ ಒಂದು ಖಾತೆ ಹೀಗಾಗಿ ನನ್ನ ಖಾತೆ ಬದಲಾವಣೆ ಮಾಡಿ ಎಂದು ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಅಂದಿದ್ದಾರೆ. ಜೊತೆಗೆ ಕೇಳದ ಖಾತೆ ಕೊಡಿದಿದ್ರೆ ಶಾಸಕನಾಗಿ ಉಳಿಯುವುದೇ ಒಳಿತು ಅನ್ನುವುದು ನನ್ನ ನಿರ್ಧಾರ. ಹೀಗಾಗಿ ಬೊಮ್ಮಾಯಿ ಅವರಿಗೆ ಖಾತೆ ಬದಲಾವಣೆಗೆ ಮನವಿ ಮಾಡುತ್ತೇನೆ ಕೊಡದಿದ್ರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಅಂದಿದ್ದಾರೆ.
ಇನ್ನು ಆನಂದ್ ಸಿಂಗ್ ಅಸಮಾಧಾನ ಬಗ್ಗೆ ಮಾತನಾಡಿರುವ ಬಸವರಾಜ್ ಬೊಮ್ಮಾಯಿ, ಆನಂದ್ ಸಿಂಗ್ ನನ್ನ ಆತ್ಮೀಯ ಮಿತ್ರರು. ಹೀಗಾಗಿ ಅವರನ್ನು ಕರೆದು ಮಾತನಾಡುತ್ತೇನೆ ಅಂದಿದ್ದಾರೆ.
Discussion about this post