ಅಮೆಜಾನ್ ನದಿಯ ಒಡಲು ಒಣಗುತ್ತಿದೆ ನಮ್ಮೂರಿನ ಕಾವೇರಿ ಕೃಷ್ಣೆ ನೇತ್ರಾವತಿಯರ ಕಥೆಯೇನು
ಅಮೆಜಾನ್ ನದಿಯನ್ನು ಜಗತ್ತಿನ ರುದ್ರ ಭಯಾನಕ ನದಿ ಎಂದು ಕರೆಯಲಾಗುತ್ತದೆ. ಅದಕ್ಕೆ ಕಾರಣ ಅಮೆಜಾನ್ ನದಿಯ ನಡವಳಿಕೆ. ಅನಕೊಂಡದಂತಹ ಅಪಾಯಕಾರಿ ಹಾವುಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಅಮೆಜಾನ್ ಅನೇಕರ ಬದುಕಿಗೂ ದಾರಿ ಮಾಡಿಕೊಟ್ಟಿದೆ.
ವಿಶ್ವದ ಅತ್ಯಂತ ಉದ್ದವಾದ ನದಿ ಅಂದ್ರೆ ಅದು ನೈಲ್ ನದಿ ಎಂದು ಹೇಳಲಾಗುತ್ತದೆ. ಆದರೆ ಇಲ್ಲ ನೈಲ್ ನದಿಗಿಂತಲೂ ಅಮೆಜಾನ್ ನದಿಯೇ ಉದ್ಧ ಅನ್ನುವ ವಾದವೂ ಇದೆ. ವಾದ ಏನೇ ಇರಲಿ ಇದೀಗ ಅಮೆಜಾನ್ ನದಿಯ ಒಡಲು ಬರಿದಾಗತೊಡಗಿದೆ. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅಮೆಜಾನ್ ನದಿ ನೀರು ಬತ್ತಲಾರಂಭಿಸಿದೆ.
ಇದನ್ನೂ ಓದಿ : 21 ಕಿಮೀ ಉದ್ಧದ ಸೇತುವೆ ದಾಟಲು 250 ರೂ ಶುಲ್ಕ
ಹೀಗೆ ಅಮೆಜಾನ್ ನದಿ ಬರಕ್ಕೆ ತುತ್ತಾಗುತ್ತಿರುವ ಕಾರಣ ನದಿಯಲ್ಲಿರುವ ಡಾಲ್ಫಿನ್ ಸೇರಿದಂತೆ ಅನೇಕ ಜಲಚರಗಳು ಉಸಿರುಗಟ್ಟಿ ಸಾಯಲಾರಂಭಿಸಿದೆ. ನದಿಯನ್ನೇ ನಂಬಿ ಜೀವನ ನಡೆಸುತ್ತಿರುವ ನಾಗರಿಕರ ಮೇಲೂ ಇದು ಪರಿಣಾಮ ಬೀರಿದ್ದು, ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ನದಿಯ ನೀರಿನ ಉಷ್ಣತೆಯೂ ಹೆಚ್ಚುತ್ತಿದೆ ಎಂದು ಬಿಬಿಸಿ ವರದಿ ಮಾಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ತಜ್ಞರ ತಂಡವನ್ನು ಬ್ರೆಜಿಲ್ ಸರ್ಕಾರ ಈಗಾಗಲೇ ಕಳುಹಿಸಿಕೊಟ್ಟಿದೆ. ಸಾಯುತ್ತಿರುವ ಡಾಲ್ಫಿನ್ ಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಟನೆಗಳು ಹಗಲಿರುಳು ಶ್ರಮಿಸುತ್ತಿದೆ.
8/ Devastating Maui wildfires kill 100 people in one of deadliest wildfire in US history
— Martina Igini (@Martina_Igini) December 31, 2023
Climate change triggered rare drought conditions and water shortages that fuelled the fires. Over the last three decades, rainfall in Hawaii has decreased by 18%.
🔗https://t.co/QuRN6RzfRU pic.twitter.com/lMHyDj4bqj
ಅಮೆಜಾನ್ ನದಿಯಲ್ಲಿ ಬರಗಾಲಕ್ಕೆ ನದಿ ದಂಡೆಯ ಸುತ್ತ ಕಡಿಮೆ ಪ್ರಮಾಣ ಮಳೆ ಸುರಿದದ್ದೇ ಕಾರಣ ಅನ್ನಲಾಗಿದೆ. ಜೊತೆಗೆ ಅಮೆಜಾನ್ ನದಿ ಹರಿದು ಹೋಗುವ ಜಾಗಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣಿಗಾರಿಕೆಯೂ ತೀವ್ರಗೊಂಡಿದೆಯಂತೆ. ಇದರೊಂದಿಗೆ ಏರುತ್ತಿರುವ ತಾಪಮಾನ ಕೂಡಾ ನದಿಯ ಒಡಲಿಗೆ ಅಪಾಯ ತಂದೊಡ್ಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Discussion about this post