ಕನ್ನಡ ಧಾರವಾಹಿಗಳಲ್ಲಿ ಮದುವೆ ಸೀಸನ್ ಮುಗಿದಿದೆ. ರಿಯಲ್ ಮತ್ತು ರೀಲ್ ಮದುವೆಗಳ ಸಂಭ್ರಮವೂ ಮುಕ್ತಾಯಗೊಂಡಿದೆ. ಇನ್ನು ಕನ್ನಡತಿ ಸೇರಿದಂತೆ ಕೆಲ ಧಾರವಾಹಿಗಳಲ್ಲಿ ಅದ್ದೂರಿ ಮದುವಯನ್ನು ನಿರೀಕ್ಷಿಸಲಾಗುತ್ತಿದೆ. ಈ ನಡುವೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಆಕಾಶ ದೀಪ ಧಾರವಾಹಿಯಲ್ಲಿ ಅದ್ದೂರಿ ಮದುವೆಯೊಂದು ನಡೆಯಲಿದೆ.
ಈಗಾಗಲೇ ವಿಭಿನ್ನವಾಗಿ ಮೂಡಿ ಬರುತ್ತಿರುವ ಧಾರವಾಹಿಯಲ್ಲಿ, ಅಂಧನಾಗಿರುವ ಆಕಾಶನಿಗೆ ಯಾರು ಹೆಣ್ಣು ಕೊಡ್ತಾರೆ ಅನ್ನುವ ಕೊರಗು ಆಕಾಶ್ ತಾಯಿಯದ್ದು. ಈ ಕಾರಣಕ್ಕಾಗಿ ಬಾದಾಮಿ ಬನಶಂಕರಿಗೆ ಅವರು ಹರಕೆಯನ್ನು ಕೂಡಾ ಹೊತ್ತುಕೊಂಡಿದ್ದಾರೆ. ಇನ್ನು ಭಕ್ತಳೊಬ್ಬಳ ಕೋರಿಕೆಯನ್ನು ಮುಂದಾಗಿರುವ ಜಗನ್ಮಾತೆ ಆಕಾಶ್ ಗೆ ಕಂಕಣ ಭಾಗ್ಯ ಕರುಣಿಸಿದ್ದಾಳೆ.
ಹೌದು ಆಕಾಶ್ ಮತ್ತು ದೀಪಾ ಪ್ರೀತಿ ವಿಷಯ ಬಹಿರಂಗವಾಗಿದ್ದು, ಎರಡು ಕುಟುಂಬಗಳು ಸಂಬಂಧಕ್ಕೆ ಸೈ ಸಂದಿದೆ. ಹೀಗಾಗಿ ಜೊತೆ ಜೊತೆಯಲ್ಲಿ ಧಾರವಾಹಿಯ ಮದುವೆಯನ್ನು ಮೀರಿಸುವಂತೆ ಮದುವೆ ಕಾರ್ಯಕ್ರಮ ಆಯೋಜಿಸಲು ಸ್ಟಾರ್ ಪರಿವಾರ ನಿರ್ಧರಿಸಿದೆ.
ಈಗಾಗಲೇ ಈ ಕಾರ್ಯಗಳು ಪ್ರಾರಂಭಗೊಂಡಿದ್ದು ಮೆಹಂದಿ ಶಾಸ್ತ್ರದ ಶೂಟಿಂಗ್ ನಡೆಯುತ್ತಿದೆ. ಮದುವೆಗಾಗಿ ಸ್ಪೆಷಲ್ ಸೆಟ್ ಕೂಡಾ ಹಾಕಲಾಗುತ್ತಿದೆ. ಒಟ್ಟಿನಲ್ಲಿ ಕನ್ನಡ ಕಿರುತೆರೆ ವೀಕ್ಷಕರಿಗೆ ಮತ್ತೊಂದು ಮದುವೆ ಹಬ್ಬ ಬರಲಿದೆ.
Discussion about this post