ಬೆಂಗಳೂರು : ಕೊರೋನಾ ಸೋಂಕು ಸೋಲಿಸುವ ನಿಟ್ಟಿನಲ್ಲಿ ಲಸಿಕೆ ಬಂತು ಅಂದುಕೊಳ್ಳುವಷ್ಟರಲ್ಲಿ ದೇಶಿಯವಾಗಿ ತಯಾರಿಸಲಾದ ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಅಪಸ್ವರ ಎದ್ದಿತ್ತು. ಜನ ದೇಶಿಯ ಲಸಿಕೆಯನ್ನು ಅನುಮಾನದಿಂದಲೇ ನೋಡಲಾರಂಭಿಸಿದ್ದರು. ಆದರೆ ಸೀರಂ ಸಂಸ್ಥೆ ಉತ್ಪಾದಿಸಿದ ಕೋವಿಶೀಲ್ಡ್ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆಯ ಮಾತುಗಳಿತ್ತು. ತಜ್ಞರ ಪ್ರಕಾರ ಎರಡೂ ಲಸಿಕೆಯೂ ಒಂದೇ, ಎರಡೂ ಕೂಡಾ ತನ್ನದೇ ಆದ ಸಾಮರ್ಥ್ಯವನ್ನು ಹೊಂದಿದೆ.
ಈ ನಡುವೆ ಅದ್ಯಾವಾಗ ಪ್ರಧಾನಿ ನರೇಂದ್ರ ಮೋದಿ ಆಸ್ಪತ್ರೆಗೆ ಹೋಗಿ ಕೋವ್ಯಾಕ್ಸಿನ್ ಹಾಕಿಸಿಕೊಂಡು ಬಂದರೋ, ಜನ ಕೂಡಾ ಕೋವಿಶೀಲ್ಡ್ ಬೇಡ ಕೋವ್ಯಾಕ್ಸಿನ್ ಹಾಕಿ ಅನ್ನುತ್ತಿದ್ದಾರೆ. ಜೊತೆಗೆ ಅನೇಕ ಸೆಲಬ್ರೆಟಿಗಳು ಕೂಡಾ ಇದೇ ಲಸಿಕೆಯನ್ನು ಕೇಳಿ ಹಾಕಿಸಿಕೊಂಡಿದ್ದಾರೆ.
ಇನ್ನು ರಾಜ್ಯದಲ್ಲಿ ಕೋವ್ಯಾಕ್ಸಿನ್ ಲಸಿಕಿಗೆ ಅಷ್ಟೊಂದು ಬೇಡಿಕೆ ಇರಲಿಲ್ಲ. ರಾಜ್ಯದಲ್ಲಿ ಈವರೆಗೆ ಕೋವ್ಯಾಕ್ಸಿನ್ ಲಸಿಕೆಯ 5.08 ಡೋಸ್ ಗಳನ್ನ ನೀಡಲಾಗಿದೆ. ಕೋವಿಶೀಲ್ಡ್ 44.9 ಲಕ್ಷದ ಗಡಿ ದಾಟಿದೆ.
ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ ಶೇ65 ಜನ ಕೋವಾಕ್ಸಿನ್ ಲಸಿಕೆಗೆ ಬೇಡಿಕೆ ಇಡುತ್ತಿದ್ದಾರಂತೆ.
ಈ ಬೇಡಿಕೆ ಕುರಿತಂತೆ ಮಾತನಾಡಿರುವ ಕೊರೋನಾ ನಿಯಂತ್ರಣ ತಾಂತ್ರಿಕಾ ಸಲಹಾ ಸಮಿತಿ ಸದಸ್ಯರೊಬ್ಬರು, ಮೋದಿಯವರು ಹಾಕಿಸಿಕೊಂಡಿದ್ದಾರೆ ಅನ್ನುವ ಕಾರಣಕ್ಕಾಗಿ ಜನ ಬೇಡಿಕೆ ಇಟ್ಟಿರಬಹುದು. ಜೊತೆಗೆ ಅಸ್ಟ್ರಾಜೆನಿಕಾ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುತ್ತಿದೆ ಅನ್ನುವ ಸುದ್ದಿಗಳು ವಿದೇಶದಿಂದ ಬರುತ್ತಿದೆ. ಹೀಗಾಗಿ ಕೋವ್ಯಾಕ್ಸಿನ್ ಲಸಿಕೆಗೆ ಬೇಡಿಕೆ ಬಂದಿರಬಹುದು ಅನ್ನುವುದು ಅವರ ಅಭಿಪ್ರಾಯ.
Discussion about this post